Redmi 13 5G Prime Edition
ಭಾರತದಲ್ಲಿ ನಡೆಯುತ್ತಿರುವ ವರ್ಷದ ಅತಿದೊಡ್ಡ ಮಾರಾಟದಲ್ಲಿ ಅಮೆಜಾನ್ ಜನಪ್ರಿಯ ಮತ್ತು ಸಿಕ್ಕಾಪಟ್ಟೆ ಹೆಚ್ಚು ಮಾರಾಟವಾಗುತ್ತಿರುವ Redmi 13 5G Prime Edition ಸ್ಮಾರ್ಟ್ಫೋನ್ 108MP ಕ್ಯಾಮೆರಾ ಮತ್ತು 8GB RAM ಕೇವಲ ₹10,999 ರೂಗಳಿಗೆ ಪಟ್ಟಿಯಾಗಿದೆ ಆದರೆ ವಿನಿಮಯ ಆಫರ್ನೊಂದಿಗೆ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ಮಾದರಿಯಲ್ಲಿ ಲಭ್ಯವಿದ್ದು ಯಾರಿಗೆ ಹೆಚ್ಚು RAM ಮತ್ತು ಅತ್ಯುತ್ತಮ ಕ್ಯಾಮೆರಾ ಸುಮಾರು ಹತ್ತು ಸಾವಿರದೊಳಗೆ ಹುಡುಕುತ್ತಿರುವವವರಿಗೆ ಒಂದೊಳ್ಳೆ ಆಯ್ಕೆಯಾಗಲಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಮೇಲೆ ಆಕರ್ಷಕ ಮತ್ತು ಕೈ ತಟ್ಟುವ ವಿನಿಮಯ ಆಫರ್ ನೀಡಿ ಜನರ ಗಮನ ಸೆಳೆಯುತ್ತಿದೆ. ಹಾಗಾದ್ರೆ ಇದರ ಸಂಪೂರ್ಣ ಮಾಹಿತಿ ಬಗ್ಗೆ ಈ ಕೆಳಗೆ ಪಡೆಯಬಹುದು.
ಈ ಜನಪ್ರಿಯ Redmi 13 5G Prime Edition ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಕೇವಲ ಒಂದೇ ಒಂದು ಮಾದರಿಯಲ್ಲಿ ಲಭ್ಯವಿದ್ದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹10,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Redmi 13 5G Prime Edition ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 10,400 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ ಸ್ಮಾರ್ಟ್‌ಫೋನ್ ಹೆಚ್ಚು ಬಾಳಿಕೆ ಬರುವ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಮುಂಭಾಗ ಮತ್ತು ಗಾಜಿನ ಹಿಂಭಾಗದೊಂದಿಗೆ ನಯವಾದ ಪ್ರೀಮಿಯಂ-ಲುಕಿಂಗ್ ಕ್ರಿಸ್ಟಲ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ಅನ್ನು ಹೊಂದಿದೆ. ಇದು ಸುಗಮ ದೃಶ್ಯ ಅನುಭವಕ್ಕಾಗಿ 120Hz ಅಡಾಪ್ಟಿವ್‌ಸಿಂಕ್ ರಿಫ್ರೆಶ್ ದರದೊಂದಿಗೆ 6.79 ಇಂಚಿನ ದೊಡ್ಡ FHD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ Snapdragon 4 Gen2 ಆಕ್ಸಿಲರೇಟೆಡ್ ಎಡಿಷನ್ ಮೊಬೈಲ್ ಪ್ಲಾಟ್‌ಫಾರ್ಮ್ ಬೆಂಬಲಿಸುತ್ತದೆ.
Also Read: Diwali 2025: ಸುಮಾರು ₹1000 ರೂಗಳೊಳಗೆ ದೀಪಾವಳಿಗೆ ಮನೆಯನ್ನು ರಂಜಿಸಲು 5 ಅತ್ಯುತ್ತಮ ಸ್ಮಾರ್ಟ್ ಲೈಟ್!
ಇದು 8GB ವರೆಗೆ RAM ಮತ್ತು 128GB ವರೆಗೆ UFS 2.2 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದ್ದು 1TB ವರೆಗೆ ವಿಸ್ತರಿಸಬಹುದಾಗಿದೆ. ಪ್ರಮುಖ ವೈಶಿಷ್ಟ್ಯವೆಂದರೆ ರಿಂಗ್ ಫ್ಲ್ಯಾಶ್ ಹೊಂದಿರುವ 108MP ಮುಖ್ಯ ಹಿಂಬದಿಯ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು ಸೆಲ್ಫಿಗಳಿಗಾಗಿ 13MP ಮುಂಭಾಗದ ಕ್ಯಾಮೆರಾ. ಈ ಫೋನ್ ಗಣನೀಯ 5030mAh ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Xiaomi HyperOS ನೊಂದಿಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಇದು 36 ತಿಂಗಳ ವಿಳಂಬ-ಮುಕ್ತ ಅನುಭವ ಮತ್ತು ಭವಿಷ್ಯದ ಸಾಫ್ಟ್‌ವೇರ್ ಬೆಂಬಲವನ್ನು ಭರವಸೆ ನೀಡುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, 3.5mm ಹೆಡ್‌ಫೋನ್ ಜ್ಯಾಕ್ ಮತ್ತು IR ಬ್ಲಾಸ್ಟರ್ ಸೇರಿವೆ.