Realme Narzo 80x 5G launched in India (1)
Realme Narzo 80x 5G launched in India: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ Realme Narzo 80x 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಯಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ Dimensity 6400 ಪ್ರೊಸೆಸರ್‌ನೊಂದಿಗೆ ಕೇವಲ 11,999 ರೂಗಳಿಗೆ ಬಿಡುಗಡೆಯಾಗಿದೆ. ಹಾಗಾದ್ರೆ ಈ Realme Narzo 80x 5G ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ಎಲ್ಲವನ್ನು ತಿಳಿಯೋಣ.
Realme Narzo 80x 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹13,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹14,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು SBI ಮತ್ತು Axis ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 2000 ರೂಗಳ ಡಿಸ್ಕೌಂಟ್ಗಳೊಂದಿಗೆ ಬಿಡುಗಡೆಯಾಗಿದೆ.
Realme Narzo 80x 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 11ನೇ ಏಪ್ರಿಲ್ 2025 ಸಂಜೆ 6:00 ಗಂಟೆಯಿಂದ ಫ್ಲಿಪ್ಕಾರ್ಟ್ ಇಂಡಿಯಾ ಮತ್ತು ರಿಯಲ್ಮಿ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. Realme Narzo 80x 5G ಸನ್‌ಲೈಟ್ ಗೋಲ್ಡ್ ಮತ್ತು ಡೀಪ್ ಓಷಿಯನ್ ಎಂಬ 2 ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.
Also Read: New Aadhaar App: ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ Face ID ಮತ್ತು QR ಕೋಡ್‌ನಂತಹ ಹೊಸ ಫೀಚರ್ ಪರಿಚಯ!
Realme Narzo 80x 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.7 ಇಂಚಿನ HD ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ Realme Narzo 80x 5G ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಮತ್ತೊಂದು 2MP ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ. ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP69 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.
Realme Narzo 80x 5G ಸ್ಮಾರ್ಟ್ಫೋನ್ MediaTek Dimensity 6400 ಪ್ರೊಸೆಸರ್ನೊಂದಿಗೆ ಬರುತ್ತದೆ. Realme Narzo 80x 5G ಸ್ಮಾರ್ಟ್ಫೋನ್ ಇದರ 6GB RAM + ವರ್ಚುಯಲ್ 6GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.