Redmi 7 ಇಂದು ಬಿಡುಗಡೆಯಾಗಲಿದ್ದು ಇಲ್ಲಿಂದ ಮಾಡಿ ಲೈವ್ ಸ್ಟ್ರೀಮ್ ಮತ್ತು ತಿಳಿಯಿರಿ ನಿರೀಕ್ಷಿಸಬವುದಾದ ಸ್ಪೆಸಿಫಿಕೇಷನ್ಗಳು

Updated on 18-Mar-2019
HIGHLIGHTS

ಇದು 6.26 ಇಂಚಿನ HD+ ಡಿಸ್ಪ್ಲೇ ಮತ್ತು 3900mAh ಬ್ಯಾಟರಿ ಮತ್ತು ಆಂಡ್ರಾಯ್ಡ್ ಪೈ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ತನ್ನ ಇತ್ತೀಚಿನ ಮಿಡ್ ರೇಂಜ್ ಫೋನ್ಗಳ ನಂತರ ಈಗ ಮತ್ತೋಂದು ಹೊಸ ಫೋನನ್ನು ಅನಾವರಣಗೊಳಿಸಲಿದೆ. ಈ ಫೋನನ್ನು Redmi 7 ಎಂದು ಹೆಸರಿಸಿದ್ದು ಅದನ್ನು18ನೇ ಮಾರ್ಚ್ ಅಂದ್ರೆ ಇಂದು ಮಧ್ಯಾಹ್ನ 12:00 ಕ್ಕೆ ಬಿಡುಗಡೆಗೊಳಿಸಿದೆ. ಈ Xiaomi ಈ ಫೋನಿನ ಬಿಡುಗಡೆಗಾಗಿ ಲೈವ್ ಸ್ಟ್ರೀಮ್ ಸಹ ಮಾಡಲಿದೆ ಅದನ್ನು ನಿಮ್ಮ ಫೋನ್ಗಳಲ್ಲಿ ನೋಡಬವುದು. ಈಗ ಇದರ ಹೆಚ್ಚುವರಿ ಮಾಹಿತಿಯನ್ನು ತಿಳಿಯಬವುದು ಮತ್ತು ಲೈವ್ ಸ್ಟ್ರೀಮ್ ಮಾಡಲು ಈ ಕೆಳಗೆ ಕ್ಲಿಕ್ ಮಾಡಿ ವೀಕ್ಷಿಸಿ.

ಇದರ CEO ಲೀ ಜುನ್ ಇದರಲ್ಲಿ 3.5mm ಹೆಡ್ಫೋನ್ ಜ್ಯಾಕ್, ಇನ್ಫ್ರಾರೆಡ್ (IR ) ಬ್ಲಾಸ್ಟರ್ ಮತ್ತು ದೊಡ್ಡದಾದ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆಂದು ಬಹಿರಂಗಪಡಿಸಿದ್ದಾರೆ. ಈಗಾಗಲೇ ಮೇಲೆ ನೋಡಿದಂತೆ ಚಿತ್ರಗಳನ್ನು ಕೂಡ ಸ್ಮಾರ್ಟ್ಫೋನ್ ಹಂಚಿಕೊಂಡಿದೆ. ಇದರ ಮೋಡಲ್ ನಂಬರ್ M1810F6LE ಆಗಿದೆ. ಇದರ ಮುಖ್ಯ ಲಕ್ಷಣಗಳಿಗೆ ಸೂಚಿಸಿರುವ TENAA ಪಟ್ಟಿಯು 6.26 ಇಂಚಿನ HD+ ಡಿಸ್ಪ್ಲೇ ಮತ್ತು 3900mAh ಬ್ಯಾಟರಿ ಮತ್ತು ಆಂಡ್ರಾಯ್ಡ್ ಪೈ ಅನ್ನು ಹೊಂದಿರುತ್ತದೆ.

ಅಂತೆಯೇ ಇದು 2GB, 3GB, ಮತ್ತು 4GB RAM ಆಯ್ಕೆಗಳ ಮೂಲಕ 16GB, 32GB, ಮತ್ತು 64GB ಆನ್ಬೋರ್ಡ್ ಸ್ಟೋರೇಜ್ ಆವೃತ್ತಿಯೊಂದಿಗೆ ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿರುತ್ತದೆ. ಒಂದು ಇತ್ತೀಚಿನ ಹ್ಯಾಂಡ್-ಆನ್ ವೀಡಿಯೊವನ್ನು ನಾವು ನಂಬಿದರೆ ಸ್ನಾಪ್ಡ್ರಾಗನ್ 632 SoC ಆಗಿರಬಹುದು. ಇದು 12MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಸೆನ್ಸರೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ ಎಂದು ಸಹ ಸೂಚಿಸುತ್ತದೆ.

ಈ ಫೋನ್ ಕಪ್ಪು, ನೀಲಿ, ಹಸಿರು, ಬೂದು, ಪಿಂಕ್, ಪರ್ಪಲ್, ರೆಡ್ ಮತ್ತು ವೈಟ್ ಸೇರಿದಂತೆ ವಿವಿಧ ಬಣ್ಣದ ರೂಪಾಂತರಗಳಿವೆ ಎಂದು ಸಹ ಸೂಚಿಸಲಾಗಿದೆ. TENAA ಪಟ್ಟಿಯಲ್ಲಿ ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕಿನ ಸೆನ್ಸರ್, ಫಿಂಗರ್ಪ್ರಿಂಟ್ ಸಂವೇದಕ ಮತ್ತು ಸಾಮೀಪ್ಯ ಸಂವೇದಕವನ್ನು ಸಹ ಪಟ್ಟಿ ಮಾಡಲಾಗಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :