ಭಾರತದಲ್ಲಿ Redmi Note 17 Pro ಸರಣಿ ಬಿಡುಗಡೆಗೆ ದಿನಾಂಕ ನಿಗದಿ; ಅಚ್ಚರಿಯ ಫೀಚರ್ಸ್‌ ನಿರೀಕ್ಷೆ

ಭಾರತದಲ್ಲಿ Redmi Note 17 Pro ಸರಣಿ ಬಿಡುಗಡೆಗೆ ದಿನಾಂಕ ನಿಗದಿ; ಅಚ್ಚರಿಯ ಫೀಚರ್ಸ್‌ ನಿರೀಕ್ಷೆ

ಪ್ರಮುಖ ಮೊಬೈಲ್‌ ಬ್ರಾಂಡ್‌ಗಳ ಪೈಕಿ ಒಂದಾದ ರೆಡ್ಮಿ ಸಂಸ್ಥೆಯು ಇದೀಗ ಹೊಸದಾಗಿ Redmi Note 17 Pro ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಮುಂಬರುವ ಈ ಸರಣಿಯಲ್ಲಿ ರೆಡ್ಮಿ ನೋಟ್‌ 17 ಪ್ರೊ 5G ಮತ್ತು ರೆಡ್ಮಿ ನೋಟ್‌ 17 ಪ್ರೊ ಮ್ಯಾಕ್ಸ್‌ 5G ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಸರಣಿಯು ಸೆಪ್ಟೆಂಬರ್ 15 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಫೋನ್‌ಗಳ ಬಿಡುಗಡೆ ಕುರಿತು ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಬಿಡುಗಡೆ ಮುನ್ನವೇ ಇದರ ನಿರೀಕ್ಷಿತ ಫೀಚರ್ಸ್‌ ಕುತೂಹಲ ಹೆಚ್ಚಿಸಿವೆ. ಹಾಗಾದರೇ ಈ ಸರಣಿಯ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Apple Launch Event 2026: ಈ ಕಾರ್ಯಕ್ರಮದ ಲೈವ್ ವೀಕ್ಷಣೆ ಹೇಗೆ? ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ

Redmi Note 17 Pro ಸರಣಿ ಬಿಡುಗಡೆ ಮಾಹಿತಿ

ರೆಡ್ಮಿ ನೋಟ್ 17 ಪ್ರೊ ಸರಣಿಯ ಭಾರತ ಬಿಡುಗಡೆ ದಿನಾಂಕವನ್ನು ಅಮೆಜಾನ್‌ನಲ್ಲಿ ಲೈವ್ ಆಗಿರುವ ಮೈಕ್ರೋಸೈಟ್ ಮೂಲಕ ದೃಢಪಡಿಸಲಾಗಿದೆ. ಅದರಂತೆ, ರೆಡ್ಮಿ ನೋಟ್ 17 ಪ್ರೊ ಮತ್ತು ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ 5G ಸೆಪ್ಟೆಂಬರ್ 15, 2026 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ.

Redmi Note 17 Pro series launch

ರೆಡ್ಮಿ ನೋಟ್ 17 ಪ್ರೊ ನಿರೀಕ್ಷಿತ ಫೀಚರ್ಸ್

ರೆಡ್ಮಿ ನೋಟ್ 17 ಪ್ರೊ 5G ಸ್ಮಾರ್ಟ್‌ಫೋನ್ 6.83 ಇಂಚಿನ 1.5K AMOLED ಡಿಸ್ಪ್ಲೇ ಹೊಂದಿರುವ ನಿರೀಕ್ಷೆಯಿದೆ. ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, ಗರಿಷ್ಠ 3,500 ನಿಟ್ಸ್‌ವರೆಗೆ ಬ್ರೈಟ್‌ನೆಸ್ ನೀಡಲಿದೆ. ಹಾಗೆಯೇ ಈ ಫೋನ್‌ನಲ್ಲಿ Snapdragon 6s Gen 4 ಚಿಪ್‌ಸೆಟ್ ಬಳಸಲಾಗಿದೆ. ಇದು 8GB RAM ಮತ್ತು 256GB ವರೆಗೆ UFS 3.1 ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ. ಸೆಲ್ಫಿ ಹಾಗೂ ವೀಡಿಯೊ ಕಾಲ್‌ಗಳಿಗಾಗಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಇದು 8,340mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಮತ್ತು 67W HyperCharge ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ 5G ಫೀಚರ್ಸ್

ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ 5G ಫೋನ್‌ 6.83 ಇಂಚಿನ 1.5K AMOLED ಡಿಸ್ಪ್ಲೇ ಇರಲಿದ್ದು, 120Hz ರಿಫ್ರೆಶ್ ದರ ಮತ್ತು 3,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸಲಿದೆ. ಜೊತೆಗೆ Gorilla Glass Victus 2 ರಕ್ಷಣೆಯೂ ಸಿಗಲಿದೆ. ಈ ಫೋನ್ Snapdragon 6 Gen 5 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, LPDDR5X RAM ಮತ್ತು UFS ಸ್ಟೋರೇಜ್ ಹೊಂದಿರಲಿದೆ. ಕ್ಯಾಮೆರಾ ವಿಭಾಗದಲ್ಲಿ 50MP OIS ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಸೆಲ್ಫಿಗಾಗಿ 32MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ 10,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇರಲಿದ್ದು, 100W HyperCharge ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಫೋನ್ Android 16 ಆಧಾರಿತ HyperOS 3ನಲ್ಲಿ ಕಾರ್ಯನಿರ್ವಹಿಸಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile