Realme 70 Turbo 5G Price Cut
Realme 70 Turbo 5G Price Cut: ನೀವು ಬಜೆಟ್ ಬೆಲೆಯಲ್ಲಿ ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿರುವ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ Realme NARZO 70 Turbo ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ರಿಯಾಯಿತಿ ಲಭ್ಯವಿದೆ. ಕಂಪನಿಯು ಈ ಫೋನ್ ಅನ್ನು ಈ ವಿಭಾಗದಲ್ಲಿ ಅತ್ಯಂತ ವೇಗದ AI ಪ್ರೊಸೆಸರ್‌ನೊಂದಿಗೆ ತಂದಿದೆ ಮತ್ತು ಇದು ಅತಿದೊಡ್ಡ ಸ್ಟೇನ್‌ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಚೇಂಬರ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ ಪವರ್ಫುಲ್ ಫೀಚರ್ ಮತ್ತು ಪ್ರೀಮಿಯಂ ಫಿನಿಶ್‌ನೊಂದಿಗೆ Turbo Green, Turbo Purple ಮತ್ತು Turbo Yellow ಬಣ್ಣಗಳಲ್ಲಿ ಲಭ್ಯ.
ಈ ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಹೊಂದಿರುವ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 15,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು BOB CARD ಬಳಸಿಕೊಂಡು EMI ಸೌಲಭ್ಯದೊಂದಿಗೆ 2000 ರೂಗಳವರೆಗಿನ ಡಿಸ್ಕೌಂಟ್ ಪಡೆಯಬಹುದು ಈ ಮೂಲಕ ಸುಮಾರು 13,999 ರೂಗಳಿಗೆ ಖರೀದಿಸಬಹುದು. ಇದರ ಕ್ರಮವಾಗಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಹೊಂದಿರುವ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ₹16,485 ರೂಗಳಿಗೆ ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಹೊಂದಿರುವ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ₹19,799 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Realme NARZO 70 Turbo ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,100 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: 43 ಇಂಚಿನ Special Edition Smart TV ಅತಿ ಕಡಿಮೆ ಬೆಲೆಗೆ ಲಭ್ಯ! ಯಾರಿಗುಂಟು ಈ ಜಬರ್ದಸ್ತ್ ಆಫರ್!
Realme ಸ್ಮಾರ್ಟ್ಫೋನ್ 6.67 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ದರ ಮತ್ತು 2000nits ಗರಿಷ್ಠ ಹೊಳಪನ್ನು ಹೊಂದಿದೆ. ಇದು ಮೀಡಿಯಾ ಟೆಕ್ Dimensity 7300 Energy 5G ಪ್ರೊಸೆಸರ್ ಮತ್ತು ಅದರ ಹಿಂಭಾಗದಲ್ಲಿ 50MP ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 16MP ಸೆಲ್ಫಿ ಕ್ಯಾಮೆರಾ ಹೊಂದಿರುವ ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 45W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.