ಜನಪ್ರಿಯ Redmi ಸಂಸ್ಥೆಯ Note ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಪಡೆದಿವೆ. ಅದರ ಮುಂದುವರಿದ ಭಾಗವಾಗಿ Redmi Note 15 Pro ಸರಣಿಯನ್ನು ಜನವರಿ 29 ರಂದು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲಾಗುವುದು ಎಂದು ಕಂಪನಿಯು ಘೋಷಿಸಿದೆ. ಈ ಫೋನ್‌ಗಾಗಿ ಮೈಕ್ರೋಸೈಟ್ ಸಹ ಈಗ ಲೈವ್ ಮಾಡಲಾಗಿದೆ. ಇನ್ನು ಈ ನೂತನ ಸರಣಿಯು Snapdragon 7 ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರಲಿದೆ. ಹಾಗೆಯೇ ಹಿಂಭಾಗದಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರುವ ಕುರಿತು ಟೀಸ್ ಮಾಡಲಾಗಿದೆ. ಹಾಗಾದರೇ ಈ ಫೋನಿನ ನಿರೀಕ್ಷಿತ ಫೀಚರ್ಸ್, ಬಿಡುಗಡೆ ಕುರಿತ ಮಾಹಿತಿ ಬಗ್ಗೆ ಮುಂದೆ ನೋಡೋಣ.
Also Read : Airtel ಬೊಂಬಾಟ್ ಪ್ಲಾನ್! ಒಂದೇ ರೀಚಾರ್ಜ್‌ನಲ್ಲಿ ಎರಡು ಲಾಭ ಪಡೆಯಲು ಈ ಯೋಜನೆ ಅತ್ಯುತ್ತಮ
Xiaomi ಕಂಪನಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್ಮಿ ಪರಿಚಯಿಸುತ್ತಿರುವ ಹೊಸ Redmi Note 15 Pro ಸರಣಿಯು ಇದೇ ಜನವರಿ 29 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಇನ್ನು ಈ ಫೋನ್ Xiaomi ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ದೇಶದಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ Redmi Note 15 Pro ಫೋನ್ ಸರಣಿಗಾಗಿ ವಿಶೇಷ ಮೈಕ್ರೋಸೈಟ್ ಅನ್ನು Live ಮಾಡಿದೆ. ಅಂದಹಾಗೆ ಈ ಸರಣಿಯ ಫೋನ್‌ಗಳನ್ನು ಬ್ರೌನ್, ಗೋಲ್ಡನ್ ಫ್ರೇಮ್ ಮತ್ತು ಗ್ರೇ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ರೆಡ್ಮಿ ಸಂಸ್ಥೆಯ ನೂತನ Redmi Note 15 Pro ಸರಣಿಯ ಪ್ರಮುಖ ಹೈಲೈಟ್ಸ್‌ಗಳಲ್ಲಿ ಕ್ಯಾಮೆರಾ ಒಂದಾಗಿದೆ. ಈ ಸರಣಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೌಲಭ್ಯ ಇರಲಿದೆ. ಹಾಗೆಯೇ HDR + AI ಇಮೇಜ್ ಎಂಜಿನ್ ಒಳಗೊಂಡಿರುವ 200 ಮೆಗಾಪಿಕ್ಸೆಲ್ MasterPixel ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗೆಯೇ ಈ ಸರಣಿಯ ಫೋನ್‌ಗಳು 4K ವೀಡಿಯೊ ರೆಕಾರ್ಡ್ ಮಾಡುವ ಸಾಮರ್ಥ್ಯ ಒಳಗೊಂಡಿರಲಿವೆ ಎಂದು ಸಂಸ್ಥೆಯು ಖಚಿತಪಡಿಸಿದೆ.
Redmi Note 15 Pro 5G ಸರಣಿಯ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿರುವ ಡಿಸ್‌ಪ್ಲೇ ವ್ಯವಸ್ಥೆ ಹೊಂದಿರಲಿವೆ. ಅಲ್ಲದೇ ಆ ಡಿಸ್‌ಪ್ಲೇಗಳು IP66 + IP68 + IP69 + IP69K ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್ ಆಯ್ಕೆಗಳನ್ನು ಸಹ ಪಡೆದಿರಲಿವೆ. ಹಾಗೆಯೇ ಈ ಸರಣಿಯ Redmi Note 15 Pro ಮಾಡೆಲ್ ಫೋನ್ 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದೆ. ಇದಕ್ಕೆ ಪೂರಕವಾಗಿ ಈ ಸರಣಿಯು 100W ಹೈಪರ್‌ಚಾರ್ಜ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 22.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಸಹ ಪಡೆದಿರುತ್ತದೆ.
Redmi Note 15 Pro 5G ಸರಣಿಯನ್ನು ಕ್ವಾಲ್ಕಾಮ್‌ನ Snapdragon 7 ಚಿಪ್‌ಸೆಟ್ ಪ್ರೊಸೆಸರ್ ಪವರ್ ಜೊತೆಗೆ ಎಂಟ್ರಿ ಕೊಡಲಿದ್ದು ಇದನ್ನು 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಈ ಸರಣಿಯು 12GB RAM ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಹೀಟ್ ನಿಯಂತ್ರಿಸಲು ಫೋನ್‌ಗಳು ಐಸ್‌ಲೂಪ್ ಕೂಲಿಂಗ್ ಸಿಸ್ಟಮ್ ಸೌಲಭ್ಯ ಪಡೆದಿರಲಿವೆ ಎನ್ನಲಾಗಿದೆ.