Akshaya Tritiya 2025 - Samsung Galaxy A55 5G gets a price cut
Akshaya Tritiya 2025: ಭಾರತದಲ್ಲಿ ಇಂದು ಆಚರಿಸಲಾಗುತ್ತಿರುವ ಅಕ್ಷಯ ತೃತೀಯ (Akshaya Tritiya 2025) ಪ್ರಯುಕ್ತ ಹೆಚ್ಚು ಮಾರಾಟವಾಗಿರುವ ಮತ್ತು ಫುಲ್ ಫೀಚರ್ ಲೋಡ್ ಮಾಡಿಕೊಂಡಿರುವ ಸ್ಯಾಮ್‌ಸಂಗ್‌ನ Galaxy A55 5G ಫೋನ್ ಸದ್ದಿಲ್ಲದೇ ತನ್ನ ಬೆಲೆ ಕಡಿತವಾಗಿದ್ದು ಅಮೆಜಾನ್‌ನಲ್ಲಿ ಬರೋಬ್ಬರಿ 1000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ಲಭ್ಯವಿದೆ. ಅಂದ್ರೆ ಯಾವುದೇ ಬ್ಯಾಂಕ್ ಕಾರ್ಡ್ ಅಥವಾ ತಲೆನೋವಿನ ಸಮಸ್ಯೆ ಇಲ್ಲದೆ Samsung Galaxy A55 5G ಖರೀದಿಸಬಹುದು. ಈ ಡೀಲ್ ಪ್ರಸ್ತುತ ಲಿಮಿಟೆಡ್ ಸಮಯಕ್ಕೆ ಸೀಮಿತವಾಗಿದ್ದು ಇದರ ಹೊಸ ಆಫರ್ ಬೆಲೆಯೊಂದಿಗೆ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಈ ಅಕ್ಷಯ ತೃತೀಯವನ್ನು (Akshaya Tritiya) ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯುತ್ತಾರೆ ಇದು ವಾರ್ಷಿಕ ಜೈನ ಮತ್ತು ಹಿಂದೂ ವಸಂತ ಹಬ್ಬವಾಗಿದೆ. ಪ್ರಸ್ತುತ ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಪ್ರಸ್ತುತ 27,999 ರೂಗಳಿಗೆ ಪಟ್ಟಿ ಮಾಡಿದರೆ ಇದರ 8GB RAM ಮತ್ತು 256GB ಸ್ಟೋರೇಜ್ ಪ್ರಸ್ತುತ ₹29,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಪ್ರಸ್ತುತ ₹32,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಎಲ್ಲ ಮಾದರಿಗಳ ಮೇಲೆ ಅಮೆಜಾನ್‌ನಲ್ಲಿ 1000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ಲಭ್ಯವಿದೆ.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Samsung Galaxy A55 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 26,150 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ
ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆಯನ್ನು ಸಹ ಪಡೆಯುತ್ತದೆ.ಪವರ್ ಬ್ಯಾಕಪ್‌ಗಾಗಿ ಸ್ಮಾರ್ಟ್‌ಫೋನ್ ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದೆ. ಇದು 25W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಚಾರ್ಜ್ ಮಾಡಲು ಈ ಫೋನ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ.
ಇದನ್ನೂ ಓದಿ: Video Goes Viral: ಕನ್ನಡದಲ್ಲಿ ಚಾಟ್ ಜಿಪಿಟಿ ಬಳಸಿ ಆಟೋ ಚಾಲಕನೊಂದಿಗೆ ಚೌಕಾಸಿ ಮಾಡಿದ ವಿದ್ಯಾರ್ಥಿಯ ವಿಡಿಯೋ ವೈರಲ್!
ಈ ಸ್ಯಾಮ್‌ಸಂಗ್ ಫೋನ್ ಹಿಂಭಾಗದಲ್ಲಿ ಟ್ರಿಪಲ್ ನೈಜ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಟಪ್‌ನಲ್ಲಿ ಇದು 50MP ಪ್ರೈಮರಿ ಕ್ಯಾಮೆರಾದೊಂದಿಗೆ 12MP ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್ ಮತ್ತು 5MP ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. Samsung Galaxy A55 5G ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Samsung Galaxy A55 5G ಫಾಸ್ಟ್ ಮತ್ತು ಮಲ್ಟಿ ಟಾಸ್ಕ್ ಮಾಡಲು ಫೋನ್‌ನಲ್ಲಿ ಇನ್-ಹೌಸ್ ಚಿಪ್ Exynos 1480 ಅನ್ನು ಫೋನ್ ಪಡೆಯುತ್ತದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 8GB RAM+ 128GB ಸ್ಟೋರೇಜ್ 8GB RAM+ 256GB ಸ್ಟೋರೇಜ್ ಮತ್ತು 12GB RAM+ 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.