ನಾಳೆ 10,001mAh ಬ್ಯಾಟರಿ ಇರುವ Realme Narzo Power ಮೊಬೈಲ್‌ ಬಿಡುಗಡೆ! ಫೀಚರ್ಸ್‌ ನೋಡಿ

HIGHLIGHTS

ನಾಳೆ (ಮಾರ್ಚ್ 5 ರಂದು) ರಿಯಲ್‌ಮಿ ನಾರ್ಜೋ ಪವರ್‌ ಸ್ಮಾರ್ಟ್‌ಫೋನ್‌ ಲಾಂಚ್‌

ರಿಯಲ್‌ಮಿ ನಾರ್ಜೋ ಪವರ್‌ ಮೊಬೈಲ್‌ 50MP ಸೋನಿ ಕ್ಯಾಮೆರಾ ಪಡೆದಿರಲಿದೆ

ಈ ಮೊಬೈಲ್‌ 80W ಫಾಸ್ಟ್‌ ಚಾರ್ಜಿಂಗ್‌ ಜೊತೆಗೆ 27W ರಿವರ್ಸ್ ಚಾರ್ಜಿಂಗ್ ಪಡೆದಿರಲಿದೆ

Realme Narzo Power: ರಿಯಲ್‌ಮಿ ಕಂಪನಿಯು ನೂತನ Realme Narzo Power ಮೊಬೈಲ್‌ ನಾಳೆ (ಮಾರ್ಚ್ 5 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಆಗಲಿದೆ. ಈ ಫೋನ್‌ ಬಿಡುಗಡೆ ಕುರಿತು ಈಗಾಗಲೇ ಅಮೆಜಾನ್‌ ತಾಣದಲ್ಲಿ ಮೈಕ್ರೋ ಪೇಜ್‌ ಕೂಡಾ ತೆರೆಯಲಾಗಿದೆ. ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಮೊಬೈಲ್‌ 50MP ಸೋನಿ IMX882 OIS ಕ್ಯಾಮೆರಾ ಒಳಗೊಂಡಿರಲಿದೆ. ಹಾಗೆಯೇ Mediatek Dimensity 7400 Ultra ಪ್ರೊಸೆಸರ್‌ ಸಾಮರ್ಥ್ಯ ಪಡೆದಿರುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಅಂದಹಾಗೆ 10,001mAh ಬ್ಯಾಟರಿ ಸೌಲಭ್ಯ ಈ ಫೋನಿನ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೋ ಪವರ್‌ ಸ್ಮಾರ್ಟ್‌ಫೋನ್‌ನ ಲಾಂಚ್‌ ದಿನಾಂಕ, ಬೆಲೆ, ನಿರೀಕ್ಷಿತ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ವೇಗದ ಪ್ರೊಸೆಸರ್‌ ಇರುವ Realme GT 7 Pro ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ

Realme Narzo Power ಮೊಬೈಲ್‌ ಬಿಡುಗಡೆ ದಿನಾಂಕ

ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ತನ್ನ ರಿಯಲ್‌ಮಿ ನಾರ್ಜೋ ಪವರ್‌ ಮೊಬೈಲ್‌ ಅನ್ನು ನಾಳೆ (ಮಾರ್ಚ್‌ 5 ರಂದು) ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್‌ ಬಿಡುಗಡೆ ಕುರಿತು ಈಗಾಗಲೇ ಅಮೆಜಾನ್‌ ತಾಣದಲ್ಲಿ ಮೈಕ್ರೋ ಪೇಜ್‌ ಕೂಡಾ ತೆರೆಯಲಾಗಿದೆ. ಇನ್ನು ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ. ಈ ಮೊಬೈಲ್‌ ಟೈಟಾನ್ ಸಿಲ್ವರ್ ಮತ್ತು ಟೈಟಾನ್ ಬ್ಲೂ ಬಣ್ಣದ ಆಯ್ಕೆಗಳನ್ನು ಪಡೆದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್‌ನ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

ರಿಯಲ್‌ಮಿ ನಾರ್ಜೋ ಪವರ್‌ ನಿರೀಕ್ಷಿತ ಫೀಚರ್ಸ್‌

ರಿಯಲ್‌ಮಿ ನಾರ್ಜೋ ಪವರ್‌ ಫೋನ್‌ 6,500 nits ಪೀಕ್ ಬ್ರೈಟ್‌ನೆಸ್, HRD 10+ ಮತ್ತು ನೆಟ್‌ಫ್ಲಿಕ್ಸ್ HRD ಜೊತೆಗೆ 144Hz ರಿಫ್ರೆಶ್‌ ರೇಟ್‌ ಹೈಪರ್‌ಗ್ಲೋ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಅಲ್ಲದೇ ಈ ಫೋನ್‌ Meditek Dimensity 7400 Ultra ಮತ್ತು HyperVision+ AI ಚಿಪ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ ಯುಐ 7.0 ನಲ್ಲಿ ರನ್‌ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಾಗೆಯೇ ರಿಯಲ್‌ಮಿ ನಾರ್ಜೋ ಪವರ್‌ ಮೊಬೈಲ್‌ 50MP ಸೋನಿ IMX882 OIS ಕ್ಯಾಮೆರಾ ಜೊತೆಗೆ AI ಇನ್‌ಸ್ಟಂಟ್ ಕ್ಲಿಪ್, AI ಲೈಟ್‌ಮೀ ಮತ್ತು AI ಸ್ಟೈಲ್‌ಮೀ ನಂತಹ ಆಯ್ಕೆಗಳನ್ನು ಹೊಂದಿರುವುದು ಖಚಿತ ಎನ್ನಲಾಗಿದೆ. ಇನ್ನು ಈ ಮೊಬೈಲ್‌ 10,001mAh ಬ್ಯಾಟರಿ ಸಪೋರ್ಟ್‌ ಜೊತೆಗೆ 80W ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿರಲಿದೆ. ಇದು 36 ನಿಮಿಷಗಳಲ್ಲಿ 50% ನಷ್ಟು ಬ್ಯಾಟರಿ ಭರ್ತಿ ಮಾಡಬಲ್ಲದು ಎಂದು ಹೇಳಲಾಗಿದೆ. ಇದರೊಂದಿಗೆ 27W ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡಲಿದೆ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :