realme P4 Power
Realme P4 Power Sale: ರಿಯಲ್‌ಮಿ ಮೊಬೈಲ್ ಸಂಸ್ಥೆಯು ಕಳೆದ ವಾರ ಬಿಡುಗಡೆ ಮಾಡಿರುವ ತನ್ನ ನೂತನ Realme P4 Power 5G ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಯಲ್ಲಿ ನಾಳೆ (ಫೆಬ್ರವರಿ 5 ರಂದು) ಮೊದಲ ಮಾರಾಟ ಪ್ರಾರಂಭಿಸಲಿದೆ. ಅಂದಹಾಗೆ ಈ ಮೊಬೈಲ್‌ನ ಪ್ರಮುಖ ಹೈಲೈಟ್ ಅಂಶವೆಂದರೆ ಇದರ ಬ್ಯಾಟರಿ ಆಗಿದ್ದು, ಇದು ಬರೋಬ್ಬರಿ 10,001mAh ಸಿಲಿಕಾನ್ ಕಾರ್ಬನ್ ಟೈಟಾನ್ ಬ್ಯಾಟರಿ ಬ್ಯಾಕ್‌ಅಪ್ ಪವರ್ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುವ ಇದರೊಂದಿಗೆ 144Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿದೆ. Realme P4 Power 5G ಫೋನಿನ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸದ್ಯದಲ್ಲೇ ಬರ್ತಿದೆ Infinix Note 60 ಸ್ಮಾರ್ಟ್‌ಫೋನ್ ಸರಣಿ! ಬಿಡುಗಡೆ ಮುನ್ನವೇ ಫೀಚರ್ಸ್ ಲೀಕ್
Realme P4 Power 5G ಮೊಬೈಲ್ ನಾಳೆ (ಫೆಬ್ರವರಿ 5 ರಂದು) ಮಧ್ಯಾಹ್ನ 12 ಗಂಟೆಗೆ realme.com, Flipkart ಹಾಗೂ ರಿಟೇಲ್ ಸ್ಟೋರ್‌ಗಳ ಮೂಲಕ ಮಾರಾಟ ಶುರು ಮಾಡಲಿದೆ. ಅಂದಹಾಗೆ ಈ ಮೊಬೈಲ್ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನಿನ ಆರಂಭಿಕ 8GB RAM +128GB ಸ್ಟೋರೇಜ್ ವೇರಿಯಂಟ್ ದರವು 25,999 ರೂಗಳು ಆಗಿದೆ. ಹಾಗೆಯೇ ಇದರ 8GB + 256GB ಸ್ಟೋರೇಜ್ ವೇರಿಯಂಟ್ 27,999 ರೂಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಅಲ್ಲದೇ 12GB + 256GB ಸ್ಟೋರೇಜ್ ವೇರಿಯಂಟ್ ದರವು 30,999 ರೂಗಳು ಆಗಿದೆ. ಈ ಮೊಬೈಲ್ ಟ್ರಾನ್ಸ್‌ಸಿಲ್ವರ್, ಟ್ರಾನ್ಸ್‌ಆರೆಂಜ್ ಮತ್ತು ಟ್ರಾನ್ಸ್‌ಬ್ಲೂ ಬಣ್ಣಗಳಲ್ಲಿ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿವೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಹಾಗೂ ಆಕರ್ಷಕ no-cost EMI ಕೊಡುಗೆಗಳು ಲಭ್ಯವಾಗಲಿವೆ.
Realme P4 Power 5G ಮೊಬೈಲ್ 6.8 ಇಂಚಿನ 1.5K 4D ಕರ್ವ್+ ಹೈಪರ್‌ಗ್ಲೋ ಡಿಸ್‌ಪ್ಲೇ ಪಡೆದಿದೆ. ಇದರ ಸ್ಕ್ರೀನ್ 144Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 6,500 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ MediaTek Dimensity 7400 Ultra ಚಿಪ್‌ಸೆಟ್ ಪ್ರೊಸೆಸರ್ ಹೊಂದಿದ್ದು ಅಲ್ಲದೇ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ ಯುಐ 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ Realme P4 ಪವರ್ 5G ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾವು ಸೋನಿ IMX882 ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೌಲಭ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೇ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು 4K/30fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ನೂತನ Realme P4 Power 5G ಫೋನ್ ಪ್ರಮುಖ ಪ್ಲಾಸ್ ಪಾಯಿಂಟ್ ಎಂದರೆ ಅದರ ಬ್ಯಾಟರಿ ಆಗಿದೆ. ಇದು 10,001mAh ಸಿಲಿಕಾನ್ ಕಾರ್ಬನ್ ಟೈಟಾನ್ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದೆ. ಈ ಬ್ಯಾಟರಿಯು 32.5 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್, 932.6 ಗಂಟೆಗಳ ವರೆಗೆ ಸ್ಟ್ಯಾಂಡ್‌ಬೈ, 185.7 ಗಂಟೆಗಳ ವರೆಗೆ Spotify ಮ್ಯೂಸಿಕ್ ಪ್ಲೇಬ್ಯಾಕ್ ನೀಡಲಿದೆ. ಹಾಗೆಯೇ ಇದು ಒಂದೇ ಚಾರ್ಜ್‌ನಲ್ಲಿ 11.7 ಗಂಟೆಗಳ ವರೆಗೆ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ ಗೇಮ್‌ಪ್ಲೇ ಅನ್ನು ಒದಗಿಸಬಲ್ಲದು ಎಂದು ಹೇಳಲಾಗಿದೆ. ಇನ್ನು ಈ ಬಿಗ್ ಬ್ಯಾಟರಿಗೆ ಪೂರಕವಾಗಿ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 27W ವೈರ್ಡ್ ರಿವರ್ಸ್ ಚಾರ್ಜಿಂಗ್ ವ್ಯವಸ್ಥೆ ಸಹ ನೀಡಲಾಗಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಸೌಲಭ್ಯ ಒಳಗೊಂಡಿದೆ.