Samsung Galaxy M56 5G Launched in India
Samsung Galaxy M56 5G Launched in India: ಇಂದು ಭಾರತದಲ್ಲಿ ಸ್ಯಾಮ್‌ಸಂಗ್‌ನ ಪವರ್ಫುಲ್ ಸ್ಮಾರ್ಟ್ಫೋನ್ ಬಿಡುಗಡೆಯಾಗಿದ್ದು ಸ್ಮಾರ್ಟ್ಫೋನ್ ಇಂದು ಅಂದ್ರೆ 17ನೇ ಏಪ್ರಿಲ್ 2025 ರಂದು ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ. ನೀವು ಸ್ಯಾಮ್‌ಸಂಗ್ ಫ್ಯಾನ್ ಆಗಿದ್ದು ನಿಮಗೊಂದು ಜಬರ್ದಸ್ತ್ ಫೀಚರ್ಗಳೊಂದಿಗೆ ಆರಂಭಿಕ 128GB ಸ್ಟೋರೇಜ್ ಬ್ಯಾಂಕ್ ಆಫರ್ ಜೊತೆಗೆ 21,999 ರೂಗಳಿಗೆ ಪರಿಚಯಿಸಿದೆ. Samsung Galaxy M56 5G ಸ್ಮಾರ್ಟ್ಫೋನ್ ವಿಶೇಷತೆಗಳ ಬಗ್ಗೆ ಮಾತನಾಡುವುದದಾದ್ರೆ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಮತ್ತು ದೊಡ್ಡ ಡಿಸ್ಪ್ಲೇ ಮತ್ತು ಬ್ಯಾಟರಿಯೊಂದಿಗೆ ಡಿಸೆಂಟ್ ಪ್ರೊಸೆಸರ್ನೊಂದಿಗೆ ಬರುತ್ತದೆ.
ಜಬರ್ದಸ್ತ್ ಆಫರ್ ಮತ್ತು ಪ್ರಯೋನಗಳನ್ನು ಆನಂದಿಸಲು ಇಂದೇ Amazon Prime ಮೇಲೆ ಕ್ಲಿಕ್ ಮಾಡಿ
Samsung Galaxy M56 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹27,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹29,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು HDFC ಬ್ಯಾಂಕ್ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಹೆಚ್ಚುವರಿ 3000 ರೂಗಳ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಈ ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಕೇವಲ 24,999 ರೂಗಳಿಗೆ 23ನೇ ಏಪ್ರಿಲ್ 2025 ರಿಂದ ಅಮೆಜಾನ್ ಮೂಲಕ ಖರೀದಿಸಬಹುದು.
Samsung Galaxy M56 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.55 ಇಂಚಿನ Super AMOLED Plus (1080 x 2340 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಬರುತ್ತದೆ.
ಮತ್ತೊಂದು 8MP ಅಲ್ಟ್ರಾ ವೈಡ್ ಲೆನ್ಸ್ ಮತ್ತು ಕೊನೆಯದಾಗಿ ಇದರ 2MP ಡೆಪ್ತ್ ಸೆನ್ಸರ್ ಹೊಂದಿದೆ. ಇದರ ಕ್ರಮವಾಗಿ Samsung Galaxy M56 5G ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 12MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ ರೇಟಿಂಗ್ ಅನ್ನು ಸಹ ಹೊಂದಿದೆ.
Samsung Galaxy M56 5G ಸ್ಮಾರ್ಟ್ಫೋನ್ ತನ್ನದೆಯಾದ Samsung Exynos 1480 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ ಆರಂಭಿಕ 8GB RAM ಆನ್‌ಬೋರ್ಡ್ ಮೆಮೊರಿಯನ್ನು ಹೊಂದಿದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 45W fast ಪ್ಯಾಕ್ ಮಾಡುತ್ತದೆ.
Also Read: Free Amazon Prime: ಉಚಿತ ಅಮೆಜಾನ್ ಪ್ರೈಮ್ ಬೇಕಿದ್ದರೆ Jio, Airtel ಮತ್ತು Vi ಗ್ರಾಹಕರು ಈ ರೀಛಾರ್ಜ್ ಮಾಡಿಕೊಳ್ಳಿ ಸಾಕು!