Realme Narzo 90 5G first sale starts with deals
Realme Narzo 90 5G ಫೋನ್ ಇಂದು ಮೊದಲ ಮಾರಾಟದಲ್ಲಿ ಲಭ್ಯ. ವರ್ಷದ ಅಂತ್ಯದ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಲು ಸಿದ್ಧವಾಗಿದ್ದು ನಿಮ್ಮ ಬಜೆಟ್ ಬೆಲೆಯಲ್ಲಿ ಹೊಸ ಫೋನ್ ಹುಡುಕುತ್ತಿರುವವರಿಗೆ ಭರ್ಜರಿ ಸುದ್ದಿ ಇಲ್ಲಿದೆ. ಬಹುನಿರೀಕ್ಷಿತ Realme Narzo 90 5G ಫೋನ್ ಇಂದು ಅಂದರೆ 24ನೇ ಡಿಸೆಂಬರ್ 2025 ರಂದು ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈ ಫೋನ್ ಕೇವಲ ಅಮೆಜಾನ್ ಇಂಡಿಯಾ ಮೂಲಕ ಸಿಗಲಿದೆ ದೊಡ್ಡ ಬ್ಯಾಟರಿ ಮತ್ತು ಸೂಪರ್ ಡಿಸ್‌ಪ್ಲೇ ಮೂಲಕ ಮಾತ್ರ ಜನರ ಗಮನ ಸೆಳೆಯುತ್ತದೆ ಸೆಳೆದಿದೆ.
Also Read: ಅಮೆಜಾನ್‌ನಲ್ಲಿ ಇಂದು 43 ಇಂಚಿನ 4K QLED Google Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
ರಿಯಲ್‌ಮಿ ಕಂಪನಿಯು ಈ Realme Narzo 90 ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಎರಡು ವೆರಿಯಂಟ್‌ಗಳಿವೆ. ಇದರ 6GB + 128GB ಮಾಡೆಲ್‌ಗೆ ₹16,999 ರೂಗಳಾಗಿದ್ದು ಇದರ ಮತ್ತೊಂದು 8GB + 128GB ಮಾದರಿಗೆ 17,499 ರೂಗಳಾಗಿವೆ. ಆದರೆ ಇಂದು ನಡೆಯುವ ಮೊದಲ ಸೇಲ್‌ನಲ್ಲಿ ನಿಮಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಆಸಕ್ತರು ಎಸ್‌ಬಿಐ (SBI) ಅಥವಾ ಇತರ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಅಥವಾ ಅಮೆಜಾನ್ ಕೂಪನ್ ಅಪ್ಲೈ ಮಾಡಿದರೆ ನಿಮಗೆ ₹1,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಇದರಿಂದ ಈ ಫೋನ್ ಕೇವಲ ₹15,999 ಕ್ಕೆ ನಿಮಗೆ ಸಿಗುವ ಸಾಧ್ಯತೆ ಇದೆ. ನೆನಪಿರಲಿ ಈ ಆಫರ್ ಇಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ ಸ್ಟಾಕ್ ಇರುವವರೆಗೆ ಮಾತ್ರ ಇರುತ್ತದೆ.
ಈ ಫೋನಿನ ಹೈಲೈಟ್ ಎಂದರೆ ಇದರ 7,000mAh ಬ್ಯಾಟರಿ ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಆರಾಮವಾಗಿ ಎರಡು ದಿನ ಬಳಸಬಹುದೆಂದು ಕಂಪನಿ ಹೇಳಿದೆ. ಇಷ್ಟು ದೊಡ್ಡ ಬ್ಯಾಟರಿ ಇದ್ದರೆ ಕೂಡ ಇದನ್ನು ವೇಗವಾಗಿ ಚಾರ್ಜ್ ಮಾಡಲು 60W SUPERVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದ ಕೇವಲ 31 ನಿಮಿಷದಲ್ಲಿ ಅರ್ಧದಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಫೋನಿನ ಡಿಸ್‌ಪ್ಲೇ ವಿಷಯಕ್ಕೆ ಬಂದರೆ ಇದು 6.57 ಇಂಚಿನ AMOLED ಪರದೆಯನ್ನು ಹೊಂದಿದ್ದು 144Hz ರಿಫ್ರೆಶ್ ರೇಟ್ ಹೊಂದಿದೆ. ಇದರಿಂದ ಫೋನ್ ಬಳಸುವಾಗ ಅಥವಾ ಆಟವಾಡುವಾಗ ತುಂಬಾ ಸ್ಮೂತ್ ಆಗಿರುತ್ತದೆ.
Also Read: ಗೂಗಲ್‌ನಿಂದ ಹೊಸ Emergency Location Service ಪರಿಚಯ! ಇದರ ಬಳಕೆ ಮತ್ತು ಪ್ರಯೋಜನಗಳೇನು?
ಫೋನಿನ ಒಳಗಡೆ MediaTek Dimensity 6400 MAX ಪ್ರೊಸೆಸರ್ ಇರುತ್ತದೆ. ಇದು 5G ಇಂಟರ್ನೆಟ್ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಫೋಟೋಗಳಿಗಾಗಿ ಹಿಂದೆ 50MP ಪ್ರೈಮರಿ ಕ್ಯಾಮೆರಾ ಮತ್ 8MP ಮೊನೋಕ್ರೋಮ್ ಸೆನ್ಸರ್ ಹೊಂದಿದೆ. ಅಲ್ಲದೆ ಸೆಲ್ಫಿಗಾಗಿ 50MP ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಈ ಫೋನ್‌ಗೆ IP65 ರೇಟಿಂಗ್ ಕೂಡ ಇದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ನಲ್ಲಿ ಕೆಲಸ ಮಾಡುತ್ತದೆ. ನೀವು ಇದನ್ನು Victory Gold ಮತ್ತು Carbon Black ಎಂಬ ಎರಡು ಸಕ್ಕತ್ ಬಣ್ಣಗಳಲ್ಲಿ ಖರೀದಿಸಬಹುದು.