ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ Realme GT 7 ಮೊಬೈಲ್ ಈಗ ಮತ್ತೆ ಸದ್ದು ಮಾಡಿದೆ. ಏಕೆಂದರೆ ಪ್ರಸ್ತುತ ರಿಯಲ್‌ಮಿ GT 7 ಮೊಬೈಲ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆದಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ರಿಯಲ್‌ಮಿ ಸಂಸ್ಥೆಯ ಈ ಮೊಬೈಲ್ ಆಕ್ಟಾ ಕೋರ್ Mediatek Dimensity 8400 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ GT 7 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 7,200mAh ಬ್ಯಾಟರಿ ಇರುವ iQOO Z11x 5G ಮೊಬೈಲ್ ಈಗ ಆಫರ್‌ನಲ್ಲಿ ಲಭ್ಯ!
ರಿಯಲ್‌ಮಿ GT 7 ಮೊಬೈಲ್ ಆಕರ್ಷಕ ಫೀಚರ್ಸ್ ಮೂಲಕ ಗಮನ ಸೆಳೆದಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB + 256GB ವೇರಿಯಂಟ್ ಬೆಲೆ 39,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 29,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ ಬ್ಲೂ, ಬ್ಲಾಕ್ ಮತ್ತು ರೇಸಿಂಗ್ ಯೆಲ್ಲೋ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಆಸಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಖರೀದಿಸಬಹುದಾಗಿದೆ.
ರಿಯಲ್‌ಮಿ GT 7 ಮೊಬೈಲ್ ಡಿಸ್‌ಪ್ಲೇಯು 6.8 ಇಂಚಿನ FHD+ AMOLED ಮಾದರಿ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಹೊಂದಿದ್ದು ಜೊತೆಗೆ 1600 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಈ ಮೊಬೈಲ್ Mediatek Dimensity 8400 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಪೊಕೊದ ಈ ಮೊಬೈಲ್ 12GB RAM + 256GB, 8GB RAM + 256GB ಹಾಗೂ 12GB RAM + 512GB ವೇರಿಯಂಟ್ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ.
ಹಾಗೆಯೇ ರಿಯಲ್‌ಮಿ GT 7 ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದ್ದು ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್ 32MP ಸೆನ್ಸಾರ್ ಕ್ಯಾಮೆರಾ ವ್ಯವಸ್ಥೆ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ 7,000 mAh ಬ್ಯಾಟರಿ ಜೊತೆಗೆ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.