Samsung Galaxy A07 5G
Samsung Galaxy A07 5G : ಸ್ಯಾಮ್‌ಸಂಗ್ ಮೊಬೈಲ್ ಸಂಸ್ಥೆಯು ಭಾರತದಲ್ಲಿ ಇಂದು (ಫೆ 5 ರಂದು) ತನ್ನ Samsung Galaxy A07 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಂಪನಿಯು ತನ್ನ ಗ್ಯಾಲಕ್ಸಿ A ಸರಣಿಯನ್ನು ವಿಸ್ತರಿಸಿದೆ. ನಿರೀಕ್ಷೆಯಂತೆ Samsung Galaxy A07 5G ಮೊಬೈಲ್ 6,000mAh ಬ್ಯಾಟರಿ ಬಲದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಾಗೆಯೇ ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುವ ಜೊತೆಗೆ ಮೂರು ಕಲರ್ ಆಯ್ಕೆಗಳನ್ನು ಹೊಂದಿದೆ. ಇನ್ನುಳಿದಂತೆ ಹೊಸ Samsung Galaxy A07 5G ಮೊಬೈಲ್‌ನ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Google Pixel 10a ಬಿಡುಗಡೆಗೆ ಮುಹೂರ್ತ ಫೀಕ್ಸ್! ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್ ಹೀಗಿವೆ
Samsung Galaxy A07 5G ಫೋನ್ ದೇಶಿಯ ಮಾರುಕಟ್ಟೆಗೆ ಎರಡು ವೇರಿಯಂಟ್ ಆಯ್ಕೆಯಲ್ಲಿ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ ಆರಂಭಿಕ 4GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 15,999 ರೂಗಳು ಆಗಿದೆ. ಹಾಗೆಯೇ ಇದರ 6GB RAM + 128GB ಸ್ಟೋರೇಜ್ ವೇರಿಯಂಟ್ 17,999 ರೂಗಳ ಬೆಲೆಯಲ್ಲಿ ಲಭ್ಯ. ಆರಂಭಿಕ ಕೊಡುಗೆಯಾಗಿ ಸಂಸ್ಥೆಯು SBI, HDFC ಬ್ಯಾಂಕ್ ಮತ್ತು Axis ಬ್ಯಾಂಕ್ ಕಾರ್ಡ್‌ಗಳಲ್ಲಿ 1,000 ರೂ.ಗಳ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ನೀಡಲಿದೆ. ಅಂದಹಾಗೆ ಈ ಫೋನ್ ಲೈಟ್ ವೈಲೆಟ್, ಲೈಟ್ ಗ್ರೀನ್ ಮತ್ತು ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
Samsung Galaxy A07 5G ಮೊಬೈಲ್ 6.7 ಇಂಚಿನ HD+ IPS LCD ಡಿಸ್‌ಪ್ಲೇ ಹೊಂದಿದ್ದು ಇದರ ಸ್ಕ್ರೀನ್ 720×1,600 ಪಿಕ್ಸೆಲ್ ರೆಸಲ್ಯೂಶನ್ ಪಡೆದುಕೊಂಡಿದೆ. ಅಲ್ಲದೇ 120Hz ವರೆಗೆ ರಿಫ್ರೆಶ್ ರೇಟ್ ಒಳಗೊಂಡಿರುವ ಜೊತೆಗೆ 800 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಈ ಫೋನ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು ಇದಕ್ಕೆ ಪೂರಕವಾಗಿ Android 16 ಆಧಾರಿತ One UI 8 ಒಳಗೊಂಡಿದೆ. ಇದು 4GB RAM + 128GB ಹಾಗೂ 6GB RAM + 128GB ವೇರಿಯಂಟ್ ಆಯ್ಕೆ ಪಡೆದಿದೆ.
ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರುವ Samsung Galaxy A07 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಆಗಿದ್ದರೇ, ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಮುಂಭಾಗದಲ್ಲಿ 8MP ಕ್ಯಾಮೆರಾ ರಚನೆ ಒದಗಿಸಲಾಗಿದೆ. ಅಲ್ಲದೇ ಇದು 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು ಇದಕ್ಕೆ ಅನುಗುಣವಾಗಿ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದುಕೊಂಡಿದೆ. ಉಳಿದಂತೆ Wi-Fi, ಬ್ಲೂಟೂತ್ 5.3, USB ಟೈಪ್-ಸಿ ಪೋರ್ಟ್ ಆಯ್ಕೆಗಳು ಇವೆ.