Redmi Note 15 SE ಬೆಲೆಯಲ್ಲಿ ಭಾರೀ ಇಳಿಕೆ! ಈ ಫೋನ್ 50MP ಕ್ಯಾಮೆರಾ ಜೊತೆ ಬಿಗ್ ಬ್ಯಾಟರಿ ಪಡೆದಿದೆ
ಫ್ಲಿಪ್ಕಾರ್ಟ್ನಲ್ಲಿ ರೆಡ್ಮಿ ನೋಟ್ 15 SE ಮೊಬೈಲ್ಗೆ ಬಿಗ್ ಆಫರ್
ರೆಡ್ಮಿ ನೋಟ್ 15 SE ಮೊಬೈಲ್ 5,800mAh ಬ್ಯಾಟರಿ ಸೌಲಭ್ಯ ಪಡೆದಿದೆ
ರೆಡ್ಮಿ ನೋಟ್ 15 SE ಸ್ಮಾರ್ಟ್ಫೋನ್ ಮೂರು ಆಕರ್ಷಕ ಕಲರ್ಗಳಲ್ಲಿ ಲಭ್ಯ
Flipkart Big Bang Diwali Sale: ಫ್ಲಿಪ್ಕಾರ್ಟ್ ಆಯೋಜಿಸಿರುವ ಹಬ್ಬದ ಮಾರಾಟದಲ್ಲಿ ಆಯ್ದ ಮೊಬೈಲ್ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಆ ಪೈಕಿ Redmi ಕಂಪನಿಯ Redmi Note 15 SE ಸ್ಮಾರ್ಟ್ಫೋನ್ ಸಹ ಸ್ಪೆಷಲ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ ಸ್ನಾಪ್ಡ್ರಾಗನ್ 6 ಜೆನ್ 3 ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 5,800mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್ಕಾರ್ಟ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ರೆಡ್ಮಿ ನೋಟ್ 15 SE ಸ್ಮಾರ್ಟ್ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Redmi Note 15 SE ಫೋನ್ ಬೆಲೆಯಲ್ಲಿ ಇಳಿಕೆ
ಬಜೆಟ್ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ರೆಡ್ಮಿ ನೋಟ್ 15 SE ಮೊಬೈಲ್ ಫ್ಲಿಪ್ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 34,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ ಬ್ಯಾಂಕ್ ಆಫರ್ಗಳ ಮೂಲಕ 25,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಕಾರ್ಬನ್ ಬ್ಲಾಕ್, ಕ್ರಿಮ್ಸನ್ ರಿಸರ್ವ್ (ರೆಡ್) ಮತ್ತು ಫ್ರಾಸ್ಟೆಡ್ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.
ರೆಡ್ಮಿ ನೋಟ್ 15 SE 5G ಫೋನ್ ಫೀಚರ್ಸ್
ರೆಡ್ಮಿ ಕಂಪನಿಯ ನೋಟ್ 15 SE 5G ಸ್ಮಾರ್ಟ್ಫೋನ್ 6.77 ಇಂಚಿನ ಕರ್ವ್ಡ್ AMOLED ಡಿಸ್ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್ಪ್ಲೇಯು 3,200 nits ಪೀಕ್ ಬ್ರೈಟ್ನೆಸ್ ಬೆಂಬಲಿತ 1,080×2,392 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 6 ಜೆನ್ 3 ಚಿಪ್ಸೆಟ್ ಪ್ರೊಸೆಸರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಒಳಗೊಂಡಿದೆ.
ಹಾಗೆಯೇ ರೆಡ್ಮಿ ನೋಟ್ 15 SE 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್ 20 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 5,800mAh ಬ್ಯಾಟರಿ ಬ್ಯಾಕ್ಅಪ್ ಜೊತೆಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.