ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Realme P4 Lite 5G ಮೊಬೈಲ್‌! ನಿರೀಕ್ಷಿತ ಫೀಚರ್ಸ್‌ ಹೀಗಿವೆ

HIGHLIGHTS

ರಿಯಲ್‌ P4 ಲೈಟ್‌ 5G ಫೋನ್‌ ಇಂದು (ಮಾರ್ಚ್‌ 19 ರಂದು) ಬಿಡುಗಡೆ ಆಗಲಿದೆ

ರಿಯಲ್‌ ಕಂಪನಿಯ ಈ ಫೋನ್‌ 7,000mAh ಸಾಮರ್ಥ್ಯದ ಬ್ಯಾಟರಿ ಪಡೆದಿರಲಿದೆ

ರಿಯಲ್‌ ಈ ಹೊಸ ಫೋನ್‌ ಎರಡು ಆಕರ್ಷಕ ಕಲರ್‌ ಆಯ್ಕೆಗಳೊಂದಿಗೆ ಲಗ್ಗೆ ಇಡಲಿದೆ

ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Realme P4 Lite 5G ಮೊಬೈಲ್‌! ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಜನಪ್ರಿಯ ರಿಯಲ್‌ಮಿ ಸಂಸ್ಥೆಯ ಹೊಸ Realme P4 Lite 5G ಮೊಬೈಲ್‌ ಇಂದು (ಮಾರ್ಚ್ 19 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ 7,000mAh ಬ್ಯಾಟರಿ ಸಪೋರ್ಟ್‌ ಪಡೆದಿರುವ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಮೊಸಾಯಿಕ್ ಬ್ಲೂ ಮತ್ತು ಮೊಸಾಯಿಕ್ ಗ್ರೀನ್‌ ಕಲರ್‌ಗಳ ಆಯ್ಕೆಯಲ್ಲಿ ಲಗ್ಗೆ ಇಡಲಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಪಡೆದಿರಲಿದೆ. ಹಾಗಾದರೇ ನೂತನವಾಗಿ ಮಾರುಕಟ್ಟೆಗೆ ಬರಲಿರುವ ರಿಯಲ್‌ P4 ಲೈಟ್‌ 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಅಪ್‌ಡೇಟ್ಸ್‌ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

Digit.in Survey
✅ Thank you for completing the survey!

Also Read : ಸೈಲೆಂಟ್‌ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Oppo A6s 5G ಸ್ಮಾರ್ಟ್‌ಫೋನ್‌!

Realme P4 Lite 5G ಮೊಬೈಲ್‌ ಇಂದು ಬಿಡುಗಡೆ

ರಿಯಲ್‌ಮಿ ಕಂಪನಿಯ ಹೊಸ ರಿಯಲ್‌ P4 ಲೈಟ್‌ 5G ಮೊಬೈಲ್‌ ಬಿಡುಗಡೆಗೂ ಮುನ್ನವೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 19 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಇನ್ನು ಈ ಮುಂಬರುವ ಮೊಬೈಲ್‌ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಸೇಲ್‌ ಶುರು ಮಾಡಲಿದೆ. ಹಾಗೆಯೇ ಮೊಸಾಯಿಕ್ ಬ್ಲೂ ಮತ್ತು ಮೊಸಾಯಿಕ್ ಗ್ರೀನ್‌ ಕಲರ್‌ಗಳ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಇವೆ.

Realme P4 Lite 5G

ರಿಯಲ್‌ P4 ಲೈಟ್‌ 5G ನಿರೀಕ್ಷಿತ ಫೀಚರ್ಸ್‌

ರಿಯಲ್‌ ಸಂಸ್ಥೆಯ ನೂತನ ರಿಯಲ್‌ P4 ಲೈಟ್‌ 5G ಫೋನ್‌ 144Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.74 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿರಲಿದೆ. ಇನ್ನು ನೂತನ 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಅಲ್ಲದೇ ಈ ಫೋನ್‌ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಹೊಂದಿರಲಿದ್ದು ಇದಕ್ಕೆ ಪೂರಕವಾಗಿ 44W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿರಲಿದೆ.

ರಿಯಲ್‌ P4 ಲೈಟ್‌ 5G ಡ್ಯುಯಲ್ ಮ್ಯಾಟ್ರಿಕ್ಸ್ AI ಕ್ಯಾಮೆರಾ ರಚನೆ ಎಂದು ಟೀಸ್ ಮಾಡಲಾಗಿದೆ. ಇದು 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿರಲಿದ್ದು ಹಾಗೆಯೇ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಆಯ್ಕೆ ಸಹ ಪಡೆದಿರಲಿದೆ. ಇನ್ನು ಈ ಫೋನ್‌ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ UI 7.0 ಕಾರ್ಯಕ್ಷಮತೆ ಬೆಂಬಲಿಸಲಿದೆ. ಧೂಳು ಮತ್ತು ತುಂತುರು ನಿರೋಧಕತೆಗಾಗಿ ಈ ಫೋನ್‌ IP64 ರೇಟಿಂಗ್‌ ಸೌಲಭ್ಯ ಒಳಗೊಂಡಿರುವ ಜೊತೆಗೆ MIL-STD-810H ಶಾಕ್‌ ನಿರೋಧಕತೆ ಸೌಲಭ್ಯ ನೀಡಲಿದೆ ಎಂದು ಹೇಳಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo