ಇಂದು Realme P4 Lite 5G ಮೊಬೈಲ್ ಸೇಲ್ ಶುರು! ಇದು 7000mAh ಬ್ಯಾಟರಿ ಫೋನ್
ಇಂದು (ಮಾ.25 ರಂದು) ರಿಯಲ್ P4 ಲೈಟ್ 5G ಖರೀದಿಗೆ ಲಭ್ಯ
ರಿಯಲ್ P4 ಲೈಟ್ 5G ಸ್ಮಾರ್ಟ್‌ಫೋನ್ ಎರಡು ಕಲರ್ ಆಯ್ಕೆ ಪಡೆದಿದೆ
ಈ ಹೊಸ ಮೊಬೈಲ್ 7000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ
Realme ಕಂಪನಿ ಹೊಸ Realme P4 Lite 5G ಸ್ಮಾರ್ಟ್‌ಫೋನ್ ಇಂದು (ಮಾರ್ಚ್ 25 ರಂದು) ಫಸ್ಟ್ ಸೇಲ್ ಶುರು ಮಾಡಲಿದೆ. ಈ ಸ್ಮಾರ್ಟ್‌ಫೋನ್ 7000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ ಆಕ್ಟಾ ಕೋರ್ MediaTek Dimensity 6300 SoC ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಹಾಗೆಯೇ ಈ ಮೊಬೈಲ್ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇನ್ನು ಈ ಮೊಬೈಲ್ ಮೊಸಾಯಿಕ್ ಬ್ಲೂ ಮತ್ತು ಮೊಸಾಯಿಕ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ರಿಯಲ್ P4 ಲೈಟ್ 5G ಸ್ಮಾರ್ಟ್‌ಫೋನ್‌ನ ಸೇಲ್, ಬೆಲೆ, ಫೀಚರ್ಸ್ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಕಡಿಮೆ ಬೆಲೆಯ POCO C85 5G ಮೊಬೈಲ್ ಈಗ ಇನ್ನಷ್ಟು ಅಗ್ಗದ ದರದಲ್ಲಿ ಲಭ್ಯ! ಈ ಆಫರ್ ನೋಡಿ
Realme P4 Lite 5G ಮಾರಾಟದ ಡಿಟೇಲ್ಸ್
ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ರಿಯಲ್ P4 ಲೈಟ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಗಮನ ಸೆಳೆದಿದೆ. ಈ ಮೊಬೈಲ್‌ನ ಫಸ್ಟ್ ಸೇಲ್ ಇಂದು (ಮಾರ್ಚ್ 25 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ತಾಣದಲ್ಲಿ ಅಧಿಕೃತವಾಗಿ ಶುರುವಾಗಲಿದೆ. ಈ ಮೊಬೈಲ್ನ ಆರಂಭಿಕ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆ 12,999 ರೂ.ಗಳು ಆಗಿದೆ. ಹಾಗೆಯೇ 4GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 13,999 ರೂ.ಗಳು ಆಗಿದೆ. ಅದೇ ರೀತಿ 6GB + 128GB ವೇರಿಯಂಟ್ ಬೆಲೆ 15,999 ರೂ.ಗಳು ಆಗಿದೆ. ಗ್ರಾಹಕರು 1000 ರೂ.ಗಳ ಬೆಲೆಯ ಆರಂಭಿಕ ಕೊಡುಗೆ ಪಡೆಯಬಹುದು. ಇನ್ನು ಈ ಫೋನ್ ಮೊಸಾಯಿಕ್ ಬ್ಲೂ ಮತ್ತು ಮೊಸಾಯಿಕ್ ಗ್ರೀನ್ ಕಲರ್‌ಗಳ ಆಯ್ಕೆಯಲ್ಲಿ ಲಭ್ಯ. ಆಸಕ್ತ ಗ್ರಾಹಕರು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ವೆಬ್‌ಸೈಟ್ ಮೂಲಕ ಖರೀದಿಸಬಹುದು.

ರಿಯಲ್ P4 ಲೈಟ್ 5G ಫೀಚರ್ಸ್ ಹೀಗಿವೆ
ಹೊಸ ರಿಯಲ್ P4 ಲೈಟ್ 5G ಮೊಬೈಲ್ 6.8 ಇಂಚಿನ HD+ IPS LCD ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 900 nits ಬ್ರೈಟ್ನೆಸ್ ಪಡೆದಿದೆ. ಈ ಮೊಬೈಲ್ ಆಕ್ಟಾ ಕೋರ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 4GB + 64GB, 4GB + 128GB ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಮೈಕ್ರೋ SD ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 2TB ವರೆಗೆ ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.
ರಿಯಲ್ P4 ಲೈಟ್ 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್ ಸಾಮರ್ಥ್ಯದಲ್ಲಿ ಆಗಿದ್ದು ದ್ವಿತೀಯ ಕ್ಯಾಮೆರಾ ಬೇಸಿಕ್ ಸೆನ್ಸರ್ ಸೌಲಭ್ಯ ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಮೆಗಾಪಿಕ್ಸಲ್ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 7000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 15W ವೈರ್ಡ್ ಚಾರ್ಜಿಂಗ್ ಬೆಂಬಲ ಸಹ ಪಡೆದುಕೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile