ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ Redmi Turbo 6 ಸ್ಮಾರ್ಟ್‌ಫೋನ್‌ ಸರಣಿ!

HIGHLIGHTS

ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರೆಡ್ಮಿ ಟರ್ಬೊ 6 ಮೊಬೈಲ್‌ ಸರಣಿ

ರೆಡ್ಮಿ ಟರ್ಬೊ 6 ಸರಣಿಯು ಎರಡು ಮಾಡೆಲ್‌ಗಳನ್ನು ಪಡೆದಿರುವ ನಿರೀಕ್ಷೆ ಇದೆ

ಮುಂಬರುವ ಈ ಸರಣಿಯು 10,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಸಾಧ್ಯತೆ

ಲೀಡಿಂಗ್ ಬ್ರಾಂಡ್‌ ಆಗಿರುವ ರೆಡ್ಮಿ ಇತ್ತೀಚಿಗಷ್ಟೆ ರೆಡ್ಮಿ ಕಂಪನಿಯು ರೆಡ್ಮಿ ಟರ್ಬೊ 5 ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ಅಬ್ಬರಿಸಿದೆ. ಇದೀಗ ರೆಡ್ಮಿ ಕಂಪನಿಯು Redmi Turbo 6 Series ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುತ್ತಿದೆ. ಕಳೆದ ವರ್ಷ ಚೀನಾದಲ್ಲಿ ರೆಡ್ಮಿ ಟರ್ಬೊ 5 ಮತ್ತು ಟರ್ಬೊ 5 ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಆಧಾರದ ಮೇಲೆ ಕಂಪನಿಯು ಈ ವರ್ಷ ಭಾರತದಲ್ಲಿ ಈ ಸರಣಿಯ ರೆಡ್ಮಿ ಟರ್ಬೊ 6 ಸ್ಟ್ಯಾಂಡರ್ಡ್ ಮತ್ತು ರೆಡ್ಮಿ ಟರ್ಬೊ 6 ಮ್ಯಾಕ್ಸ್ ಎರಡೂ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅಂದಹಾಗೆ ರೆಡ್ಮಿ ಸಂಸ್ಥೆಯ ಈ ಹೊಸ ಸರಣಿಯ ಫೋನ್‌ಗಳ ಕುರಿತು ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : UMANG ಅಪ್ಲಿಕೇಶನ್‌ ಡೇಟಾ ಲೀಕ್ ವರದಿ: ಅನೇಕ ಬಳಕೆದಾರರ ಮಾಹಿತಿಗೆ ಅಪಾಯ!

ಸದ್ಯದಲ್ಲೇ ಬರಲಿದೆ Redmi Turbo 6 Series

ರೆಡ್ಮಿ ಮೊಬೈಲ್‌ ಕಂಪನಿಯು ಹೊಸ ರೆಡ್ಮಿ ಟರ್ಬೊ 6 ಸರಣಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಕಂಪನಿಯ ಈ ಫೋನ್‌ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ರೆಡ್ಮಿ ಫೋನ್ ದೊಡ್ಡ 7 ಇಂಚಿನ ಡಿಸ್‌ಪ್ಲೇ ಮತ್ತು ಬೃಹತ್ 10,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಬಹುದು. ರೆಡ್ಮಿ ಟರ್ಬೊ 6 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8 ಸರಣಿ ಚಿಪ್‌ಸೆಟ್‌ ಪ್ರೊಸೆಸರ್‌ನಿಂದ ಕೆಲಸ ಮಾಡಲಿದೆ ಎಂದು ಟಿಪ್‌ಸ್ಟರ್ ಹೇಳಿಕೊಂಡಿದ್ದಾರೆ.

Redmi Turbo 6 Series

ರೆಡ್ಮಿ ಟರ್ಬೊ 6 ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಲೀಕ್ ಮಾಹಿತಿ ಪ್ರಕಾರ ಮುಂಬರುವ ಹೊಸ ರೆಡ್ಮಿ ಟರ್ಬೊ 6 ಸ್ಮಾರ್ಟ್‌ಫೋನ್ MediaTek Dimensity 8600 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ಪ್ರೊಸೆಸರ್ ಅನ್ನು ಈ ಹಿಂದೆ ಹಾನರ್ ಪವರ್ 3 ಸ್ಮಾರ್ಟ್‌ಫೋನ್‌ನಲ್ಲಿ ಬಳಸಲಾಗಿತ್ತು. ಆ ಫೋನ್ 12,000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯೊಂದಿಗೆ ಗಮನ ಸೆಳೆದಿತ್ತು. ರೆಡ್ಮಿ ಟರ್ಬೊ 6 ಮ್ಯಾಕ್ಸ್ ಮಾದರಿಯು MediaTek Dimensity 9 ಸರಣಿಯ ಪ್ರೊಸೆಸರ್‌ನೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ವಿಶೇಷವಾಗಿ, ಈ ಮಾದರಿಯಲ್ಲಿ Dimensity 9600s ಚಿಪ್‌ಸೆಟ್ ಇರಬಹುದೆಂದು ವರದಿಗಳು ಸೂಚಿಸಿವೆ. ಆದರೆ ಈ ಮಾಹಿತಿಯನ್ನು ಶಿಯೋಮಿ ಅಥವಾ ರೆಡ್ಮಿ ಕಂಪನಿ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಇದಲ್ಲದೆ ಈ ಹಿಂದಿನ ಲೀಕ್‌ ಮಾಹಿತಿ ಪ್ರಕಾರ ರೆಡ್ಮಿ ಟರ್ಬೊ 6 ಮ್ಯಾಕ್ಸ್ 2K ರೆಸಲ್ಯೂಶನ್ ಹೊಂದಿರುವ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಗೆ ಬರಬಹುದು ಎನ್ನಲಾಗಿದೆ. ಇದರ ಜೊತೆಗೆ ಅಲ್ಟ್ರಾಸಾನಿಕ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಮೆಟಲ್ ಫ್ರೇಮ್ ರಚನೆ ಹಾಗೂ IP68/IP69 ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್‌ ಸೌಲಭ್ಯವನ್ನು ಹೊಂದಿರಲಿದೆ ಎಂಬ ಸೂಚನೆಗಳು ಇವೆ. ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ರೆಡ್ಮಿ ಟರ್ಬೊ 6 ಸರಣಿಯು 2027 ರ ಜನವರಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ ಇದರ ಅಧಿಕೃತ ಬಿಡುಗಡೆ ದಿನಾಂಕ ಮತ್ತು ಸಂಪೂರ್ಣ ವಿಶೇಷಣಗಳನ್ನು ಕಂಪನಿ ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :