Realme P4 Lite ಬಿಡುಗಡೆಗೆ ಮುಹೂರ್ತ ಫಿಕ್ಸ್‌! ಬಜೆಟ್‌ ಬೆಲೆಯಲ್ಲಿ ಬಿಗ್‌ ಬ್ಯಾಟರಿ ಸೌಲಭ್ಯ

Updated on 16-Feb-2026
HIGHLIGHTS

ಶೀಘ್ರದಲ್ಲೇ Realme P4 Lite ಮೊಬೈಲ್‌ ಮಾರುಕಟ್ಟೆಗೆ ಬರಲಿದೆ

ಈ ಮೊಬೈಲ್‌ ಮೂರು ಆಕರ್ಷಕ ಕಲರ್‌ ಆಯ್ಕೆಗಳಲ್ಲಿ ಲಗ್ಗೆ ಇಡಲಿದೆ

ಮುಂಬರುವ ಈ ಫೋನ್‌ 18GB ವರೆಗೆ ಡೈನಾಮಿಕ್ RAM ಹೊಂದಿರುವ ನಿರೀಕ್ಷೆಗಳು ಇವೆ

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾದ Realme ಮೊಬೈಲ್‌ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ರಿಯಲ್‌ಮಿ ಕಂಪನಿಯು ಭಾರತದಲ್ಲಿ ಹೊಸದಾಗಿ Realme P4 Lite ಮೊಬೈಲ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಮುಂಬರುವ ಹೊಸ ಫೋನಿನ ಕೆಲವು ಫೀಚರ್ಸ್‌ಗಳು ಬಹಿರಂಗವಾಗಿದ್ದು ಮೊಬೈಲ್‌ ಬಗ್ಗೆ ಕುತೂಹಲ ಹೆಚ್ಚಿಸಿವೆ. Realme P4 Lite ಫೋನ್‌ ಅಧಿಕ ರಿಫ್ರೆಶ್ ರೇಟ್‌ ಹೊಂದಿರುವ ಡಿಸ್‌ಪ್ಲೇ ಹಾಗೂ AI ಬೆಂಬಲಿತ ಟೂಲ್‌ಗಳ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೆ Realme P4 Lite ಮೊಬೈಲ್‌ ಲಾಂಚ್‌ ದಿನಾಂಕ, ನಿರೀಕ್ಷಿತ ಫೀಚರ್ಸ್‌ ಸೇರಿದಂತೆ ಇತರೆ ಮಾಹಿತಿ ಮುಂದೆ ತಿಳಿಯೋಣ.

Also Read : ದೈತ್ಯ Motorola Razr 60 Ultra ಬೆಲೆಯಲ್ಲಿ ಭಾರೀ ಇಳಿಕೆ! ಬಿಗ್‌ ಬ್ಯಾಟರಿ, ಡ್ಯುಯಲ್‌ 50MP ಕ್ಯಾಮೆರಾ ರಚನೆ

Realme P4 Lite ನಿರೀಕ್ಷಿತ ಲಾಂಚ್ ದಿನಾಂಕ

Realme P4 Lite ಮೊಬೈಲ್‌ ಇದೇ ಫೆಬ್ರವರಿ 20 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಫೋನಿಗಾಗಿ ರಿಯಲ್‌ಮಿ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಕೂಡಾ ತೆರೆದಿದೆ. ಅಂದಹಾಗೆ Realme P4 Lite ಮೊಬೈಲ್‌ ಬೀಚ್ ಗೋಲ್ಡ್, ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸೀ ಬ್ಲೂ ಫಿನಿಶ್‌ ಕಲರ್‌ಗಳ ಆಯ್ಕೆಯನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಇನ್ನು ಈ ಫೋನ್‌ ಬೆಲೆ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿಗಳು ಇಲ್ಲ. ಅದಾಗ್ಯೂ, ಇದೊಂದು ಬಜೆಟ್‌ ದರದ ಸ್ಮಾರ್ಟ್‌ಫೋನ್‌ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

Realme P4 Lite ಮೊಬೈಲ್‌ ನಿರೀಕ್ಷಿತ ಫೀಚರ್ಸ್‌

Realme P4 Lite ಫೋನ್‌ 6.74 ಇಂಚಿನ ಐ ಕಂಫರ್ಟ್ ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 90Hz ರಿಫ್ರೆಶ್ ರೇಟ್‌ ಹಾಗೂ 180Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದುಕೊಂಡಿದೆ. ಇನ್ನು ಇದು ಸ್ಲಿಮ್ ಬೆಜೆಲ್‌ ರಚನೆ ಪಡೆದಿರುವ ಜೊತೆಗೆ ವಾಟರ್ ಡ್ರಾಪ್-ಶೈಲಿಯ ನಾಚ್ ವಿನ್ಯಾಸ ಅನ್ನು ಹೊಂದಿರಲಿದೆ. ಹಾಗೆಯೇ ಮುಂಬರುವ ಈ ಫೋನ್‌ ಆಕ್ಟಾ ಕೋರ್‌ 12nm ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಬರುವ ಸಾಧ್ಯತೆಗಳು ಇವೆ ಹಾಗೆಯೇ ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI ಸಪೋರ್ಟ್‌ ಸಹ ಒಳಗೊಂಡರಲಿದೆ ಎನ್ನಲಾಗಿದೆ. ಇದರೊಂದಿಗೆ 18GB ವರೆಗೆ ಡೈನಾಮಿಕ್ RAM ಮತ್ತು 128GB ವರೆಗೆ ಆಂತರಿಕ ಸ್ಟೋರೇಜ್‌ ಅನ್ನು ಸಪೋರ್ಟ್‌ ಮಾಡಬಹುದು.

ಅಲ್ಲದೇ Realme P4 Lite ಫೋನ್‌ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ AI ಕ್ಯಾಮೆರಾವನ್ನು ಸೆಟ್‌ಅಪ್‌ ಪಡೆದಿರುತ್ತದೆ. ಹಾಗೆಯೇ ಇದು 6,300mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡರಲಿದ್ದು ಇದಕ್ಕೆ ಅನುಗುಣವಾಗಿ 15W ಫಾಸ್ಟ್‌ ಚಾರ್ಜಿಂಗ್ ಮತ್ತು 6W ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುವುದು ಎಂದು ಹೇಳಲಾಗುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಎರಡು ದಿನಗಳವರೆಗೆ ಭಾರೀ ಬಳಕೆಯನ್ನು ತಲುಪಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಅಲ್ಲದೇ ಈ ಫೋನ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ ಸೌಲಭ್ಯ ಒಳಗೊಂಡಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :