ಬಹುತೇಕ ಗ್ರಾಹಕರು ಆಫರ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಾರೆ. ಸದ್ಯ ರಿಯಲ್‌ಮಿ ಕಂಪನಿಯ Realme GT 7 Pro ಮೊಬೈಲ್ ಭರ್ಜರಿ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಹೌದು, ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್ ಸಖತ್ ಬೆಲೆ ಇಳಿಕೆ ಪಡೆದುಕೊಂಡಿದೆ. ಇದಲ್ಲದೇ ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ರಿಯಲ್‌ಮಿ GT 7 ಪ್ರೊ ಮೊಬೈಲ್ Snapdragon 8 Elite ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ ಹಾಗೂ 120W ವರೆಗೆ ಫಾಸ್ಟ್ ಚಾರ್ಜಿಂಗ್ ಲಭ್ಯ ಪಡೆದುಕೊಂಡಿದೆ. ಇದರೊಂದಿಗೆ 50MP ಕ್ಯಾಮೆರಾ ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗಾದರೆ ಅಮೆಜಾನ್ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ GT 7 ಪ್ರೊ ಮೊಬೈಲ್‌ಗೆ ಲಭ್ಯ ಇರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
Also Read : ಭಾರತದಲ್ಲಿ iPhone 17e ಮೊಬೈಲ್ ಬಿಡುಗಡೆ! 48MP ಕ್ಯಾಮೆರಾ, A19 ಚಿಪ್‌ಸೆಟ್ ಸೌಲಭ್ಯ
ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ GT 7 ಪ್ರೊ ಮೊಬೈಲ್ ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿ ಹೊಂದಿದೆ. ಈ ಸ್ಮಾರ್ಟ್‌ಫೋನ್ 12GB + 256GB ವೇರಿಯಂಟ್ ಬೆಲೆ 69,999 ರೂಗಳು ಪ್ರೈಸ್‌ಟ್ಯಾಗ್‌ನಲ್ಲಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 47,999 ರೂಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಮೊಬೈಲ್ ಮಾರ್ಸ್ ಆರೆಂಜ್, ವೈಟ್ ಹಾಗೂ ಗ್ಯಾಲಕ್ಸಿ ಗ್ರೇ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.
ರಿಯಲ್‌ಮಿ GT 7 ಪ್ರೊ ಸ್ಮಾರ್ಟ್‌ಫೋನ್ 6.6.78 ಇಂಚಿನ FHD+ AMOLED ಪ್ಯಾನೆಲ್ ಡಿಸ್‌ಪ್ಲೇ ಹೊಂದಿದೆ. ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 6500 nits ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದು ಆಂಡ್ರಾಯ್ಡ್ 15 OS ಅನ್ನು ಆಧರಿಸಿದ ರಿಯಲ್‌ಮಿ UI 6.0 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಅನುಗುಣವಾಗಿ 12GB + 256GB ಮತ್ತು 16GB + 512GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಇನ್ನು ಈ ಮೊಬೈಲ್ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5800mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ.
ಹಾಗೆಯೇ ರಿಯಲ್‌ಮಿ GT 7 ಪ್ರೊ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ. ಇನ್ನುಳಿದೆರಡು ಕ್ಯಾಮೆರಾಗಳು ಕ್ರಮವಾಗಿ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಆಗಿವೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ IP69 ರೇಟಿಂಗ್ ಅನ್ನು ಪಡೆದಿದೆ.