Realme GT 7 Dream Edition Collaborate with Aston Martin
ಮುಂಬರಲಿರುವ Realme GT 7 Dream Edition ಸ್ಮಾರ್ಟ್ಫೋನ್ ಇದೆ 27ನೇ ಮೇ 2025 ರಂದು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ಅಧಿಕೃತ ಪ್ರಕಟಣೆಗಾಗಿ ಕಾತುರದಲ್ಲಿರುವಾಗ ಈ ವಿಶೇಷ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ಆಸ್ಟನ್ ಮಾರ್ಟಿನ್‌ನ ಫಾರ್ಮುಲಾ 1 ತಂಡದ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ರಿಯಲ್‌ಮಿ (Realme) ಅಧಿಕೃತವಾಗಿ ದೃಢಪಡಿಸಿದೆ. ಈ Realme GT 7 Dream Edition ಸ್ಮಾರ್ಟ್ಫೋನ್ ಆಸ್ಟನ್ ಮಾರ್ಟಿನ್ (Aston Martin) ಬ್ರಾಂಡೆಡ್ ಪರಿಕರಗಳೊಂದಿಗೆ ವಿಶೇಷ ಬಣ್ಣ ಆಯ್ಕೆಯಲ್ಲಿ ಬರುವ ನಿರೀಕ್ಷೆಯಿದೆ. ಸ್ಮಾರ್ಟ್ಫೋನ್ ಲೇಟೆಸ್ಟ್ ಮತ್ತು ಇಂಟಸ್ಟಿಂಗ್ ಫೀಚರ್ಗಳೊಂದಿಗೆ ಬರಲಿದೆ.
ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ತನ್ನ ಭಾರತ ಮತ್ತು ಜಾಗತಿಕ ವೆಬ್‌ಸೈಟ್‌ಗಳಲ್ಲಿ ಮೀಸಲಾದ ಲ್ಯಾಂಡಿಂಗ್ ಪುಟದ ಮೂಲಕ Realme GT 7 Dream Edition ಬಿಡುಗಡೆಯ ಕುರಿತು ಪ್ರಕಟಣೆ ನೀಡಿದೆ . ಅಮೆಜಾನ್ ತನ್ನ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಅನ್ನು ಸಹ ರಚಿಸಿದ್ದು ಫೋನ್‌ನ ಹಿಂಭಾಗದ ವಿನ್ಯಾಸದ ಬಗ್ಗೆ ಒಂದು ನೋಟವನ್ನು ನೀಡುತ್ತದೆ. ರಿಯಲ್‌ಮಿ ಹೊಸ ಹ್ಯಾಂಡ್‌ಸೆಟ್ ಅನ್ನು ಆಸ್ಟನ್ ಮಾರ್ಟಿನ್ ಅರಾಮ್ಕೊ ಫಾರ್ಮುಲಾ ಒನ್ ತಂಡದೊಂದಿಗೆ ಸಹ-ವಿನ್ಯಾಸಗೊಳಿಸಿದೆ ಎಂದು ಪುಟಗಳು ತೋರಿಸುತ್ತವೆ.
ಟೀಸರ್‌ಗಳು ಫೋನ್‌ನ ಬ್ಯಾಕ್ ಪ್ಯಾನಲ್ ಆಸ್ಟನ್ ಮಾರ್ಟಿನ್‌ನ ಸಿಗ್ನೇಚರ್ ಹಸಿರು ಬಣ್ಣದಲ್ಲಿ ತೋರಿಸುತ್ತವೆ. ಬ್ಯಾಕ್ ಪ್ಯಾನಲ್ ಮಧ್ಯದಲ್ಲಿ ಆಸ್ಟನ್ ಮಾರ್ಟಿನ್‌ನ ಐಕಾನಿಕ್ ಎರಡು ವಿಂಗ್ ಲೋಗೋವನ್ನು ಹೊಂದಿದ್ದು ‘ಫಾರ್ಮುಲಾ ಒನ್ ಟೀಮ್ ಜೊತೆಗೆ ಬರಲಿರುವುದನ್ನು ಕಂಫಾರ್ಮ್ ಮಾಡಿದೆ. ಈ Realme GT 7 Dream Edition ಸ್ಮಾರ್ಟ್ಫೋನ್ ಸೀಮಿತ ಪ್ರಮಾಣದಲ್ಲಿ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಹಯೋಗದ ಭಾಗವಾಗಿ ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ತಂಡದೊಂದಿಗೆ ಜಂಟಿಯಾಗಿ ವಾರ್ಷಿಕವಾಗಿ ಎರಡು ಮಾದರಿಗಳನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: Cyber Fraud: ಬ್ಯಾಂಕ್ ಅಪ್ಲಿಕೇಶನ್ ಬಳಸಿ ಅದೇ ಬ್ಯಾಂಕಿಂದ ₹11.55 ಕೋಟಿ ಉಡಾಯಿಸಿದ ವಂಚಕರು! ಆಗಿದ್ದೇನು ಗೊತ್ತಾ?
Realme GT 7 Dream Edition ಆಸ್ಟನ್ ಮಾರ್ಟಿನ್-ಸಂಬಂಧಿತ ಐಕಾನ್‌ಗಳು ಮತ್ತು ಥೀಮ್‌ಗಳು ಮತ್ತು ಪರಿಕರಗಳನ್ನು ಒಳಗೊಂಡಿರುತ್ತದೆ ಎಂದು ನಾವು ನಿರೀಕ್ಷಿಸಬಹುದು. Realme GT 7 Dream Edition ಸ್ಮಾರ್ಟ್ಫೋನ್ ಈ ಸರಣಿಯ ಮೂಲ ಮಾದರಿ Realme GT 7 ನಂತೆಯೇ ಹಾರ್ಡ್‌ವೇರ್ ವೈಶಿಷ್ಟ್ಯಗಳನ್ನು ನೀಡುವ ಸಾಧ್ಯತೆಯಿದೆ. ಹ್ಯಾಂಡ್‌ಸೆಟ್‌ನ ಬಿಡುಗಡೆ ಕಾರ್ಯಕ್ರಮವನ್ನು 27ನೇ ಮೇ 2025 ರಂದು ಮಧ್ಯಾಹ್ನ 1:30 ಕ್ಕೆ ಭಾರತೀಯ ಕಾಲಮಾನ ನಿಗದಿಪಡಿಸಲಾಗಿದೆ.