ಜನಪ್ರಿಯ ಮೊಬೈಲ್ ಬ್ರಾಂಡ್‌ಗಳ ಪೈಕಿ ಒಂದಾಗಿರುವ ರಿಯಲ್‌ಮಿ ಕಂಪನಿಯ ಕೆಲವು ಮೊಬೈಲ್‌ಗಳು ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿವೆ. ಆದರೆ ಇದೀಗ ರಿಯಲ್‌ಮಿ ಸಂಸ್ಥೆಯ Realme 16 Pro+, ರಿಯಲ್‌ಮಿ 16 ಪ್ರೊ, ರಿಯಲ್‌ಮಿ 16T, ರಿಯಲ್‌ಮಿ C83 5G ಮತ್ತು ರಿಯಲ್‌ಮಿ C100x 4G ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ ಆಗಿದ್ದು ಖರೀದಿದಾರರು ಅಚ್ಚರಿಯಿಂದ ನೋಡುವಂತಾಗಿದೆ. ರಿಯಲ್‌ಮಿ ಮೊಬೈಲ್ ಕಂಪನಿಯು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಹೊಸ ಮೊಬೈಲ್ ಖರೀದಿಸುವ ಗ್ರಾಹಕರು ಎರಡು ಬಾರಿ ಯೋಚಿಸುವಂತಾಗಿದೆ. ಕಂಪನಿಯು ಮೊಬೈಲ್‌ಗಳ ಮಾಡೆಲ್ ಆದರಿಸಿ 1,000 ರೂ.ಗಳಿಂದ 4,000 ರೂ.ಗಳ ಏರಿಕೆ ಮಾಡಲಾಗಿದೆ. ಹಾಗಾದರೆ ರಿಯಲ್‌ಮಿ ಕಂಪನಿಯ ಬೆಲೆ ಏರಿಕೆ ಕಂಡ ಸ್ಮಾರ್ಟ್‌ಫೋನ್‌ಗಳ ಹೊಸ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Motorola Edge 70 Fusion ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಸಖತ್ ಇಳಿಕೆ! 7,000mAh ಬ್ಯಾಟರಿ
ಭಾರತದಲ್ಲಿ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ 16 ಸರಣಿಯ ಕೆಲವು ಮೊಬೈಲ್‌ಗಳ ಬೆಲೆಯಲ್ಲಿ ಏಕಾಏಕಿ ಏರಿಕೆ ಆಗಿದೆ. ಆ ಪೈಕಿ ಕಂಪನಿಯ ರಿಯಲ್‌ಮಿ 16 Pro+ ಮೊಬೈಲ್‌ನ 8GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 49,999 ರೂ.ಗಳು ಆಗಿದ್ದರೆ, ಹೊಸ ಬೆಲೆ 53,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 52,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್ 55,999 ರೂ.ಗಳು ಆಗಿದೆ. ಇನ್ನು 12GB + 256GB ವೇರಿಯಂಟ್ ಹೊಸ ಬೆಲೆ 58,999 ರೂ.ಗಳು ಆಗಿದೆ.
ರಿಯಲ್‌ಮಿ 16 Pro ಮೊಬೈಲ್‌ನ 8GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 40,999 ರೂ.ಗಳು ಆಗಿದ್ದರೆ, ಹೊಸ ಬೆಲೆ 44,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 43,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್ 46,999 ರೂ.ಗಳು ಆಗಿದೆ. ಅದೇ ರೀತಿ 12GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 46,999 ರೂ.ಗಳು ಆಗಿದ್ದರೆ, ಹೊಸ ಬೆಲೆಯು 49,999 ರೂ.ಗಳು ಆಗಿದೆ.
ರಿಯಲ್‌ಮಿ 16 5G ಮೊಬೈಲ್‌ನ 8GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 35,999 ರೂ.ಗಳು ಆಗಿದ್ದರೆ, ಹೊಸ ಬೆಲೆ 36,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 38,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್ 39,999 ರೂ.ಗಳು ಆಗಿದೆ. ಅದೇ ರೀತಿ 12GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 41,999 ರೂ.ಗಳು ಆಗಿದ್ದರೆ, ಹೊಸ ಬೆಲೆಯು 42,999 ರೂ.ಗಳು ಆಗಿದೆ.
ರಿಯಲ್‌ಮಿ 16T ಮೊಬೈಲ್‌ನ 6GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 31,999 ರೂ.ಗಳು ಆಗಿದ್ದರೆ, ಹೊಸ ಬೆಲೆ 32,999 ರೂ.ಗಳು ಆಗಿದೆ. ಹಾಗೆಯೇ 8GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 34,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್ 35,999 ರೂ.ಗಳು ಆಗಿದೆ. ಅದೇ ರೀತಿ 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 35,999 ರೂ.ಗಳು ಆಗಿದ್ದರೆ, ಹೊಸ ಬೆಲೆಯು 36,999 ರೂ.ಗಳು ಆಗಿದೆ.