ಭಾರತದಲ್ಲಿ Samsung Galaxy A57 5G ಸ್ಮಾರ್ಟ್‌ಫೋನ್‌ ಬಿಡುಗಡೆ! ಫೀಚರ್ಸ್‌ ಹೀಗಿವೆ

HIGHLIGHTS

ಸ್ಯಾಮ್‌ಸಂಗ್‌ನ ಈ ಹೊಸ ಫೋನ್‌ 5000mAh ಬ್ಯಾಟರಿ ಪಡೆದುಕೊಂಡಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಮೊಬೈಲ್‌ Android 16 ಓಎಸ್‌ ಪಡೆದಿದೆ

ನೂತನ ಗ್ಯಾಲಕ್ಸಿ A57 5G ಮೊಬೈಲ್‌ 120Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡಿದೆ

ಭಾರತದಲ್ಲಿ Samsung Galaxy A57 5G ಸ್ಮಾರ್ಟ್‌ಫೋನ್‌ ಬಿಡುಗಡೆ! ಫೀಚರ್ಸ್‌ ಹೀಗಿವೆ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ Samsung Galaxy A57 5G ಸ್ಮಾರ್ಟ್‌ಫೋನ್‌ ಅನ್ನು ಸದ್ದಿಲ್ಲದೆ ಲಾಂಚ್ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್‌ One UI 8.5 ಬೆಂಬಲಿತ ಆಂಡ್ರಾಯ್ಡ್‌ 16 ಓಎಸ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ A ಸರಣಿಯ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಫೋನ್‌ ಟ್ರಿಪಲ್‌ ಆಯ್ಕೆ ಹೊಂದಿದೆ. ಇದರ ಡಿಸ್‌ಪ್ಲೇಯು Super AMOLED ಮಾದರಿಯಲ್ಲಿ ಇದೆ. ಅಲ್ಲದೇ ಈ ಫೋನ್‌ ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಎಂಟ್ರಿ ಕೊಟ್ಟಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಮೊಬೈಲ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕಡಿಮೆ ಬೆಲೆಯ POCO C85 5G ಮೊಬೈಲ್‌ ಈಗ ಇನ್ನಷ್ಟು ಅಗ್ಗದ ದರದಲ್ಲಿ ಲಭ್ಯ! ಈ ಆಫರ್‌ ನೋಡಿ

Samsung Galaxy A57 5G ಬೆಲೆ ಹಾಗೂ ಲಭ್ಯತೆ

ಮಾರುಕಟ್ಟೆ ಪ್ರವೇಶಿಸಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಮೊಬೈಲ್‌ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ ಪಡೆದಿದ್ದು ಈ ಮೂಲಕ ಗ್ರಾಹಕರ ಗಮನ ಸೆಳೆದಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಮೊಬೈಲ್‌ನ ಆರಂಭಿಕ 8GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 56,999 ರೂ.ಗಳು ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 62,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ Awesome Navy, Awesome Icyblue ಮತ್ತು Awesome Lilac ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Samsung Galaxy A57 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಫೀಚರ್ಸ್‌ ಹೀಗಿವೆ

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಮೊಬೈಲ್‌ 6.7 FHD+ Super AMOLED ಹೊಂದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್‌ ಮತ್ತು ವಿಷನ್ ಬೂಸ್ಟರ್ ಸೌಲಭ್ಯ ಅನ್ನು ಪಡೆದಿದೆ. ಇದರೊಂದಿಗೆ One UI 8.5 ಬೆಂಬಲಿತ ಆಂಡ್ರಾಯ್ಡ್‌ 16 ಓಎಸ್‌ ಕೆಲಸ ಮಾಡಲಿವೆ. ಅಲ್ಲದೇ ನೀರು ಮತ್ತು ಧೂಳು ನಿರೋಧಕಕ್ಕಾಗಿ ಈ ಮೊಬೈಲ್‌ IP68 ರೇಟಿಂಗ್ ಸೌಲಭ್ಯ ಪಡೆದುಕೊಂಡಿದೆ.

ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ A57 5G ಫೋನ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 12MP ಮತ್ತು 5MP ಸೆನ್ಸಾರ್‌ ಪವರ್‌ನಲ್ಲಿ ಇವೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ 12 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo