Realme Narzo N53 ಇಂದು ಮಧ್ಯಾಹ್ನ ಆರಂಭ! ನಿಮ್ಮ ಬಜೆಟ್ ₹10,000 ಆಗಿದ್ದರೆ ಈ ಡೀಲ್ ನೋಡಲೇಬೇಕು!

Updated on 22-May-2023
HIGHLIGHTS

ರಿಯಲ್‌ಮಿ ಭಾರತದಲ್ಲಿ ಇತ್ತೀಚೆಗೆ ತನ್ನ ಬಜೆಟ್ ಸ್ನೇಹಿ ವಿಭಾಗದಲ್ಲಿ ಅತ್ಯತ್ತಮ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

Realme Narzo N53 ಇಂದು ಮಧ್ಯಾಹ್ನ ಆರಂಭವಾಗಲಿದ್ದು ನಿಮ್ಮ ಬಜೆಟ್ ₹10,000 ಆಗಿದ್ದರೆ ಈ ಡೀಲ್ ನೋಡಲೇಬೇಕು!

Realme ವಿಶೇಷ ಮಾರಾಟದ ಸಮಯದಲ್ಲಿ Realme Narzo N53 ಅನ್ನು ಅತಿ ಕಡಿಮೆ ಬೆಲೆಗೆ ಹೆಚ್ಚುವರಿ ಡೀಲ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

Realme Narzo N53 Sale: ರಿಯಲ್‌ಮಿ ಭಾರತದಲ್ಲಿ ಇತ್ತೀಚೆಗೆ ತನ್ನ ಬಜೆಟ್ ಸ್ನೇಹಿ ವಿಭಾಗದಲ್ಲಿ ಅತ್ಯತ್ತಮ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಅಂದ್ರೆ Realme Narzo N53 ಇಂದು ಮಧ್ಯಾಹ್ನ ಆರಂಭವಾಗಲಿದ್ದು ನಿಮ್ಮ ಬಜೆಟ್ ₹10,000 ಆಗಿದ್ದರೆ ಈ ಡೀಲ್ ನೋಡಲೇಬೇಕು! ಏಕೆಂದರೆ ಈ ಲೇಖನದಲ್ಲಿ ನಾವು ಮಾರಾಟಕ್ಕೆ ಸಿದ್ದವಾಗಿರುವ Realme Narzo N53 ಸ್ಮಾರ್ಟ್ಫೋನ್ ಬಗ್ಗೆ ಮಾತನಾಡುತ್ತಿದ್ದೇವೆ. ಏಕೆಂದರೆ Realme ವಿಶೇಷ ಮಾರಾಟದ ಸಮಯದಲ್ಲಿ Realme Narzo N53 ಅನ್ನು ಅತಿ ಕಡಿಮೆ ಬೆಲೆಗೆ ಹೆಚ್ಚುವರಿ ಡೀಲ್‌ಗಳೊಂದಿಗೆ  ಮಾರಾಟ ಮಾಡಲಾಗುತ್ತದೆ.

Realme Narzo N53 ಆಫರ್ಸ್:

ಈ Realme Narzo N53 ಸ್ಮಾರ್ಟ್ಫೋನ್ ವಿಶೇಷ ಮಾರಾಟವನ್ನು ಅಮೆಜಾನ್ ಮತ್ತು ರಿಯಲ್‌ಮಿ ಇಂಡಿಯಾದ ವೆಬ್‌ಸೈಟ್ ಮೂಲಕ ಭಾರತದಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಗೆ ನಡೆಸಲಾಗುವುದು. ಈ ಅವಧಿಯಲ್ಲಿ 4GB RAM + 64GB ಸ್ಟೋರೇಜ್ ಅನ್ನು ರೂ 750 ವರೆಗೆ ರಿಯಾಯಿತಿಯೊಂದಿಗೆ ಖರೀದಿಸಬಹುದು ಮತ್ತು ಹೆಚ್ಚಿನ 6GB RAM + 128GB ಸ್ಟೋರೇಜ್ ಅನ್ನು ರೂ 1,000 ವರೆಗೆ ರಿಯಾಯಿತಿಯೊಂದಿಗೆ ಖರೀದಿಸಬಹುದು. ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಹೇಳಿದ ರಿಯಾಯಿತಿಗಳೊಂದಿಗೆ ಖರೀದಿಸಬಹುದು.

https://twitter.com/realmenarzoIN/status/1660514135300272129?ref_src=twsrc%5Etfw

Realme Narzo N53 ವೈಶಿಷ್ಟ್ಯಗಳು

Realme Narzo N53 ಸ್ಮಾರ್ಟ್ಫೋನ್ 6.74 ಇಂಚಿನ IPS LCD HD+ ಡಿಸ್ಪ್ಲೇಯನ್ನು ಹೊಂದಿದ್ದು ಅದು 90Hz ರಿಫ್ರೆಶ್ ದರವನ್ನು ನೀಡುತ್ತದೆ. ಇದು Android 13 OS ಮತ್ತು Realme UI ನೊಂದಿಗೆ ಪೂರ್ವ ಲೋಡ್ ಆಗಿದೆ. ಸೆಕ್ಯೂರಿಟಿಗಾಗಿ ಫೋನ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುತ್ತದೆ. ಸ್ಮಾರ್ಟ್ಫೋನ್ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾ ಮತ್ತು 50 ಮೆಗಾಪಿಕ್ಸೆಲ್ ಮತ್ತು 0.3-ಮೆಗಾಪಿಕ್ಸೆಲ್ ಡ್ಯುಯಲ್-ಕ್ಯಾಮೆರಾ ಘಟಕವನ್ನು ಹೊಂದಿದೆ.

Realme Narzo N53 ಯುನಿಸೊಕ್ T612 ಚಿಪ್‌ಸೆಟ್, 6GB LPDDR4x RAM ಮತ್ತು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 128 GB UFS 2.2 ಸ್ಟೋರೇಜ್ ಅನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮತ್ತು 6GB ವರೆಗಿನ ವರ್ಚುವಲ್ RAM ಅನ್ನು ಸಹ ಹೊಂದಿದೆ.

Realme Narzo N53 ಬೆಲೆ:

Realme Narzo N53 ಸ್ಮಾರ್ಟ್ಫೋನ್ 4GB + 64GB ಸ್ಟೋರೇಜ್ ಬೆಲೆ 8,999 ರೂ ಮತ್ತು 6GB + 128GB ಬೆಲೆ 10,999 ರೂ. ಫೋನ್‌ನ ಎರಡು ಬಣ್ಣದ ಆಯ್ಕೆಗಳೆಂದರೆ ಫೆದರ್ ಗೋಲ್ಡ್ ಮತ್ತು ಫೆದರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :