ರೆಡ್ಮಿ ಕಂಪನಿಯ Redmi A7 Pro 4G ಸರಣಿಯ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿವೆ. ಇನ್ನು ರೆಡ್ಮಿ A7 4G ಹಾಗೂ ರೆಡ್ಮಿ A7 ಪ್ರೊ 4G ಈ ಎರಡು ಮೊಬೈಲ್‌ಗಳು ನಾಳೆ (ಏಪ್ರಿಲ್ 24 ರಂದು) ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಲಿವೆ. ಈ ಹೊಸ ಮೊಬೈಲ್‌ಗಳು Unisoc T7250 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಜೊತೆಗೆ 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿವೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್ ಹೊಂದಿವೆ. ಅಂದಹಾಗೆ ಈ ಎರಡು ಫೋನ್‌ಗಳು ಆಕರ್ಷಕ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ರೆಡ್ಮಿ A7 4G ಹಾಗೂ ರೆಡ್ಮಿ A7 ಪ್ರೊ 4G ಫೋನ್‌ಗಳ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಬಿಗ್ ಆಫರ್‌ನಲ್ಲಿ iPhone 17 ಖರೀದಿಸಲು ಇದು ಸಕಾಲ! 256GB ಸ್ಟೋರೇಜ್
ರೆಡ್ಮಿ A7 4G ಹಾಗೂ ರೆಡ್ಮಿ A7 ಪ್ರೊ 4G ಸ್ಮಾರ್ಟ್‌ಫೋನ್‌ಗಳು ನಾಳೆ (ಏಪ್ರಿಲ್ 24 ರಂದು) ಮಧ್ಯಾಹ್ನ 12 ರಂದು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಶುರು ಮಾಡಲಿವೆ. ರೆಡ್ಮಿ A7 ಪ್ರೊ 4G ಫೋನಿನ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆ 11,499 ರೂ.ಗಳು ಆಗಿದೆ. ಇನ್ನು ಈ ಫೋನ್ ಬ್ಲ್ಯಾಕ್ ಮತ್ತು ಸ್ಕೈ ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಲಭ್ಯವಿದೆ. ಅದೇ ರೀತಿ ರೆಡ್ಮಿ A7 4G ಮೊಬೈಲ್ 3GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆ 10,499 ರೂ.ಗಳು ಆಗಿದೆ. ಈ ಫೋನ್ ಬ್ಲ್ಯಾಕ್ ಮತ್ತು ಸ್ಕೈ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಈ ನೂತನ ಫೋನ್ 6.9 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದ್ದು ಇದರ ಸ್ಕ್ರೀನ್ 720 x 1,600 ಪಿಕ್ಸೆಲ್‌ಗಳು ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಪಡೆದಿರುವು ಜೊತೆಗೆ 800 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಇನ್ನು ಈ ಫೋನ್ ಯುನಿಸಾಕ್ T7250 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 16 ಆಧಾರಿತ ಹೈಪರ್‌ಓಎಸ್ 3 ಜೊತೆಗೆ 64GB ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ.
ಇನ್ನು ಈ ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಅಲ್ಲದೇ ಈ ಫೋನ್ 6,300mAh ಬ್ಯಾಟರಿ ಹೊಂದಿದ್ದು ಇದಕ್ಕೆ ಪೂರಕವಾಗಿ 15W ವೈರ್ಡ್ ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಆಯ್ಕೆ ಇದೆ.
ರೆಡ್ಮಿ A7 4G ಫೋನ್ 6.88 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದ್ದು ಇದರ ಸ್ಕ್ರೀನ್ 720 x 1,600 ಪಿಕ್ಸೆಲ್‌ಗಳು ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಪಡೆದಿರುವು ಜೊತೆಗೆ 800 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಇನ್ನು ಈ ಫೋನ್ ಯುನಿಸಾಕ್ T7250 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ಜೊತೆಗೆ 64GB ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ.
ಇನ್ನು ರೆಡ್ಮಿ A7 4G ಮೊಬೈಲ್ ಮೊದಲ ಕ್ಯಾಮೆರಾವು 13 ಮೆಗಾಪಿಕ್ಸಲ್ ಸೆನ್ಸಾರ್ ಬಲದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಅಲ್ಲದೇ ಈ ಫೋನ್ 6,300mAh ಬ್ಯಾಟರಿ ನೀಡಲಾಗಿದೆ. ಇದಕ್ಕೆ ಸಪೋರ್ಟಿವ್ ಆಗಿ 15W ವೈರ್ಡ್ ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಒದಗಿಸಲಾಗಿದೆ.