Samsung Galaxy M35 5G
ನೀವು ಪವರ್ಫುಲ್ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಲು ಬಯಸುತ್ತಿದ್ದರೆ ಸ್ಯಾಮ್‌ಸಂಗ್ ನಿಮಗೊಂದು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣಕ್ಕೆ ತಕ್ಕ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿರುವ ಈ Samsung Galaxy M35 5G ಸ್ಮಾರ್ಟ್ ಫೋನ್ ಇದರ ದೊಡ್ಡ ಬ್ಯಾಟರಿ, ಅತ್ಯುತ್ತಮ ಡಿಸ್‌ಪ್ಲೇ ಮತ್ತು ಉತ್ತಮ ಕಾರ್ಯಕ್ಷಮತೆಯೊಂದಿಗೆ ಜಬರ್ದಸ್ತ್ ಡೀಲ್ ಇದಾಗಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿಯಾಗಿರುವ ಈ ಸ್ಮಾರ್ಟ್ ಫೋನ್ ಅತ್ಯಂತ ಕಡಿಮೆ ಬೆಲೆಗೆ ಲಿಸ್ಟ್ ಆಗಿದೆ. ಆದ್ದರಿಂದ ಸ್ಟಾಕ್ ಖಾಲಿಯಾಗುವ ಮೊದಲು ಅದನ್ನು ಪಡೆಯುವ ಸುವರ್ಣಾವಕಾಶ ಇಲ್ಲಿದೆ. ಈ ಸ್ಮಾರ್ಟ್ ಫೋನ್ ಪ್ರೀಮಿಯಂ ಫೀಚರ್ಗಳೊಂದಿಗೆ ದೊಡ್ಡ ಬ್ಯಾಟರಿ ಬ್ಯಾಕಪ್ ಮತ್ತು ಸ್ಯಾಮ್‌ಸಂಗ್‌ನ ಸಾಫ್ಟ್‌ವೇರ್ ವಿಶ್ವಾಸಾರ್ಹತೆಯ ಸಂಯೋಜನೆ ಸುಮಾರು ₹15,000 ಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದು.
ನೀವು ನಿಮ್ಮ ಜೇಬಿನಲ್ಲಿ ಯಾವುದೇ ಗೊಂದಲವಿಲ್ಲದೆ ಶಕ್ತಿಶಾಲಿ 5G ಸ್ಮಾರ್ಟ್‌ಫೋನ್ ಪಡೆಯಲು ಕಾಯುತ್ತಿದ್ದರೆ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 ಈಗ ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಪ್ರಸ್ತುತ ಕಾರ್ಯಕ್ಷಮತೆ, ಕ್ಯಾಮೆರಾ ಗುಣಮಟ್ಟ ಮತ್ತು ಬ್ಯಾಟರಿ ಬಾಳಿಕೆಯ ಪರಿಪೂರ್ಣ ಸಮತೋಲನದೊಂದಿಗೆ ನೀವು ತಪ್ಪಿಸಿಕೊಳ್ಳಲು ಬಯಸದ ಡೀಲ್ ಇದು. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 ಸ್ಯಾಮ್‌ಸಂಗ್‌ನ ವಿಶ್ವಾಸಾರ್ಹ ನಿರ್ಮಾಣ ಗುಣಮಟ್ಟ ಮತ್ತು ಪ್ರಭಾವಶಾಲಿ ವಿಶೇಷಣಗಳನ್ನು ಒಳಗೊಂಡಿದೆ. ಇದು ₹15,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಎದ್ದು ಕಾಣುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದಾದ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ಪರಿಶೀಲಿಸಲು ಮರೆಯಬೇಡಿ.
ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಹೆಚ್ಚಾಗಿ ಮರಾಟವಾಗುತ್ತಿರುವ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಮಾದರಿ ₹15,779 ರೂಗಳಿಗೆ ಪಟ್ಟಿಯಾಗಿದ್ದು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಮಾದರಿ ₹17,899 ರೂಗಳಿಗೆ ಪಟ್ಟಿಯಾಗಿದ್ದು ಇದರ ಕೊನೆಯದ ವೇರಿಯಂಟ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರ ₹21,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ Axis Bank Flipkart Debit Card ಹೊಂದಿದ್ದರೆ ಸುಮಾರು 750 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು. ಈ ಮೂಲಕ ಸ್ಮಾರ್ಟ್ಫೋನ್ ಆರಂಭಿಕ ಸುಮಾರು ₹15,029 ರೂಗಳಿಗೆ ಖರೀದಿಸಬಹುದು.
Also Read: Kantara: Chapter 1 ರಿಷಬ್ ಶೆಟ್ಟಿಗೆ ಜೋಡಿಯಾದ ರುಕ್ಮಿಣಿ ವಸಂತಳ ಫಸ್ಟ್ ಲುಕ್ ರಿಲೀಸ್
Samsung Galaxy M35 5G ಸ್ಮಾರ್ಟ್ಫೋನ್ 6.6 ಇಂಚಿನ FHD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು Exynos 1380 ಪ್ರೊಸೆಸರ್ ಮತ್ತು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಬೃಹತ್ 6000mAh ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಫೋಟೋಗಾಗಿ ಇದು ಶೇಕ್-ಫ್ರೀ ಶಾಟ್‌ಗಳಿಗಾಗಿ OIS ಹೊಂದಿರುವ 50MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿದೆ.
ಈ ಫೋನ್ ಆರಂಭಿಕ 6GB ವರೆಗಿನ RAM ಮತ್ತು 128GB ಸ್ಟೋರೇಜ್ ಅನ್ನು ಹೆಚ್ಚುವರಿಯ ವಿಸ್ತರಿಸಬಹುದಾದ ಸ್ಟೋರೇಜ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯನ್ನು ಒಳಗೊಂಡಿರುವ ಬಾಳಿಕೆ ಬರುವ ವಿನ್ಯಾಸದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 14 ಔಟ್ ಆಫ್ ದಿ ಬಾಕ್ಸ್ ನಲ್ಲಿ ರನ್ ಆಗುತ್ತದೆ. ಇದು ₹15,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಎದ್ದು ಕಾಣುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದಾದ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ಪರಿಶೀಲಿಸಲು ಮರೆಯಬೇಡಿ.