ಇಂದು Redmi 15A ಮೊಬೈಲ್‌ ಮಾರಾಟ ಪ್ರಾರಂಭ! ಬಜೆಟ್‌ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌

HIGHLIGHTS

ಇಂದು (ಏಪ್ರಿಲ್‌ 3 ರಂದು) ರೆಡ್ಮಿ 15A ಮೊಬೈಲ್‌ ಸೇಲ್‌

ರೆಡ್ಮಿ 15A ಸ್ಮಾರ್ಟ್‌ಫೋನ್‌ ಮೂರು ಆಕರ್ಷಕ ಕಲರ್‌ ಆಯ್ಕೆ ಪಡೆದಿದೆ

ಈ ಹೊಸ ಮೊಬೈಲ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ

ಇಂದು Redmi 15A ಮೊಬೈಲ್‌ ಮಾರಾಟ ಪ್ರಾರಂಭ! ಬಜೆಟ್‌ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌

ಜನಪ್ರಿಯ Redmi ಕಂಪನಿಯ ನೂತನ Redmi 15A ಸ್ಮಾರ್ಟ್‌ಫೋನ್‌ ಇಂದು (ಏಪ್ರಿಲ್‌ 3 ರಂದು) ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ ಆಕ್ಟಾ ಕೋರ್ T8300 5G SoC ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಹಾಗೆಯೇ ಈ ಮೊಬೈಲ್‌ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇನ್ನು ಈ ಮೊಬೈಲ್‌ ಏಸ್‌ ಬ್ಲ್ಯಾಕ್‌, ಅಮೇಜ್ ಪರ್ಪಲ್ ಹಾಗೂ Awesome ಬ್ಲೂ ಕಲರ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ರೆಡ್ಮಿ 15A ಸ್ಮಾರ್ಟ್‌ಫೋನ್‌ನ ಸೇಲ್‌, ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಸ್ಟೈಲಿಶ್‌ ಲುಕ್‌ನಲ್ಲಿ Redmi Note 15 SE 5G ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ನೋಡಿ

Redmi 15A ಮೊಬೈಲ್ ಸೇಲ್‌ ಮಾಹಿತಿ

ದೇಶಿಯ ಮೊಬೈಲ್‌ ಮಾರುಕಟ್ಟೆ ಪ್ರವೇಶಿಸಿರುವ ರೆಡ್ಮಿ 15A ಮೊಬೈಲ್‌ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಈ ಮೊಬೈಲ್‌ನ ಫಸ್ಟ್‌ ಸೇಲ್‌ ಇಂದು (ಏಪ್ರಿಲ್‌ 3 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಅಧಿಕೃತವಾಗಿ ಪ್ರಾರಂಭ ಮಾಡಲಿದೆ. ಇನ್ನು ಈ ಫೋನಿನ ಆರಂಭಿಕ 4GB + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 12,999 ರೂ.ಗಳು ಆಗಿದೆ. ಹಾಗೆಯೇ 4GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 14,499 ರೂ.ಗಳು ಆಗಿದೆ. ಅದೇ ರೀತಿ 6GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 16,499 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ ಏಸ್‌ ಬ್ಲ್ಯಾಕ್‌, ಅಮೇಜ್ ಪರ್ಪಲ್, Awesome ಬ್ಲೂ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Redmi 15A

ರೆಡ್ಮಿ 15A ಮೊಬೈಲ್‌ ಫೀಚರ್ಸ್‌ ಹೀಗಿವೆ

ಹೊಸ ರೆಡ್ಮಿ 15A ಮೊಬೈಲ್‌ 6.6.9 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 60Hz, 90Hz ಮತ್ತು 120Hz ನಡುವಿನ ರಿಫ್ರೆಶ್ ರೇಟ್‌ ಮತ್ತು 800 nits ಬ್ರೈಟ್ನೆಸ್‌ ಸೌಲಭ್ಯ ಅನ್ನು ಪಡೆದಿದೆ. ಇದರೊಂದಿಗೆ HyperOS 3 ಬೆಂಬಲಿತ ಆಂಡ್ರಾಯ್ಡ್ 16 ಓಎಸ್‌ ಜೊತೆಗೆ ಆಕ್ಟಾ ಕೋರ್ T8300 5G SoC ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮೈಕ್ರೋ SD ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 2TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಪಡೆದಿದೆ. ಅಲ್ಲದೇ ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ ಈ ಫೋನ್‌ IP52 ರೇಟಿಂಗ್ ಪಡೆದುಕೊಂಡಿದೆ.

ಹಾಗೆಯೇ ರೆಡ್ಮಿ 15A ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಮೊದಲ ಕ್ಯಾಮೆರಾವು 32MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ ಹಾಗೂ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್‌ ಪವರ್‌ನಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ 8 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ ಜೊತೆಗೆ 15W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಹಾಗೆಯೇ 7.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.‌

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo