Samsung Galaxy A17 5G (1)
ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ ಹೊಚ್ಚ ಹೊಸ Galaxy A17 5G ಸ್ಮಾರ್ಟ್ ಫೋನ್ ಅನ್ನು ಸದ್ದಿಲ್ಲದೇ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ ಫೋನ್ ಬೆಲೆ ನೋಡುವುದಾದರೆ ಆರಂಭಿಕ 8GB RAM ಮಾದರಿಯನ್ನು ಸುಮಾರು ₹18,999 ರೂಗಳಿಂದ ಪರಿಚಾಯಿಸಿದೆ. ಅಲ್ಲದೆ ಸೂಪರ್ AMOLED ಡಿಸ್ಪ್ಲೇ ಮತ್ತು ಅತ್ಯುತ್ತಮ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿ ಇಡೀ ದಿನ ಬಳಕೆಗೆ ಸಾಕಾಗುತ್ತದೆ. ಹಾಗಾದ್ರೆ ಹೊಸ ಮತ್ತು ಉತ್ತಮ ಸ್ಯಾಮ್‌ಸಂಗ್ ಫೋನ್ ಹುಡುಕುತ್ತಿರುವವರಿಗೆ Samsung Galaxy A17 5G ಉತ್ತಮ ಆಯ್ಕೆಯಾಗಲಿದ್ದು ಇದರ ಆಫರ್ ಬೆಲೆಯೊಂದಿಗೆ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಸ್ಯಾಮ್‌ಸಂಗ್ ತನ್ನ ಜನಪ್ರಿಯ A-ಸರಣಿಯನ್ನು ವಿಸ್ತರಿಸಲು ಭಾರತದಲ್ಲಿ Galaxy A17 5G ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ Samsung Galaxy A17 5G ಸ್ಮಾರ್ಟ್‌ಫೋನ್ ಈಗ ಸ್ಯಾಮ್‌ಸಂಗ್‌ನ ಅಧಿಕೃತ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ 6GB RAM ಮತ್ತು 128GB ಸಂಗ್ರಹಣೆಯ ಬೇಸ್ ಮಾಡೆಲ್‌ಗೆ ₹18,999 ರಿಂದ ಪ್ರಾರಂಭವಾಗುತ್ತದೆ. ಸ್ಯಾಮ್‌ಸಂಗ್ ಇದರ ಆರಂಭಿಕ 8GB RAM + 128GB ಸ್ಟೋರೇಜ್ ₹20,499 ಮತ್ತು 8GB RAM + 256GB ಸ್ಟೋರೇಜ್ ₹23,499 ಬೆಲೆ ಇದೆ. ಈ ಫೋನ್ ಕಪ್ಪು, ನೀಲಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿದೆ.
Samsung Galaxy A17 5G ಸ್ಮಾರ್ಟ್ ಫೋನ್ 6.7 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಫುಲ್ HD+ (1080×2340 ಪಿಕ್ಸೆಲ್‌ಗಳು) ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ಸುರಕ್ಷಿತವಾಗಿದೆ. ಕ್ಯಾಮೆರಾ ವಿಷಯಕ್ಕೆ ಬಂದರೆ ಇದು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸ್ಮಾರ್ಟ್ ಫೋನ್ 50MP ಮುಖ್ಯ ಸೆನ್ಸರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 5MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಜೊತೆಗೆ ಸೆಲ್ಫಿಗಾಗಿ ಇದು 13MP ಕ್ಯಾಮೆರಾವನ್ನು ಹೊಂದಿದೆ.
ಸ್ಯಾಮ್‌ಸಂಗ್‌ನ ಸ್ವಂತ Exynos 1330 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 5nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಇದು 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಯಾಮ್‌ಸಂಗ್ ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲವನ್ನು ನೀಡುವುದಾಗಿ ಹೇಳಿದೆ. ಅಲ್ಲದೆ 6 ವರ್ಷಗಳ ಭದ್ರತಾ ಅಪ್‌ಡೇಟ್‌ಗಳು ಮತ್ತು 6 ಮುಖ್ಯ OS ಅಪ್‌ಗ್ರೇಡ್‌ಗಳನ್ನು ಖಾತರಿಪಡಿಸಿದೆ. ಫೋನ್ 5,000mAh ಬ್ಯಾಟರಿಯೊಂದಿಗೆ ಇದು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಇಡೀ ದಿನ ಬಳಕೆಗೆ ಸಾಕಾಗುತ್ತದೆ.