ಭಾರತದಲ್ಲಿ ರಿಯಲ್ಮಿ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ Realme Narzo 80 Lite ಸ್ಮಾರ್ಟ್ಫೋನ್ 4G ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಕೂಪನ್ ಡಿಸ್ಕೌಂಟ್ ನಂತರ ಆರಂಭಿಕ ಕೇವಲ ₹6,599 ರೂಗಳಿಗೆ ಪರಿಚಯವಾಗಿದೆ. Realme Narzo 80 Lite ಸ್ಮಾರ್ಟ್ಫೋನ್ 4G ಫೋನ್ ಆಗಿದ್ದು ಇದರಲ್ಲಿ ಸದಾ ಹೊರಗಡೆ ಓಡಾಡುವವರಿಗೆ ಸೂಕ್ತವಾಗಿದೆ. ಅಲ್ಲದೆ ಇದನ್ನು ಮನೆಯ ಹಿರಿಯವರಿಗೆ ಉತ್ತಮ ಗಿಫ್ಟ್ ನೀಡಲು ಬಯಸುವವರಿಗೆ ಒಂದೊಳ್ಳೆ ಆಯ್ಕೆಯಾಗಲಿದೆ. Realme Narzo 80 Lite ಸ್ಮಾರ್ಟ್ಫೋನ್ ಇದೆ ತಿಂಗಳ ಕೊನೆ ವರದ್ದಲ್ಲಿ ವಾರದಲ್ಲಿ ಮೊದಲ ಮಾರಾಟಕ್ಕೆ ಬರಲಿದೆ.
ಮೊದಲಿಗೆ ಈ ಸ್ಮಾರ್ಟ್ಫೋನ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಬೆಲೆಯನ್ನು ಸುಮಾರು ₹7,299 ರೂಗಳಿಗೆ ಪರಿಚಯಿಸಿದ್ದು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು ₹8,299 ರೂಗಳಿಗೆ ಬಿಡುಗಡೆಗೊಳಿಸಲಾಗಿದೆ.
ಆದರೆ ಆಸಕ್ತ ಗ್ರಾಹಕರು ಸುಮಾರು 700 ರೂಗಳ ಕೂಪನ್ ದಿಸ್ಕೌಂಟ್ ಸಹ ಪಡೆಯುವುದರೊಂದಿಗೆ ಆರಂಭಿಕ ಮಾದರಿಯನ್ನು ಕೇವಲ ₹6,599 ರೂಗಳಿಗೆ ಮತ್ತೊಂದನ್ನು ಕೇವಲ ₹7,599 ರೂಗಳಿಗೆ ಖರೀದಿಸಬಹುದು. ಈ ಸ್ಮಾರ್ಟ್ಫೋನ್ ನಿಮಗೆ 28ನೇ ಜುಲೈ 2026 ರಂದು ಮಧ್ಯಾಹ್ನ 12:00 ಗಂಟೆಗೆ ಮೊದಲ ಮಾರಾಟವನ್ನು ಅಮೆಜಾನ್ ಮೂಲಕ ಆರಂಭಿಸಲಿದೆ.
ಭಾರತದಲ್ಲಿ ಇಂದು ಬಿಡುಗಡೆಯಾದ Realme Narzo 80 Lite ಸ್ಮಾರ್ಟ್ಫೋನ್ ಇದು ಬ್ಯಾಟರಿ ಬಾಳಿಕೆ ಮತ್ತು ಬಾಳಿಕೆಯ ಮೇಲೆ ಕೇಂದ್ರೀಕರಿಸಿದ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿದೆ. ಇದು 90Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಯುನಿಸಾಕ್ T7250 ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದ್ದು 6GB ವರೆಗಿನ RAM ಮತ್ತು 128GB ಇಂಟರ್ನಲ್ ಸ್ಟೋರೇಜ್ (2TB ವರೆಗೆ ವಿಸ್ತರಿಸಬಹುದಾಗಿದೆ) ಹೊಂದಿದೆ.
Realme Narzo 80 Lite ಸ್ಮಾರ್ಟ್ಫೋನ್ 15W ವೈರ್ಡ್ ಮತ್ತು 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಇದರ ಬೃಹತ್ 6300mAh ಬ್ಯಾಟರಿ ಪ್ರಮುಖ ಹೈಲೈಟ್ ಆಗಿದೆ. ಫೋಟೋಗ್ರಾಫಿಗಾಗಿ ಇದು 13MP ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಅನ್ನು Realme UI 6.0 ನೊಂದಿಗೆ ರನ್ ಮಾಡುತ್ತದೆ ಮತ್ತು IP54 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧವನ್ನು ಹೊಂದಿದೆ ಮತ್ತು ಮಿಲಿಟರಿ ದರ್ಜೆಯ ಬಾಳಿಕೆಯನ್ನು ಹೊಂದಿದೆ.