Realme C100x ಮೊಬೈಲ್‌ ನಾಳೆಯೇ ಬಿಡುಗಡೆ! 8,000mAh ಬ್ಯಾಟರಿ ಖಚಿತ; ಅಗ್ಗದ ಬೆಲೆ ನಿಶ್ಚಿತ

HIGHLIGHTS

ನಾಳೆ (ಜುಲೈ 16 ರಂದು) ರಿಯಲ್‌ಮಿ C100x ಫೋನ್‌ ಲಾಂಚ್

ರಿಯಲ್‌ಮಿ C100x ಫೋನ್‌ 8,000mAh ಬ್ಯಾಟರಿ ಹೊಂದಿರಲಿದೆ

ಇದು ಡೀಪ್‌ಬ್ಲೂ ಟೈಡ್ಸ್ ಮತ್ತು ಗೋಲ್ಡನ್ ಕೋಸ್ಟ್ ಕಲರ್‌ ಆಯ್ಕೆಯಲ್ಲಿ ಬರಲಿದೆ

Realme C100x ಮೊಬೈಲ್‌ ನಾಳೆಯೇ ಬಿಡುಗಡೆ! 8,000mAh ಬ್ಯಾಟರಿ ಖಚಿತ; ಅಗ್ಗದ ಬೆಲೆ ನಿಶ್ಚಿತ

ರಿಯಲ್‌ಮಿ ಮೊಬೈಲ್‌ ಕಂಪನಿಯು ಇದೀಗ ತನ್ನ ಹೊಸ Realme C100x ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್‌ ನಾಳೆ (ಜುಲೈ 16 ರಂದು) ಅಧಿಕೃತವಾಗಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಮುಂಬರುವ ಈ ಮೊಬೈಲ್‌ನ ಲಾಂಚ್‌ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಈ ಮೊಬೈಲ್‌ 8,000mAh ಬ್ಯಾಟರಿ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಅಲ್ಲದೇ 50 ಮೆಗಾಪಿಕ್ಸಲ್‌ ಕ್ಯಾಮೆರಾ ಒಳಗೊಂಡಿರುವ ಜೊತೆಗೆ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಹಾಗಾದರೆ ಮುಂಬರುವ ರಿಯಲ್‌ಮಿ C100x ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Instamart-HPCL ಹೊಸ ಪಾಲುದಾರಿಕೆ: LPG ಸಿಲಿಂಡರ್ ಈಗ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆಗೆ ಬರುತ್ತೆ!

ನಾಳೆ Realme Narzo 100x 5G ಮೊಬೈಲ್‌ ಲಾಂಚ್

ರಿಯಲ್‌ಮಿ ಸಂಸ್ಥೆಯ ಹೊಸ ರಿಯಲ್‌ಮಿ C100x ಲಾಂಚ್ ಮಾಡಲು ಸಕಲ ಸಜ್ಜಾಗಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ ಅನ್ನು ನಾಳೆ (ಜುಲೈ 16 ರಂದು) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಈ ಮೊಬೈಲ್‌ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಲಾಂಚ್ ಬಳಿಕ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ ಮೂಲಕ ಸೇಲ್‌ ಪ್ರಾರಂಭಿಸಲಿದೆ. ಅಂದಹಾಗೆ ಲೀಕ್ ಮಾಹಿತಿ ಪ್ರಕಾರ ಈ ಮೊಬೈಲ್‌ 6GB RAM + 128GB ಮತ್ತು 6GB + 256GB ಸ್ಟೋರೇಜ್ ವೇರಿಯಂಟ್‌ಗಳ ಆಯ್ಕೆ ಬರಲಿದೆ ಎನ್ನಲಾಗಿದೆ. ಹಾಗೆಯೇ ಇದು ಡೀಪ್‌ಬ್ಲೂ ಟೈಡ್ಸ್ ಮತ್ತು ಗೋಲ್ಡನ್ ಕೋಸ್ಟ್ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ.

ರಿಯಲ್‌ಮಿ C100x ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಮುಂಬರುವ ರಿಯಲ್‌ಮಿ C100x ಫೋನ್‌ 6.8 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ ಜೊತೆಗೆ 1,200 nits ವರೆಗಿನ ಹೈ ಬ್ರೈಟ್‌ನೆಸ್ ಸೌಲಭ್ಯ ಪಡೆದಿರಬಹುದು. ಅಲ್ಲದೇ ಇದು ಆಕ್ಟಾ ಕೋರ್ Unisoc T7250 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ 6GB RAM + 128GB ಮತ್ತು 6GB + 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.

ರಿಯಲ್‌ಮಿ C100x ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರುವ ಸೂಚನೆಗಳು ಇವೆ. ಇನ್ನು ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ನಲ್ಲಿ ಇರಬಹುದು ಹಾಗೆಯೇ ಎರಡನೇ ಕ್ಯಾಮೆರಾವು 2MP ಸೆನ್ಸಾರ್‌ ಬಲ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಬಹುದು ಎನ್ನಲಾಗಿದೆ. ಹಾಗೆಯೇ ಇದು 8,000mAh ಬ್ಯಾಟರಿ ಪಡೆದಿರಲಿದ್ದು ಜೊತೆಗೆ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile