ರಿಯಲ್‌ಮಿ ಸಂಸ್ಥೆಯ Realme Narzo 90x 5G ಮೊಬೈಲ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳದಿದೆ. ಆದರೆ ಸದ್ಯ ಹೊಸ ಸುದ್ದಿ ಏನೆಂದರೆ, ವ್ಯಾಲೆಂಟೈನ್ಸ್ ಡೇ ಪ್ರಯುಕ್ತ Realme ಮೊಬೈಲ್ ಕಂಪನಿಯು ಹೊಸ ಲುಕ್‌ನಲ್ಲಿ Realme Narzo 90x 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ Realme Narzo 90x 5G ಮೊಬೈಲ್ ಫ್ಲ್ಯಾಶ್ ಬ್ಲೂ ಮತ್ತು ನೈಟ್ರೋ ಬ್ಲೂ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಇದೀಗ ಪ್ರೇಮಿಗಳ ದಿನದ ಅಂಗವಾಗಿ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಹೊಸದೊಂದು ಕಲರ್ ಆಯ್ಕೆಯ ವೇರಿಯಂಟ್‌ನಲ್ಲಿ ಲಭ್ಯವಿರುತ್ತದೆ ಎಂದು ವರದಿಯಾಗಿದೆ. ಇನ್ನುಳಿದಂತೆ Realme Narzo 90x 5G ಫೋನಿನ ಹೊಸ ಕಲರ್ ಯಾವುದು ಹಾಗೂ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Jio vs Airtel vs Vi: ಪ್ರತಿದಿನ 1.5GB ಡೇಟಾ, 84 ದಿನಗಳ ವ್ಯಾಲಿಡಿಟಿಗೆ ಯಾವ ಪ್ಲಾನ್ ಬೆಸ್ಟ್?
ರಿಯಲ್‌ಮಿ ಕಂಪನಿಯು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ Realme Narzo 90x 5G ಮೊಬೈಲ್ ಅನ್ನು ಈಗ Maroon Red ಕಲರ್ ಆಯ್ಕೆಯಲ್ಲಿ ಪರಿಚಯಿಸಿದೆ. ಈ ಹೊಸ ಕಲರ್ ವೇರಿಯಂಟ್ ಇದೇ ಫೆಬ್ರವರಿ 14 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಮಾರಾಟ ಪ್ರಾರಂಭಿಸಲಿದೆ. ಆಸಕ್ತ ಗ್ರಾಹಕರು Maroon Red ಕಲರ್ ಫೋನ್ ಅನ್ನು Amazon ಮತ್ತು Realme ಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಇನ್ನು ಈ ಫೋನಿನ 6GB RAM + 128GB ವೇರಿಯಂಟ್ ಬೆಲೆಯು 13,999ರೂಗಳು ಆಗಿದೆ. ಹಾಗೆಯೇ 8GB RAM + 128GB ವೇರಿಯಂಟ್ ಬೆಲೆಯು 15,499ರೂಗಳು ಆಗಿದೆ.
ರಿಯಲ್‌ಮಿ ನಾರ್ಜೊ 90x 5G ಮೊಬೈಲ್ 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡ 6.80 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 720×1,570 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಅಂದಹಾಗೆ ಈ ಫೋನ್ MediaTek Dimensity 6300 SoC ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 15 ಆಧಾರಿತ Realme UI 6.0 ಸಹ ಪಡೆದಿದೆ. ಹಾಗೆಯೇ ಇದು 7,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವ ಜೊತೆಗೆ 60W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹಾಗೆಯೇ ರಿಯಲ್‌ಮಿ ನಾರ್ಜೊ 90x 5G ಮೊಬೈಲ್ ಹಿಂಭಾಗದಲ್ಲಿ AI ಬೆಂಬಲಿತ 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಇದು IP65-ರೇಟೆಡ್ ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್ ಆಯ್ಕೆಗಳನ್ನು ಹೊಂದಿದೆ. ಇದರೊಂದಿಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಪಡೆದಿದೆ.