Xiaomi ಕ್ವಾಡ್ ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆಗೊಳಿಸಲಿದೆ

Updated on 02-Mar-2020
HIGHLIGHTS

Redmi Note 9 ಬಗ್ಗೆ ಮಾತನಾಡಿ ತಮ್ಮ ಪೋಸ್ಟ್ ನಲ್ಲಿ ಮತ್ತಷ್ಟು ಕುತೂಹಲ ಕೆರಳಿಸಲು 9ನೇ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ

ಸ್ನೇಹಿತರೇ ದೇಶದಲ್ಲಿ ಸದ್ಯಕ್ಕೆ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಭಾರತದಲ್ಲಿ ನೋಟ್ ಫೋನ್ ಸರಣಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಟ್ವಿಟರ್‌ನಲ್ಲಿ Redmi Note 9 ಸರಣಿ ಫೋನ್‌ಗಳನ್ನು ಶೀಘ್ರದಲ್ಲೇ ತರಲಿದೆ. ಈ ಹೊಸ Redmi Note 9 ಸರಣಿಯ ಫೋನ್ ಇದೇ ಮಾರ್ಚ್ 12 ರಂದು ಬಿಡುಗಡೆಯಾಗಲಿದೆ ಎಂದು Xiaomi ಇಂಡಿಯಾ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಮನು ಕುಮಾರ್ ಜೈನ್ ಟ್ವಿಟರ್‌ನಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಮನು Redmi Note 9 ಬಗ್ಗೆ ಮಾತನಾಡಿ ತಮ್ಮ ಪೋಸ್ಟ್ ನಲ್ಲಿ ಮತ್ತಷ್ಟು ಕುತೂಹಲ ಕೆರಳಿಸಲು  9ನೇ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ನಲ್ಲಿ ಹಂಚಲಾದ 9ನೇ ಸಂಖ್ಯೆಯಲ್ಲಿ 4 ಕ್ಯಾಮೆರಾಗಳು ಗೋಚರಿಸುತ್ತವೆ. ಇದು Redmi Note 9 ನಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಇರಬಹುದು ಎಂದು ಸೂಚಿಸುತ್ತದೆ. ಈ ಫೋನ್ Redmi Note 8 ಫೋನಿನ ಯಶಸ್ಸಿನ ದೊಡ್ಡಣ್ಣ ಆಗಿರುತ್ತದೆ.

https://twitter.com/manukumarjain/status/1234399152282275841?ref_src=twsrc%5Etfw

ಈಗ Redmi Note 8 ಬಗ್ಗೆ ನೋಡುವುದಾದರೆ 6GB RAM ನೊಂದಿಗೆ ಬರುವ ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9 ಪೈ ಆಧಾರಿತ MIUI 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. 6.39 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಫೋಟೋಗ್ರಾಫಿಗಾಗಿ ಇದರಲ್ಲಿ ಕ್ವಾಡ್ ರೇರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಹೊಂದಿದ್ದು 8MP  ಸೆಕೆಂಡರಿ ಸೆನ್ಸರ್ ಹೊಂದಿದ್ದು 2MP + 2MP ಡೆಪ್ತ್ ಮತ್ತು ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಅಲ್ಲದೆ ಈ ಫೋನ್ ಸೆಲ್ಫಿಗಾಗಿ 13MP  ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.ಇದರಲ್ಲಿ 4000mAh ಬ್ಯಾಟರಿ ನೀಡಲಾಗಿದೆ. ಸದ್ಯಕ್ಕೆ ಈ ಸ್ಮಾರ್ಟ್ಫೋನ್ ಆರಂಭಿಕ ಬೆಲೆ ಕೇವಲ 10,499 ರೂಗಳಲ್ಲಿ ಲಭ್ಯವಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :