Samsung Galaxy F06 5G First Sale
Samsung Galaxy F06 5G First Sale: ಭಾರತದಲ್ಲಿ ಇಂದು ಸ್ಯಾಮ್‌ಸಂಗ್ ತನ್ನ ಲೇಟೆಸ್ಟ್ Samsung Galaxy F06 5G ಸ್ಮಾರ್ಟ್ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಿದ್ದು ಆರಂಭಿಕ 6GB ರೂಪಾಂತರ ಆಫರ್ಗಳೊಂದಿಗೆ ಕೇವಲ ₹9,999 ರೂಪಾಯಿಗೆ ಲಭ್ಯವಿದೆ. One UI 7.0 ಜೊತೆಗಿನ ಈ Samsung Galaxy F06 5G ಸ್ಮಾರ್ಟ್ಫೋನ್ ವಿಶೇಷಣಗಳನ್ನು ನೋಡುವುದಾದರೆ 50MP ಕ್ಯಾಮೆರಾ, Dimensity 6300 ಮತ್ತು 5000mAh ಬ್ಯಾಟರಿಯಾಗಿದೆ. ಹಾಗಾದ್ರೆ ಇದರ ಫಸ್ಟ್ ಸೇಲ್ ಆಫರ್ ಬೆಲೆಯೊಂದಿಗೆ ಹೆಚ್ಚುವರಿಯ ಫೀಚರ್ಗಳೇನು ತಿಳಿಯಿರಿ.
ಈ Samsung Galaxy F06 5G ಸ್ಮಾರ್ಟ್ಫೋನ್ ಇಂದು ಅಂದ್ರೆ 20ನೇ ಫೆಬ್ರವರಿ 2025 ರಂದು ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್‌ಕಾರ್ಟ್ ಮೂಲಕ ಮೊದಲ ಮಾರಾಟಕ್ಕೆ ಕಾಲಿಟ್ಟಿದೆ. ಈ ಹ್ಯಾಂಡ್‌ಸೆಟ್‌ನ ಬೆಲೆ ಮೂಲ 4GB RAM ಮತ್ತು 64GB ಮಾದರಿಗೆ ರೂ 9,999 ರಿಂದ ಪ್ರಾರಂಭವಾಗಲಿದೆ.
ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಕಾನ್ಫಿಗರೇಶನ್ ರೂ 11,499 ವೆಚ್ಚವಾಗಲಿದೆ. ಹೆಚ್ಚುವರಿಯಾಗಿ ಗ್ರಾಹಕರು 500 ರೂ.ಗಳ ಕ್ಯಾಶ್ ಬ್ಯಾಕ್ ಪಡೆಯಬಹುದು. ಇದಲ್ಲದೆ, ಫ್ಲಿಪ್ ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 975 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತಿದೆ. ಬಹಾಮಾ ಬ್ಲೂ ಮತ್ತು ಲಿಟ್ ವೈಲೆಟ್ ಬಣ್ಣಗಳಲ್ಲಿಯೂ ಇದನ್ನು ನೀಡಲಾಗುತ್ತದೆ.
Also Read: IPL Tickets Online 2025: ಈ ಬಾರಿಯ ಐಪಿಎಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ ತಿಳಿಯಿರಿ!
ಈ ಹೊಸ Samsung Galaxy F06 5G ಸ್ಮಾರ್ಟ್ಫೋನ್ 6.7 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು HD+ ರೆಸಲ್ಯೂಶನ್ ಮತ್ತು ಸ್ಟ್ಯಾಂಡರ್ಡ್ 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರಲ್ಲಿ ನಿಮಗೆ 50MP ಪ್ರೈಮರಿ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್‌ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.
Samsung Galaxy F06 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ One UI 7.0 ಆವೃತ್ತಿಯೊಂದಿಗೆ 4 ವರ್ಷಗಳ ಭದ್ರತಾ ಮತ್ತು 4 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್‌ಗಳನ್ನು ನೀಡುವ ಭರವಸೆ ನೀಡುತ್ತದೆ. ಫೋನ್ MediaTek Dimensity 6300 5G ಚಿಪ್‌ಸೆಟ್‌ನಿಂದ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಚಾಲಿತವಾಗಿದೆ. ಫೋನ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಬದಿಯಲ್ಲಿರುವ ಪವರ್ ಬಟನ್‌ನಲ್ಲಿ ನಿರ್ಮಿಸಲಾಗಿದೆ.