Samsung Galaxy M10 ಮತ್ತು M20 ಭಾರತದಲ್ಲಿ ಬಿಡುಗಡೆ: ಬೆಲೆ, ಲಭ್ಯತೆ, ಸ್ಪೆಸಿಫಿಕೇಷನ್ ಮತ್ತು ಫೀಚರ್ಗಳು ಇಲ್ಲಿವೆ.

Updated on 29-Jan-2019
HIGHLIGHTS

ಭಾರತದ ಇಂದಿನ ಯುವ ಪೀಳಿಗೆಗಾಗಿ ಈ ಗ್ಯಾಲಕ್ಸಿ ಎಮ್ ಸರಣಿಯನ್ನು ದೇಶದಲ್ಲಿ ವಿನ್ಯಾಸಗೊಳಿಸಲಾಗಿದೆ'ಎಂದು ಹೇಳಿದೆ.

ಸ್ಯಾಮ್ಸಂಗ್ ಅಂತಿಮವಾಗಿ ಅದರ ಹೊಸ ಗ್ಯಾಲಕ್ಸಿ M ತಂಡವನ್ನು ಜಗತ್ತಿಗೆ ಪರಿಚಯಿಸಿದೆ. Samsung Galaxy M10 ಮತ್ತು M20 ಎಂಬ ಹೆಸರಿನ ಗ್ಯಾಲಕ್ಸಿ M ಸರಣಿಯಲ್ಲಿ ಭಾರತವು ತನ್ನ ಮೊದಲ ಎರಡು ಸ್ಮಾರ್ಟ್ ಫೋನ್ಗಳನ್ನು ಪ್ರಾರಂಭಿಸಿದೆ. ಇವುಗಳ ದೊಡ್ಡ ವಿಶಿಷ್ಟ ಲಕ್ಷಣವೆಂದರೆ ಇನ್ಫಿನಿಟಿ ವಿ ಡಿಸ್ಪ್ಲೇ ವಿನ್ಯಾಸದೊಂದಿಗೆ ಬರುತ್ತದೆ. ಮತ್ತು ವಾಟರ್ಡ್ರಾಪ್ ಶೈಲಿಯ ಸ್ಕ್ರೀನ್ ಹೊಂದಿವೆ. 

ಸ್ಯಾಮ್ಸಂಗ್ 'ಭಾರತದ ಇಂದಿನ ಯುವ ಪೀಳಿಗೆಗಾಗಿ ಈ ಗ್ಯಾಲಕ್ಸಿ ಎಮ್ ಸರಣಿಯನ್ನು ದೇಶದಲ್ಲಿ ವಿನ್ಯಾಸಗೊಳಿಸಲಾಗಿದೆ'ಎಂದು ಹೇಳಿದೆ. ಈ ಎರಡು ಫೋನ್ಗಳು ಎರಡು ವಿಭಿನ್ನ ರೂಪಾಂತರಗಳಲ್ಲಿ ಬರುತ್ತವೆ. Galaxy M10 ನಿಮಗೆ 2GB ಯ RAM ಮತ್ತು 16GB ಯ ಸ್ಟೋರೇಜ್ ರೂಪಾಂತರಕ್ಕಾಗಿ 7,990 ರೂಗಳು. ಮತ್ತು ಇದರ 3GB ಯ RAM ಮತ್ತು 32GB ಯ ಸ್ಟೋರೇಜ್ ರೂಪಾಂತರ 8,990 ರೂಗಳಲ್ಲಿ ಲಭ್ಯವಿದೆ.

ಅದೇ ರೀತಿ Galaxy M20 ಫೋನ್ ಸಹ 3GB+32GB ವೆರಿಯಂಟ್ ಕೇವಲ 10,990 ರೂಗಳಲ್ಲಿ ಬಂದ್ರೆ ಇದರ ಮತ್ತೊಂದು ವೇರಿಯಂಟ್ 4GB + 64GB ಸ್ಟೋರೇಜ್ 12,990 ರೂಗಳಲ್ಲಿ ಲಭ್ಯವಾಗುತ್ತದೆ. ಇವೇರಡು ಫೋನ್ಗಳು ಫೆಬ್ರವರಿ 5 ರಿಂದ ಅಮೆಜಾನ್ ಇಂಡಿಯಾ ಮತ್ತು ಸ್ಯಾಮ್ಸಂಗ್ನ ಸ್ವಂತ ಆನ್ಲೈನ್ ಸ್ಟೋರ್ಗಳಲ್ಲಿ ಲಭ್ಯವಿರುತ್ತವೆ. ಇವುಗಳು ಓಷನ್ ಬ್ಲೂ ಮತ್ತು ಚಾರ್ಕೋಲ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತವೆ.

Galaxy M10 ಸ್ಮಾರ್ಟ್ಫೋನ್ ನಿಮಗೆ 6.2 ಇಂಚಿನ HD+ ಇನ್ಫಿನಿಟಿ ವಿ ಡಿಸ್ಪ್ಲೇಯನ್ನು ಹೊಂದಿದೆ. ಅದೇ ರೀತಿ ಆದರೆ Galaxy M20 ಸಹ ಫುಲ್- HD+ 6.3 ಇಂಚಿನ ಇನ್ಫಿನಿಟಿ- V ಡಿಸ್ಪ್ಲೇಯೊಂದಿದೆ ಬರುತ್ತದೆ. ಆಂತರಿಕವಾಗಿ Galaxy M10 ಎಕ್ಸ್ನೊಸ್ 7870 ಆಕ್ಟಾ ಕೋರ್ ಪ್ರೊಸೆಸರ್ನಿಂದ ಶಕ್ತಿಯನ್ನು ಹೊಂದಿದೆ. ಈ ಎರಡೂ ಫೋನ್ಗಳು ಮೈಕ್ರೊ ಎಸ್ಡಿ ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ.

ಮತ್ತೊಂದೆಡೆ ಸ್ಯಾಮ್ಸಂಗ್ Galaxy M20 ಇತ್ತೀಚಿನ ಎಕ್ಸ್ನೊಸ್ 7904 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಬಳಸುತ್ತದೆ. ಇದು ಅತ್ಯುತ್ತಮವಾದ ನೆಟ್ವರ್ಕ್ ವೇಗ, ಮಲ್ಟಿಟಾಸ್ಕಿಂಗ್ ಮತ್ತು ಕಡಿಮೆ ಪವರ್ ಬಳಕೆಯಿಂದ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ. Galaxy M10 ನಲ್ಲಿ ನಿಮಗೆ 3400mAh ನೀಡಿದರೆ Galaxy M20 ನಲ್ಲಿ ನಿಮಗೆ 3400mAh ಬ್ಯಾಟರಿಯನ್ನು ಹೊಂದಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :