Realme 16 Pro series with 200MP portrait camera and 7000mAh battery Launched in India
ಭಾರತದಲ್ಲಿ ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ಅಂದರೆ 6ನೇ ಜನವರಿ 2026 ರಂದು ರಿಯಲ್‌ಮಿ ತನ್ನ ಹೊಚ್ಚ ಹೊಸ Realme 16 Pro 5G ಸ್ಮಾರ್ಟ್‌ಫೋನ್ 200MP LumaColor ಕ್ಯಾಮೆರಾದೊಂದಿಗೆ ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ ಜಪಾನಿನ ಪ್ರಸಿದ್ಧ ಡಿಸೈನರ್ ನಾಟೊ ಫುಕಸಾವಾ ಅವರ ಜೊತೆ ಈ ಫೋನನ್ನು ‘ಅರ್ಬನ್ ವೈಲ್ಡ್’ ಅರ್ಬನ್ ವೈಲ್ಡ್ ಡಿಸೈನ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ ನೋಡುವುದಕ್ಕೆ ಇದು ಅತ್ಯಂತ ಪ್ರೇಮಿಯಾಗಿ ಕಾಣಿಸಿಕೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಸಂಪೂರ್ಣ ಹೈಲೈಟ್ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Also Read: 108MP MasterPixel ಕ್ಯಾಮೆರಾದೊಂದಿಗೆ Redmi Note 15 ಬಿಡುಗಡೆ! ಒಫರ್ ಬೆಲೆ ಮತ್ತು ಫೀಚರ್ಗಳೇನು?
ಈ ಸ್ಮಾರ್ಟ್‌ಫೋನ್ ಖರೀದಿಸಲು ಇಚ್ಛಿಸುವವರು ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ ಮೂಲಕ ಆರ್ಡರ್ ಮಾಡಬಹುದು. ಬೆಲೆಯ ವಿಚಾರಕ್ಕೆ ಬಂದರೆ ಇದರ ಆರಂಭಿಕ 8GB RAM + 128GB ಸ್ಟೋರೇಜ್ ಆವೃತ್ತಿಗೆ ₹31,999 ನಿಗದಿಪಡಿಸಲಾಗಿದೆ. ಹಾಗೆಯೇ ಇದರ 8GB + 256GB ಮಾದರಿಗೆ ₹33,999 ಮತ್ತು ಹೈ-ಎಂಡ್ 12GB + 256GB ಮಾದರಿಗೆ ₹36,999 ಬೆಲೆ ಇದೆ. ಲಾಂಚ್ ಆಫರ್ ಆಗಿ ಗ್ರಾಹಕರಿಗೆ ಬ್ಯಾಂಕ್ ಕಾರ್ಡ್‌ಗಳ ಮೇಲೆ ₹4,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಮತ್ತು ಯಾವುದೇ ಬಡ್ಡಿ ಇರುವುದಿಲ್ಲ ಇಎಂಐ (No-cost EMI) ಸೌಲಭ್ಯ ಸಿಗಲಿದೆ. ವಿಶೇಷವೆಂದರೆ ಪ್ರಿ-ಬುಕಿಂಗ್ ಮಾಡುವವರಿಗೆ ₹7,999 ಮೌಲ್ಯದ ಬ್ಯಾಕ್‌ಪ್ಯಾಕ್ ಉಚಿತವಾಗಿ ಸಿಗುವ ಅವಕಾಶವಿದೆ. ಇದು ಗೋಲ್ಡ್, ಗ್ರೇ, ಪಿಂಕ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಈ ಫೋನ್ ಅತ್ಯುತ್ತಮವಾದ 6.78-ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿದ್ದು 144Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಸಾಮಾನ್ಯವಾಗಿ ಬಳಸುವಾಗ ಅಥವಾ ಗೇಮ್ ಆಡುವಾಗ ಫೋನ್ ಪರದೆಯ ಸ್ಮೂತ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರಮುಖ ಆಕರ್ಷಣೆಯೇ 200MP ಲುಮಾಕಲರ್ (LumaColor) ಮೇನ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಸ್ಯಾಮ್‌ಸಂಗ್ HP5 ಸೆನ್ಸಾರ್ ಮತ್ತು OIS ತಂತ್ರಜ್ಞಾನದ ಫೋಟೋಗಳು ಅದ್ಭುತವಾಗಿ ಮೂಡಿಬರುತ್ತವೆ. ಇದರ ಜೊತೆಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 50MP ಫ್ರಂಟ್ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಕಡಿಮೆ ಬೆಳಕಿನಲ್ಲಿಯೂ ಹೈ-ಕ್ವಾಲಿಟಿ ಫೋಟೋ ಮತ್ತು 4K ವಿಡಿಯೋ ರೆಕಾರ್ಡಿಂಗ್ ಇದು ಬೆಸ್ಟ್ ಆಗಿದೆ.
ವೇಗದ ಅಗತ್ಯಗಳಿಗಾಗಿ MediaTek Dimensity 7300-Max ಪ್ರೊಸೆಸರ್ ಅಳವಡಿಸಲಾಗಿದೆ. ಫೋನ್ ಬಿಸಿಯಾಗದಂತೆ ತಡೆಯಲು ‘ಏರ್‌ಫ್ಲೋ ವೇಪರ್ ಚೇಂಬರ್ ಕೂಲಿಂಗ್’ ಸಿಸ್ಟಮ್ ಕೂಡ ಇದೆ. ಇನ್ನು ವಿಚಾರದಲ್ಲಿ ಬ್ಯಾಟರಿ ರಿಯಲ್‌ಮಿ ದೊಡ್ಡ ಬದಲಾವಣೆ ಮಾಡಿದ್ದು ಇದರಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಟೈಟಾನ್ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಈ ಫೋನ್ ಲೇಟೆಸ್ಟ್ Android 16 ಆಧಾರಿತ Realme UI 7.0 ನಲ್ಲಿ ಕೆಲಸ ಮಾಡುತ್ತಿದೆ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಇದು IP68 ಮತ್ತು IP69 ರೇಟಿಂಗ್ ಅನ್ನು ಸಹ ಹೊಂದಿದೆ.