ರಿಯಲ್‌ಮಿ ಕಂಪನಿಯ ಹೊಸ Realme P4s 5G ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಬೆಲೆ ಹಾಗೂ ಫೀಚರ್ಸ್ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಇಂದು (ಸೆಪ್ಟೆಂಬರ್ 3 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಸೇಲ್ ಪ್ರಾರಂಭ ಮಾಡಿದೆ. ಈ ನೂತನ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್ ಜೊತೆಗೆ 8,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಇನ್ನು ಹಾಗೆಯೇ ಈ ಮೊಬೈಲ್ 50MP ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಎಂಪೈರ್ ಗೋಲ್ಡ್ ಮತ್ತು ಘೋಸ್ಟ್ ಸಿಲ್ವರ್ ಕಲರ್ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ರಿಯಲ್‌ಮಿ P4s 5G ಮೊಬೈಲ್ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Meta Muse Voice Transcribe ಬಿಡುಗಡೆ: 70ಕ್ಕೂ ಹೆಚ್ಚು ಭಾಷೆಗಳಲ್ಲಿ ತರಬೇತಿ, ಕನ್ನಡಕ್ಕೂ ಬೆಂಬಲ
ಮೀಡ್‌ರೇಂಜ್ ಬೆಲೆಯಲ್ಲಿ ನೂತನವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರಿಯಲ್‌ಮಿ P4s 5G ಮೊಬೈಲ್ ಇಂದು (ಸೆಪ್ಟೆಂಬರ್ 3 ರಿಂದ) ಮಧ್ಯಾಹ್ನ 12 ಗಂಟೆಗೆ ದೇಶೀಯ ಮಾರುಕಟ್ಟೆಯಲ್ಲಿ ಸೇಲ್ ಶುರು ಮಾಡಲಿದೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್ ವೇರಿಯಂಟ್ 34,999 ರೂ.ಗಳ ಬೆಲೆಯನ್ನು ಹೊಂದಿದೆ. ಇನ್ನು 8GB RAM + 256GB ಸ್ಟೋರೇಜ್ ವೇರಿಯಂಟ್ 37,999 ರೂ.ಗಳ ಬೆಲೆ ಪಡೆದುಕೊಂಡಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ವೇರಿಯಂಟ್ 41,999 ರೂ.ಗಳ ಬೆಲೆಯನ್ನು ಒಳಗೊಂಡಿದೆ. ಅಂದಹಾಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈ ಮೊಬೈಲ್ ಮಾರಾಟಕ್ಕೆ ಬರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಎಲೆಕ್ಟ್ರಿಕ್ ಸಯಾನ್ ಮತ್ತು ಟೈಟಾನಿಯಂ ಗ್ರೇ ಕಲರ್ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ P4s 5G ಮೊಬೈಲ್ 6.78 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಜೊತೆಗೆ 1,272 x 2,772 ಪಿಕ್ಸಲ್ ರೆಸಲ್ಯೂಶನ ಸೌಲಭ್ಯ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಮೂರು ಭಿನ್ನ ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಅಲ್ಲದೇ ಈ ಫೋನ್ IP66 + IP68 + IP69 ರೇಟಿಂಗ್ ಸೌಲಭ್ಯವನ್ನು ಹೊಂದಿದೆ.
ಹಾಗೆಯೇ ರಿಯಲ್‌ಮಿ P4s 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್ ಬಲವನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 8,000mAh ಬ್ಯಾಟರಿ ಸಪೋರ್ಟ್ ಹೊಂದಿರುವ ಜೊತೆಗೆ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದುಕೊಂಡಿದೆ. ಇದು 5G, 4G LTE, Wi-Fi 5, ಬ್ಲೂಟೂತ್ 5.4, USB ಟೈಪ್-ಸಿ ಪೋರ್ಟ್ ಸಪೋರ್ಟ್ ಮಾಡುತ್ತದೆ.