Realme Narzo 80 Lite Launch Today Price in India Expected Features and Specifications
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ತನ್ನ ಮುಂಬರಲಿರುವ Realme Narzo 80 Lite 5G ಸ್ಮಾರ್ಟ್ಫೋನ್ ಅಧಿಕೃತ ಬಿಡುಗಡೆಯ ದಿನಾಂಕವನ್ನು ಕಂಫಾರ್ಮ್ ಮಾಡಿದೆ. ಕಂಪನಿ ಇದನ್ನು ಮುಂದಿನ ವಾರ ಅಂದ್ರೆ 16ನೇ ಜೂನ್ 2025 ರಂದು ಬಿಡುಗಡೆಗೊಳಿಸಿದೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಪ್ರಸ್ತುತ ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಬರುವುದಾಗಿ ಘೋಷಿಸಿದ್ದು ಈ ಮುಂಬರಲಿರುವ Realme Narzo 80 Lite 5G ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಎಷ್ಟು ಮತ್ತು ಫೀಚರ್ಗಳೇನು? ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ಈಗಾಗಲೇ ಮೇಲೆ ತಿಳಿಸಿರುವಂತೆ ರಿಯಲ್‌ಮಿ ತನ್ನ ಮುಂಬರಲಿರುವ Realme Narzo 80 Lite 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ್ದು ಕಂಪನಿ ಇದನ್ನು ಮುಂದಿನ ವಾರ ಅಂದ್ರೆ 16ನೇ ಜೂನ್ 2025 ರಂದು ಬಿಡುಗಡೆಗೊಳಿಸಿದೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದನ್ನು ಪ್ರತ್ಯೇಕವಾಗಿ ಅಮೆಜಾನ್ ಇಂಡಿಯಾದ ಮೂಲಕ ಬಿಡುಗಡೆಗೊಳಿಸಿ ಮಾರಾಟ ಮಾಡಲಿದೆ. ಈ ಸ್ಮಾರ್ಟ್ಫೋನ್ ಬೆಲೆಯನ್ನು ಈಗಾಗಲೇ ಕಂಪನಿ ಪ್ರಕಟಿಸಿದ್ದು ಸುಮಾರು 10,000 ರೂಗಳೊಳಗೆ ಬರುವ 6000mAh ಬ್ಯಾಟರಿಯುಳ್ಳ ಸ್ಮಾರ್ಟ್ಫೋನ್ಗಳಲ್ಲಿ ಮೊದಲ ಸ್ಥಾನಕ್ಕೆ ಹೆಸರಾಗಲಿದೆ.
ಈ ಮುಂಬರಲಿರುವ Realme Narzo 80 Lite 5G ಸ್ಮಾರ್ಟ್‌ಫೋನ್ ಆಯತಾಕಾರದ ಮಾಡ್ಯೂಲ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಯೂನಿಟ್‌ನೊಂದಿಗೆ ಬರಲಿದೆ ಎಂದು ಪ್ರಚಾರದ ಚಿತ್ರಗಳು ಬಹಿರಂಗಪಡಿಸುತ್ತವೆ. ಸ್ಮಾರ್ಟ್‌ಫೋನ್ ಸ್ಲಿಮ್ ಬೆಜೆಲ್‌ಗಳೊಂದಿಗೆ ಫ್ಲಾಟ್ ಡಿಸ್ಪ್ಲೇ ಮತ್ತು ಮೇಲ್ಭಾಗದಲ್ಲಿ ಕೇಂದ್ರೀಕೃತ ಹೋಲ್-ಪಂಚ್ ಸ್ಲಾಟ್ ಅನ್ನು ಹೊಂದಿರುವಂತೆ ಕಾಣುತ್ತದೆ. ಬಲ ಅಂಚಿನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಇದೆ.
ಇದನ್ನೂ ಓದಿ: AC Rules in India: ಇನ್ಮುಂದೆ ನಿಮ್ಮ ಮನೆ ಅಥವಾ ಆಫೀಸ್‌ನಲ್ಲಿ AC ಕೂಲಿಂಗ್ ಎಷ್ಟು ಇಡಬೇಕು ಅಂಥ ಸರ್ಕಾರ ನಿರ್ಧರಿಸಲಿದೆ!
Realme Narzo 80 Lite 5G ಸ್ಮಾರ್ಟ್‌ಫೋನ್ 6000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು ಒಂದೇ ಚಾರ್ಜ್‌ನಲ್ಲಿ 15.7 ಗಂಟೆಗಳ ಯೂಟ್ಯೂಬ್ ಪ್ಲೇಬ್ಯಾಕ್ ನೀಡುತ್ತದೆ. ಇದು 7.94mm ದಪ್ಪವನ್ನು ಅಳೆಯುತ್ತದೆ ಮತ್ತು ಬಾಳಿಕೆಗಾಗಿ ಮಿಲಿಟರಿ ದರ್ಜೆಯ MIL-STD-810H ಪ್ರಮಾಣೀಕರಣದೊಂದಿಗೆ ಬರುತ್ತದೆ. Realme Narzo 80 Lite 5G ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದಾದರೆ ಆರಂಭಿಕ 4GB + 128GB ಸ್ಟೋರೇಜ್ ಮಾದರಿಯನ್ನು 9,999 ರೂಗಳಿಗೆ ಮತ್ತು ಇದರ ಮತ್ತೊಂದು 6GB + 128GB ಕಾನ್ಫಿಗರೇಶನ್‌ಗಳಿಗೆ ಕ್ರಮವಾಗಿ 11,999 ರೂಗಳಿಗೆ ನಿರೀಕ್ಷಿಸಲಾಗಿದೆ.