Samsung Galaxy A35
ನಿಮಗೊಂದು ಜಬರ್ದಸ್ತ್ ಸ್ಯಾಮ್‌ಸಂಗ್‌ನ ಹೊಸ 5G ಸ್ಮಾರ್ಟ್ಫೋನ್ ಬೇಕಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ ನೀಡುತ್ತಿರುವ ಈ ಇಂಟ್ರೆಸ್ಟಿಂಗ್ Samsung Galaxy A35 5G ಒಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಪ್ರಸ್ತುತ ಈ ಫೋನಿನ ಟಾಪ್-ಎಂಡ್ ರೂಪಾಂತರ ಅಂದರೆ 8GB RAM ಮತ್ತು 128GB ಸ್ಟೋರೇಜ್ ಸುಮಾರು 19,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರ ವಿಶೇಷಣತೆ ನೋಡುವುದಾದರೆ Exynos 1380 ಚಿಪ್‌ಸೆಟ್‌ನೊಂದಿಗೆ 5000mAh ಬ್ಯಾಟರಿಯೊಂದಿಗೆ 25W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗಾದ್ರೆ ಈ Samsung Galaxy A35 5G ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ಪ್ರಸ್ತುತ ಈ ಫೋನಿನ ಟಾಪ್-ಎಂಡ್ ರೂಪಾಂತರ ಅಂದರೆ 8GB RAM ಮತ್ತು 128GB ಸ್ಟೋರೇಜ್ ಸುಮಾರು 19,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಯ ಬೆಲೆ ಸುಮಾರು 21,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ Samsung Galaxy A35 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು.
ಈ Samsung Galaxy A35 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 19,450 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ Samsung ಫೋನ್ ನಿಮಗೆ 2340×1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.6 ಇಂಚಿನ ಸೂಪರ್ AMOLED ಡಿಸ್ಟ್ರೇಯನ್ನು ನೀಡುತ್ತಿದೆ. ಫೋನ್‌ನಲ್ಲಿ ನೀಡಲಾಗುತ್ತಿರುವ ಈ ಡಿಸ್ಟ್ರೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಫೋನ್ 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್ Exynos 1380 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ.
ಇದನ್ನೂ ಓದಿ: AI Doctor Clinic: ವಿಶ್ವದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಾಕ್ಟರ್ ಕ್ಲಿನಿಕ್ ಸೌದಿ ಅರೇಬಿಯಾದಲ್ಲಿ ತೆರೆಯಲಾಗಿದೆ
ಫೋನ್ ಹಿಂಭಾಗದಲ್ಲಿ LED ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. ಇದು 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 8MP ಮೆಗಾಪಿಕ್ಸೆಲ್ ಅಲ್ಮಾ-ವೈಡ್ ಆಂಗಲ್ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಅದೇ ಸಮಯದಲ್ಲಿ ಇದು ಸೆಲ್ಪಿಗಾಗಿ 13MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಈ ಫೋನ್‌ನ ಬರೋಬ್ಬರಿ 5000mAh ಬ್ಯಾಟರಿಯೊಂದಿಗೆ 25W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬಯೋಮೆಟ್ರಿಕ್ ಸುರಕ್ಷತೆಗಾಗಿ ಈ ಫೋನ್ನಲ್ಲಿ ನೀವು ಇನ್-ಡಿಸ್ಟ್ರೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೋಡುತ್ತೀರಿ. ಈ ಫೋನ್ IP67 ಧೂಳು ಮತ್ತು ನೀರು ನಿರೋಧಕ ರೇಟಿಂಗ್‌ನೊಂದಿಗೆ ಬರುತ್ತದೆ. OS ಗೆ ಸಂಬಂಧಿಸಿದಂತೆ ಫೋನ್ Android 14 ಆಧಾರಿತ OneUI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಪರ್ಕಕ್ಕಾಗಿ ನೀವು 5G, ಡ್ಯುಯಲ್ 4G VoLTE, Wi-Fi, USB ಟೈಪ್-C ಪೋರ್ಟ್ ಮತ್ತು ಬ್ಲೂಟೂತ್ 5.3 ನಂತಹ ಆಯ್ಕೆಗಳನ್ನು ಪಡೆಯುತ್ತೀರಿ.