Redmi Note 15 5G India Launch
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರೆಡ್ಮಿ (Redmi) ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ Redmi Note 15 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಇಂಟ್ರೆಸ್ಟಿಂಗ್ ಪವರ್ಫುಲ್ ಫೀಚರ್ಗಳೊಂದಿಗೆ 108MP MasterPixel ಕ್ಯಾಮೆರಾ, 5520mAh ಬ್ಯಾಟರಿ ಮತ್ತು Snapdragon 6 Gen 3 ಪ್ರೊಸೆಸರ್ನೊಂದಿಗೆ ಪರಿಚಯಿಸಲಾಗಿದೆ. ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಬಿಡುಗಡೆಯಾಗಿ ಮಾರಾಟಕ್ಕೆ ಲಭ್ಯವಾಗಲಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಸಂಪೂರ್ಣ ಹೈಲೈಟ್ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Also Read: ಅಮೆಜಾನ್‌ನಲ್ಲಿ ಇಂದು boAt Dolby Audio Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
Redmi Note 15 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹19,99 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹21,999 ರೂಗಳಿಗೆ ಪಟ್ಟಿ ಪರಿಚಯಿಸಲಾಗಿದೆ. ಇದನ್ನು ಆಸಕ್ತ ಬಳಕೆದಾರರು ಇದನ್ನು Axis, SBI ಮತ್ತು ICICI ಸೇರಿ ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಭಾರಿ ಡಿಸ್ಕೌಂಟ್ ಪಡೆಯುವ ಮೂಲಕ ಈ ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ತುಂಬ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು. ಈ ಸ್ಮಾರ್ಟ್ಫೋನ್ 9 ಜನವರಿ ರಂದು ಅಮೆಜಾನ್ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Redmi Note 15 ಸ್ಮಾರ್ಟ್ಫೋನ್ 6.77 ಇಂಚಿನ Curved AMOLED (1,080×2,436 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 144Hz ರಿಫ್ರೆಶ್ ರೇಟ್ ಅಲ್ಟ್ರಾ-ಸ್ಲಿಮ್ 7.35mm ಪ್ರೊಫೈಲ್ ಮತ್ತು ಬೆರಗುಗೊಳಿಸುವ ವಿನ್ಯಾಸವನ್ನು ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. Redmi Note 15 ಫೋನ್ ಕಾಮೆರದಲ್ಲಿ 108MP ಕ್ಯಾಮೆರಾ Samsung ISOCELL HM9 ಸೆನ್ಸರ್ OIS ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 20MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Redmi Note 15 ಫೋನ್ Snapdragon 6 Gen 3 ಪ್ರೊಸೆಸರ್ ಚಿಪ್‌ಸೆಟ್‌ನಿಂದ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ HyperOS 2 ಸಪೋರ್ಟ್ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Redmi Note 15 ಸ್ಮಾರ್ಟ್ಫೋನ್ 5520mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡಸ್ಟ್ ಮತ್ತು ವಾಟರ್ ಪ್ರೂಫ್ ಅಡಿಯಲ್ಲಿ IP66 ಜೊತೆಗೆ ಬರುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 4 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.