ರಿಯಲ್‌ಮಿ ಮೊಬೈಲ್ ಕಂಪನಿಯ ನೂತನ Realme P4 Lite ಸ್ಮಾರ್ಟ್‌ಫೋನ್ ಈಗಾಗಲೇ ಅಗ್ಗದ ಬೆಲೆಯ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ರಿಯಲ್‌ಮಿ P4 Lite ಮೊಬೈಲ್‌ನ P4 Lite ಫಸ್ಟ್ ಸೇಲ್ ಇಂದು (ಫೆಬ್ರವರಿ 24 ರಿಂದ) ಪ್ರಾರಂಭವಾಗಲಿದೆ. ಈ ಸ್ಮಾರ್ಟ್‌ಫೋನ್ UNISOC T7250 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು ಜೊತೆಗೆ 6,300mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದೆ. ಇಂದು ಮಾರಾಟ ಪ್ರಾರಂಭಿಸಲಿರುವ ರಿಯಲ್‌ಮಿ P4 Lite ಮೊಬೈಲ್ ಬ್ಲೂ, ಬ್ಲ್ಯಾಕ್ ಹಾಗೂ ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ರಿಯಲ್‌ಮಿ P4 Lite ಮೊಬೈಲ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Amazon ಸಂಸ್ಥೆಯ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ
ರಿಯಲ್‌ಮಿ ಕಂಪನಿಯ Realme P4 Lite ಸ್ಮಾರ್ಟ್‌ಫೋನ್ ಇಂದು (ಫೆಬ್ರವರಿ 24 ರಿಂದ) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಶುರು ಮಾಡಲಿದೆ. ಇನ್ನು ಈ ಮೊಬೈಲ್‌ನ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 7,999 ರೂ.ಗಳು ಆಗಿದೆ. ಅದೇ ರೀತಿ 4GB + 128GB ವೇರಿಯಂಟ್ ಮೊಬೈಲ್ 9,999 ರೂ.ಗಳ ಬೆಲೆಯಲ್ಲಿ ಇದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಸೀ ಬ್ಲೂ, ಓಸಿಡೀಯನ್ ಬ್ಲ್ಯಾಕ್ ಹಾಗೂ ಬೀಚ್ ಗೋಲ್ಡ್ ಕಲರ್ ಆಯ್ಕೆಗಳನ್ನು ಒಳಗೊಂಡಿದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಇ ಕಾಮರ್ಸ್, ರಿಯಲ್‌ಮಿ ವೆಬ್‌ಸೈಟ್ ಹಾಗೂ ರಿಯಲ್‌ಮಿ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದು.
Realme P4 Lite ಮೊಬೈಲ್ 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡ 6.74 ಇಂಚಿನ HD+ ಡಿಸ್‌ಪ್ಲೇ ಸೌಲಭ್ಯ ಅನ್ನು ಹೊಂದಿದೆ. ಇದರ ಸ್ಕ್ರೀನ್ 720 x 1600 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು 563 nits ಬ್ರೈಟ್ನೆಸ್ ಸಪೋರ್ಟ್ ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಅಂದಹಾಗೆ ಈ ಮೊಬೈಲ್ ಆಕ್ಟಾ ಕೋರ್ UNISOC T7250 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಇದರೊಂದಿಗೆ 4GB RAM + 64GB ಹಾಗೂ 4GB + 128GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆ ಹೊಂದಿದೆ.
ಹಾಗೆಯೇ Realme P4 Lite ಮೊಬೈಲ್ ಪ್ರಮುಖ ಹೈಲೈಟ್ ಎಂದರೆ ಇದು 6,300mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 15W VOOC ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಹಾಗೆಯೇ ಹಿಂಭಾಗದಲ್ಲಿ ಈ ಫೋನ್ 13MP ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಇದಲ್ಲದೆ ಈ ಮೊಬೈಲ್ 7.94mm ದಪ್ಪ ಮತ್ತು 201 ಗ್ರಾಂ ತೂಕವನ್ನು ಹೊಂದಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಸೌಲಭ್ಯ ಪಡೆದಿದೆ.