Redmi Note 15 5G Announced
ಭಾರತದಲ್ಲಿ ಮುಂಬರಲಿರುವ ರೆಡ್ಮಿಯ ಹೊಸ Redmi Note 15 5G Series ಬಿಡುಗಡೆಯನ್ನು ಕಂಪನಿ ಕಂಫಾರ್ಮ್ ಮಾಡಿದ್ದು ಈ ಸರಣಿಯು ಪ್ರಸ್ತುತ ‘Coming Soon‘ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದ ಬಾರಿಯಾಗಿದೆ. ಈ ಫೋನ್ ಇಂಟ್ರೆಸ್ಟಿಂಗ್ ಮತ್ತು ಪ್ರೀಮಿಯಂ ಫೀಚರ್ಗಳೊಂದಿಗೆ ಬಾರಳಿದ್ದು ಇದರ ಪ್ರತಿ ಫ್ರೇಮ್, ಪ್ರತಿ ಟ್ಯಾಪ್, ಪ್ರತಿ ಕ್ಷಣದಿಂದ ಹೆಚ್ಚಿನದನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾದ 108MP ಮಾಸ್ಟರ್ ಪಿಕ್ಸೆಲ್ ಆವೃತ್ತಿಯಾದ ಈ ಫೋನ್ ಪ್ರೀಮಿಯಂ ಫೀಚರ್ಗಳೊಂದಿಗೆ ಪ್ಯಾಕ್ ಆಗುವ ನಿರೀಕ್ಷಿಸಲಾಗಿದೆ. ಅಲ್ಲದೆ ಈ ಎರಡೂ ಸ್ಮಾರ್ಟ್ಫೋನ್ಗಳು Android 15 ಆಧಾರಿತ ಇತ್ತೀಚಿನ Xiaomi HyperOS 2 ನಲ್ಲಿ ಕಾರ್ಯನಿರ್ವಹಿಸುತ್ತವೆ.
Xiaomi ಉಪ ಬ್ರ್ಯಾಂಡ್ ಆಗಿರುವ ಈ Redmi ತನ್ನ ಅಧಿಕೃತ X ಪುಟದಲ್ಲಿ ಸ್ಮಾರ್ಟ್‌ಫೋನ್‌ನ ಹೊಸ ಟೀಸರ್ ವೀಡಿಯೊವನ್ನು ಪೋಸ್ಟ್ ಮಾಡಿ ದೃಢಪಡಿಸಿದೆ. ಅಲ್ಲದೆ ಕಂಪನಿಯು ಸ್ಮಾರ್ಟ್‌ಫೋನ್‌ನ ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ದೃಢಪಡಿಸಿಲ್ಲವಾದರೂ ಕೆಲವು ವರದಿಗಳ ಪ್ರಕಾರ ಇದು ಮುಂದಿನ ತಿಂಗಳಲ್ಲಿ 6ನೇ ಜನವರಿ 2025 ರಂದು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಆದರೆ ಈ ಲೇಖನದ ಸಮಯದಲ್ಲಿ ಕಂಪನಿಯ ಸೈಟ್ ಮತ್ತು ಸೋಷಲ್ ಮೀಡಿಯಾದಲ್ಲಿ ಕೆಲವ ಈ ಕೆಳಗಿನ ಪೋಸ್ಟರ್ ಮಾತ್ರ ನೀಡಲಾಗಿದೆ.
ಮೊದಲಿಗೆ Redmi Note 15 Pro 5G ಪ್ರೀಮಿಯಂ ಮಧ್ಯಮ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎರಡೂ ಫೋನ್‌ಗಳು ಬೃಹತ್ 6.83 ಇಂಚಿನ AMOLED ಡಿಸ್ಪ್ಲೇಯನ್ನು 1.5K FHD+ ರೆಸಲ್ಯೂಶನ್ ಮತ್ತು ಅತ್ಯಂತ ಮೃದುವಾದ ಅನುಭವಕ್ಕಾಗಿ 120 Hz ರಿಫ್ರೆಶ್ ಇದರೊಂದಿಗೆ IP68/IP69K ರೇಟಿಂಗ್‌ನೊಂದಿಗೆ ಡಸ್ಟ್ ಮತ್ತು ವಾಟರ್ ಪ್ರೂಫ್ ಸಹ ಹೊಂದಿದೆ. ಈ ಫೋನ್ ಪವರ್ಫುಲ್ MediaTek Dimensity 7400 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾದ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ 20MP ಸೆಲ್ಫಿ ಕ್ಯಾಮೆರಾ ಇರುತ್ತದೆ. ಇಡೀ ಸಿಸ್ಟಮ್‌ಗೆ 7000mAh ಸಾಮರ್ಥ್ಯದ ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.
Redmi Note 15 Pro 5G ಯು ಉನ್ನತಕ್ಕಾಗಿ Qualcomm Snapdragon 7s Gen 4 ಪ್ರೊಸೆಸರ್ ಅನ್ನು ಬಳಸುತ್ತದೆ. ಇದರಲ್ಲಿ 12GB ವರೆಗೆ RAM ಆಯ್ಕೆ ಬರುತ್ತದೆ. ಇದು ಕ್ಯಾಮೆರಾ ಅಡಿಯಲ್ಲಿ ಅಪ್‌ಗ್ರೇಡ್ ಪಡೆಯುತ್ತದೆ. 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್‌ನೊಂದಿಗೆ 2.5x ಆಪ್ಟಿಕಲ್ ಝೂಮ್ ಹೊಂದಿರುವ ಪ್ರತ್ಯೇಕ 50MP ಟೆಲಿಫೋಟೋ ಲೆನ್ಸ್ ಅನ್ನು ಸೇರಿಸುವುದರೊಂದಿಗೆ 32MP ಹೆಚ್ಚಿನ ರೆಸಲ್ಯೂಶನ್ ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. ಎರಡೂ ದೊಡ್ಡ 7000mAh ಬ್ಯಾಟರಿ ಫೋನ್ ಅನ್ನು ಹಂಚಿಕೊಂಡರೂ ಈ ಮಾದರಿಯು 90W ವರೆಗೆ ಹೆಚ್ಚು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ ಬೆಂಬಲಿಸುತ್ತದೆ.