Samsung Galaxy S25 5G Price Drop
ನಿಮಗೊಂದು ಲೇಟೆಸ್ಟ್ ಪ್ರೀಮಿಯಂ ಸ್ಯಾಮ್‌ಸಂಗ್ 5G ಸ್ಮಾರ್ಟ್ಫೋನ್ ತುಂಬ ದಿನಗಳಿಂದ ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ನಿಮ್ಮ ಕನಸನ್ನು ನನಸಾಗಿಸಲು ಅದ್ದೂರಿಯ ಡೀಲ್ ಅನ್ನು ನಿಮ್ಮ ಮುಂದೆ ನೀಡುತ್ತಿದೆ. ಹೌದು, ಅಮೆಜಾನ್ ಈಗ ಲಿಮಿಟೆಡ್ ಸಮಯಕ್ಕೆ Samsung Galaxy S25 5G ಸ್ಮಾರ್ಟ್ಫೋನ್ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ.
ನಿಮಗೆ ಈ Samsung Galaxy S25 5G ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 15,000 ರೂಗಳ ಡಿಸ್ಕೌಂಟ್ ನೀಡುತ್ತಿರುವ ಈ ಸ್ಮಾರ್ಟ್ಫೋನ್ ಅಲ್ಲ ಡಿಸ್ಕೌಂಟ್ ನಂತರ ಆರಂಭಿಕ ಸುಮಾರು 60,000 ರೂಗಳೊಳಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಟಾಪ್ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
ಈ ಜಬರ್ದಸ್ತ್ Samsung Galaxy S25 5G ಸ್ಮಾರ್ಟ್ಫೋನ್ ಆರಂಭದಲ್ಲಿ 12GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ ಸಾಮಾನ್ಯವಾಗಿ 74,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಕಂಪನಿ ಪ್ರಸ್ತುತ ಲಿಮಿಟೆಡ್ ಸಮಯಕ್ಕೆ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ಫೋನ್ ಅಮೆಜಾನ್ ವೆಬ್‌ಸೈಟ್‌ನಲ್ಲಿ ನೇರವಾಗಿ ರೂ. 15,000 ರಿಯಾಯಿತಿಯೊಂದಿಗೆ ಲಭ್ಯವಿದೆ.
ಇದರಲ್ಲಿ ಬ್ಯಾಂಕ್ ಡಿಸ್ಕೌಂಟ್ ಮತ್ತು ವಿನಿಮಯ ಡಿಸ್ಕೌಂಟ್ ಸೇರಿದೆ. Samsung Galaxy S25 5G ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್ ಅಡಿಯಲ್ಲಿ ನೀವು HDFC ಸಿರ್ತೆಡಿತ್ ಕಾರ್ಡ್ ಬಳಸಿಕೊಂಡು ಸುಮಾರು 7000 ರೂಗಳವರೆಗೆ ಡಿಸ್ಕೌಂಟ್ ಪಡೆದರೆ ಹೆಚ್ಚುವರಿಯಾಗಿ 8000 ರೂಗಳ ವಿನಿಮಯ ಬೋನಸ್ ಸಹ ನೀಡುತ್ತಿದೆ. ಇದನ್ನು ಅಮೆಜಾನ್ ಲಿಮಿಟೆಡ್ ಸಮಯಕ್ಕೆ ನೀಡುತ್ತಿದ್ದು ಈ ಜಬರ್ದಸ್ತ್ ಆಫರ್ ನಿಮ್ಮ ಕೈ ಜಾರುವ ಮೊದಲು ಇಂದೇ ಮೊದಲು ಖರೀದಿಸಿಕೊಳ್ಳಿ.
ಇದನ್ನೂ ಓದಿ: ಮುಂಬರಲಿರುವ Vivo T4 Ultra ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
Samsung Galaxy S25 ಸ್ಮಾರ್ಟ್ಫೋನ್ 6.15 ಇಂಚಿನ FHD+ ಡೈನಾಮಿಕ್ AMOLED 2X ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಜೊತೆಗೆ 2600 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ. ಇದು ಫಾಸ್ಟ್ ಅನ್‌ಲಾಕಿಂಗ್‌ಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ.
ಹುಡ್ ಅಡಿಯಲ್ಲಿ ಹ್ಯಾಂಡ್‌ಸೆಟ್ ಇತ್ತೀಚಿನ Qualcomm Snapdragon 8 Elite ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 512GB ವರೆಗಿನ ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ. ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು ಇದು 45W ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್ಫೋನ್ ಫೋಟೋಗ್ರಾಫಿಯಲ್ಲಿ ಅತ್ಯತ್ತಮ ಸೆನ್ಸರ್‌ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP ಪ್ರೈಮರಿ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 10MP ಟೆಲಿಫೋಟೋ ಕ್ಯಾಮೆರಾ ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಇದು 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Samsung Galaxy S25 ಸ್ಮಾರ್ಟ್ಫೋನ್ ವರ್ಧಿತ ಬಳಕೆದಾರ ಅನುಭವಕ್ಕಾಗಿ ಗ್ಯಾಲಕ್ಸಿ AI ಸಾಮರ್ಥ್ಯಗಳನ್ನು ಸಹ ಒಳಗೊಂಡಿದೆ.