HONOR 200 5G Price Cut in India: ಭಾರತದಲ್ಲಿ ಪ್ರಸ್ತುತ ಲೇಟೆಸ್ಟ್ ಪವರ್ಫುಲ್ ಕ್ಯಾಮೆರಾ ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಲಭ್ಯವಿದೆ. ಅಮೆಜಾನ್‌ನಲ್ಲಿ HONOR 200 5G ಬರೋಬ್ಬರಿ 4000 ರೂಗಳ ಬೆಲೆ ಕಡಿತವಾಗಿದ್ದು ಈ HONOR 200 5G ಸ್ಮಾರ್ಟ್ಫೋನ್ 8GB RAM ಮತ್ತು 5200mAh ಬ್ಯಾಟರಿಯನ್ನು ಹೊಂದಿದೆ. 50MP ಸೆಲ್ಫಿ ಕ್ಯಾಮೆರಾದ ಪವರ್ಫುಲ್ ಕ್ಯಾಮೆರಾ ಸ್ಮಾರ್ಟ್ಫೋನ್ ಸುಮಾರು 20,000 ರೂಗಳೊಳಗೆ ಲಭ್ಯವಿದೆ. ಹಾಗಾದ್ರೆ ಇದರ ಆಫರ್ ಬೆಲೆಯೊಂದಿಗೆ ಇದರ ಫೀಚರ್ ಮತ್ತು ವಿಶೇಷಣಗಳೇನು ತಿಳಿಯಿರಿ.
HONOR 200 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹23,998 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹29,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ನಿಮ್ಮ ಯಾವುದೇ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯಬಹುದು. ಅಲ್ಲದೆ ಉಚಿತವಾಗಿ ಅಮೆಜಾನ್ ಮತ್ತೆ 2000 ರೂಗಳ ಕೂಪನ್ ಡಿಸ್ಕೌಂಟ್ ಸಹ ನೀಡುತ್ತಿದೆ. ಈ ಮೂಲಕ ಇದರ ಆರಂಭಿಕ ಕೇವಲ ₹19,998 ರೂಗಳಿಗೆ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ HONOR 200 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 28,000 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: OnePlus 13 ಫೋನ್ ಮೇಲೆ ಬರೋಬ್ಬರಿ ₹5000 ರೂಗಳ ಬೆಲೆ ಇಳಿಕೆ! ಹೊಸ ಆಫರ್ ಬೆಲೆ ಮತ್ತು ಫೀಚರ್ಗಳೇನು?
ಈ ಲೇಟೆಸ್ಟ್ Honor 200 5G ಸ್ಮಾರ್ಟ್‌ಫೋನ್ 6.7 ಇಂಚಿನ ಕ್ವಾಡ್ ಕರ್ವ್ಡ್ AMOLED ಸ್ಕ್ರೀನ್ ಅನ್ನು ಹೊಂದಿದೆ. Honor 200 5G ಸ್ಮಾರ್ಟ್‌ಫೋನ್ ಪ್ರೀಮಿಯಂ ಕ್ಯಾಮೆರಾ ಸೆಟಪ್ ಹೊಂದಿದೆ.
ಫೋನ್ 50MP OIS + EIS ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ ಮತ್ತೊಂದು 50MP OIS ಟೆಲಿಫೋಟೋ ಮತ್ತು 12MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ ಮುಂಭಾಗದಲ್ಲಿ 50MP ಪೋಟ್ರೇಟ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಫೋನ್‌ನಲ್ಲಿರುವ ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 4K ವೀಡಿಯೊಗಳನ್ನು ಸಹ ಶೂಟ್ ಮಾಡಬಹುದು.
Honor 200 5G ಸ್ಮಾರ್ಟ್‌ಫೋನ್ Snapdragon 7 Gen 3 ಚಿಪ್‌ಸೆಟ್ 8GB RAM ಮತ್ತು 256GB ಸ್ಟೋರೇಜ್ ಅನ್ನು ಪ್ಯಾಕ್ ಮಾಡುತ್ತದೆ. ಈ ಫೋನ್ AI ಚಾಲಿತ ಮ್ಯಾಜಿಕ್ಓಎಸ್ 8.0 ಸಾಫ್ಟ್‌ವೇರ್‌ನೊಂದಿಗೆ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ Honor 200 5G ಸ್ಮಾರ್ಟ್‌ಫೋನ್ 100W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 5200mAh ಮೂಲಕ 2Gen ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ.