Samsung Galaxy M16 5G ಮತ್ತು Samsung Galaxy M06 5G ಫೋನ್ಗಳ ಬಿಡುಗಡೆ ಮಾಹಿತಿ ನೀಡಿದ ಸ್ಯಾಮ್‌ಸಂಗ್‌!

Updated on 24-Feb-2025
HIGHLIGHTS

ಭಾರತದಲ್ಲಿ ಸ್ಯಾಮ್‌ಸಂಗ್‌ ಎರಡು ಬಜೆಟ್ 5G ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಮುಂಬರಲಿರುವ Samsung Galaxy M16 5G ಮತ್ತು Samsung Galaxy M06 5G ಸ್ಮಾರ್ಟ್ಫೋನ್ಗಳು

M ಸರಣಿಯಲ್ಲಿನ ಈ ಎರಡು ಸ್ಯಾಮ್‌ಸಂಗ್‌ 5G ಫೋನ್ಗಳಲ್ಲಿ 6000mAh ಬ್ಯಾಟರಿಯನ್ನು ನಿರೀಕ್ಷಿಸಬಹುದು.

ಭಾರತದಲ್ಲಿ ಸ್ಯಾಮ್‌ಸಂಗ್‌ ತನ್ನ ಮುಂಬರಲಿರುವ ಎರಡು ಬಜೆಟ್ 5G ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಸೇರಿಸಲು ಸಜ್ಜಾಗಿದೆ. ಈ ಬಾರಿ ಕಂಪನಿ M ಸರಣಿಯಲ್ಲಿ ಪರಿಚಯಿಸಲಿದ್ದು ಪ್ರಸ್ತುತ ಇದರ ಬಗ್ಗೆ ಸ್ಯಾಮ್‌ಸಂಗ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟೀಸರ್ ಪೋಸ್ಟ್ ಸಹ ಮಾಡಿದೆ. ಮುಂಬರಲಿರುವ ಸ್ಯಾಮ್‌ಸಂಗ್‌ನ ಈ ಎರಡು Samsung Galaxy M16 5G ಮತ್ತು Samsung Galaxy M06 5G ಬಜೆಟ್ ಸ್ಮಾರ್ಟ್ಫೋನ್ಗಳಲ್ಲಿ 6000mAh ಬ್ಯಾಟರಿಯೊಂದಿಗೆ ಸುಮಾರು 15,000 ರೂಗಳೊಳಗೆ ನಿರೀಕ್ಷಿಸಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ಗಳ ಬಗ್ಗೆ ಈವರೆಗೆ ಲಭ್ಯವಿರುವ ಮಾಹಿತಿಗಳೊಂದಿಗೆ ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು ಎಲ್ಲವನ್ನು ಈ ಕೆಳಗೆ ಪಡೆಯಬಹುದು.

Samsung Galaxy M16 5G ಮತ್ತು Samsung Galaxy M06 5G ವಿವರಗಳು:

ಪ್ರಸ್ತುತ ಸ್ಮಾರ್ಟ್ಫೋನ್ಗಳ ಬಗ್ಗೆ ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿರುವ ಪೋಸ್ಟ್ ಆಧಾರದ ಮೇರೆಗೆ ಈ ಎರಡು ಸ್ಮಾರ್ಟ್ಫೋನ್ಗಳು ದೊಡ್ಡ ಬ್ಯಾಟರಿಯೊಂದಿಗೆ ಬರುವುದನ್ನು ಖಚಿತಪಡಿಸುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ಗಳ ಅಧಿಕೃತ ಬಿಡುಗಡೆಯ ಡೇಟ್ ಅನ್ನು ಇನ್ನೂ ಕಂಫಾರ್ಮ್ ಆಗಬೇಕಿದೆ. ಅಲ್ಲದೆ ಕಂಪನಿ ಸ್ಮಾರ್ಟ್ಫೋನ್ ಕ್ಯಾಮೆರಾ ಲುಕ್ ಹೊರೆತು ಪಡಿಸಿ ಬೇರೆ ಯಾವುದೇ ಯಾವುದೇ ಫೀಚರ್ಗಳನ್ನು ನೀಡಿಲ್ಲ ಆದರೆ ಆಂಡ್ರಾಯ್ಡ್ ಹೆಡ್ಲೈನ್ (@Androidheadline) ವರದಿಗಳ ಪ್ರಕಾರ ಮಾತನಾಡವುದಾದರೆ ಈ ಸ್ಮಾರ್ಟ್ಫೋನ್ ಫಸ್ಟ್ ಇಮೇಜ್ ಸಹ ಅಪ್ಲೋಡ್ ಮಾಡಲಾಗಿದ್ದು ಅದರ ಒಂದು ಝಲಕ್ ಈ ಕೆಳಗೆ ಪಡೆಯಬವುದಾಗಿದೆ.

ಈ ಹಿಂದೆ ಈ Samsung Galaxy M16 5G ಮತ್ತು Samsung Galaxy M06 5G ಸ್ಮಾರ್ಟ್ಫೋನ್ಗಳ ಟೆಸ್ಟಿಂಗ್ ಮತ್ತು ರಿಜಿಸ್ಟರ್ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದನ್ನು ನೀವು ಗಮನಿಸಿರಬಹುದು. ಒಟ್ಟಾರೆಯಾಗಿ ಈ ಎರಡು ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಅತಿ ಶೀಘ್ರದಲ್ಲಿ ಬಜೆಟ್ ವಿಭಾಗದಲ್ಲಿ ಬಿಡುಗಡೆಯಾಗಲಿರುವ ಬಗ್ಗೆ ಕಂಪನಿ ಪ್ರೊಮೋಷನ್ ಪೋಸ್ಟರ್ ಅನ್ನು ಅಮೆಜಾನ್ ಇಂಡಿಯಾದ ಸೈಟ್ ಮೂಲಕ ನೀಡಿ ಈ ಎರಡು Samsung Galaxy M16 5G ಮತ್ತು Samsung Galaxy M06 5G ಸ್ಮಾರ್ಟ್ಫೋನ್ಗಳ ಬಿಡುಗಡೆ ಮತ್ತು ಮಾರಾಟದ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದೆ.

Also Read: ಬರೋಬ್ಬರಿ 40 ಇಂಚಿನ ಲೇಟೆಸ್ಟ್ Smart TVs ಮೇಲೆ ಅದ್ದೂರಿಯ ಡೀಲ್ ಮತ್ತು ಐಕೌಂಟ್ ನೀಡುತ್ತಿರುವ ಅಮೆಜಾನ್!

Samsung Galaxy M16 5G ಮತ್ತು Samsung Galaxy M06 5G ನಿರೀಕ್ಷಿತ ಬೆಲೆ

ಈ ಎರಡು ಸ್ಮಾರ್ಟ್ಫೋನ್ಗಳ ನಿರೀಕ್ಷಿತ ಬೆಲೆಯ ಬಗ್ಗೆ ಮಾತನಾಡುವುದಾದರೆ ಮೊದಲಿಗೆ Samsung Galaxy M16 5G ಸ್ಮಾರ್ಟ್ಫೋನ್ ಎರಡು ರೂಪಾಂತರದಲ್ಲಿ ನಿರೀಕ್ಷಿಸಲಾಗಿದ್ದು ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 12,999 ರೂಗಳಿಗೆ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 14,999 ರೂಗಳಿಗೆ ನಿರೀಕ್ಷಿಸಲಾಗಿದೆ.

Samsung Galaxy M16 5G and Samsung Galaxy M06 5G

ಇದರ ಕ್ರಮವಾಗಿ Samsung Galaxy M06 5G ಸ್ಮಾರ್ಟ್ಫೋನ್ ಸಹ ಎರಡು ರೂಪಾಂತರದಲ್ಲಿ ನಿರೀಕ್ಷಿಸಲಾಗಿದ್ದು ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಬೆಲೆಯನ್ನು ಸುಮಾರು 11,999 ರೂಗಳಿಗೆ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 12,499 ರೂಗಳಿಗೆ ನಿರೀಕ್ಷಿಸಲಾಗಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಅಮೆಜಾನ್ ಮೂಲಕ ಮಾರಾಟಕ್ಕೆ ಲಭ್ಯವಿರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :