POCO X8 Power ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌! 10,000m ಬ್ಯಾಟರಿ ಖಚಿತ

POCO X8 Power ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌! 10,000m ಬ್ಯಾಟರಿ ಖಚಿತ

ಪೊಕೊ ಕಂಪನಿಯು ಭಾರತದಲ್ಲಿ ಹೊಸದಾಗಿ POCO X8 Power ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿ ಈಗಾಗಲೇ ಫೋನ್‌ನ ಪ್ರಮುಖ ಫೀಚರ್ಸ್ ಅನ್ನು ಖಚಿತಪಡಿಸಿದ್ದು, ಇದು ಬರೋಬ್ಬರಿ 10,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಒಂದೇ ಚಾರ್ಜ್‌ನಲ್ಲಿ ಸುಮಾರು 3.5 ದಿನಗಳ ವರೆಗೆ ಬಳಕೆ ನೀಡಬಹುದು ಎಂದು ಪೊಕೊ ಹೇಳಿಕೊಂಡಿದೆ. ಹೀಗಾಗಿ ಹೊಸ X-ಸರಣಿಯ ಫೋನ್‌ನಲ್ಲಿ ಬ್ಯಾಟರಿ ಬಾಳಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಕಂಪನಿ ಖಚಿತಪಡಿಸಿರುವ ಮಾಹಿತಿ ಹಾಗೂ ಸೋರಿಕೆಯಾಗಿರುವ ನಿರೀಕ್ಷಿತ ಫೀಚರ್ಸ್‌ಗಳ ವಿವರ ಇಲ್ಲಿದೆ.

Digit.in Survey
✅ Thank you for completing the survey!

Also Read : ಹೊಸ Realme C100i ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ; ಅಗ್ಗದ ಪ್ರೈಸ್‌ಟ್ಯಾಗ್‌

POCO X8 Power ಭಾರತ ಬಿಡುಗಡೆ ದಿನಾಂಕ

ಮುಂಬರುವ ಹೊಸ ಪೊಕೊ X8 ಪವರ್ ಫೋನ್‌ ಬಿಡುಗಡೆ ಮುನ್ನವೇ ಲೀಕ್ ಮಾಹಿತಿಗಳ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಫೋನ್‌ ಭಾರತದಲ್ಲಿ ಸೆಪ್ಟೆಂಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇನ್ನು ಈ ಮೊಬೈಲ್‌ ಆಕರ್ಷಕ ಕಲರ್‌ ಆಯ್ಕೆ ಪಡೆದಿರಲಿದದ್ದು, ಇದರ ಬೆಲೆ ಸುಮಾರು 35,000 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ.

poco X8 Power

ಪೊಕೊ X8 ಪವರ್ ನಿರೀಕ್ಷಿತ ಫೀಚರ್ಸ್‌

ಲೀಕ್ ಮಾಹಿತಿ ಪ್ರಕಾರ ಪೊಕೊ X8 ಪವರ್ 6.83 ಇಂಚಿನ 1.5K LTPS OLED ಡಿಸ್ಪ್ಲೇ ಹೊಂದಿರಬಹುದು. ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಬೆಂಬಲಿಸುವ ನಿರೀಕ್ಷೆಯಿದೆ. ಹಾಗೆಯೇ Snapdragon 6 Gen 5 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಒಳಗೊಂಡಿರಬಹುದು ಎನ್ನಲಾಗಿದೆ. ಇದರೊಂದಿಗೆ ಅಗತ್ಯ RAM ಹಾಗೂ ಸ್ಟೋರೇಜ್‌ ಆಯ್ಕೆ ನೀಡಲಿದೆ. ಅಲ್ಲದೇ UFS 4.1 ಸ್ಟೋರೇಜ್ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯಿದೆ. ಬಹುದು ಎನ್ನಲಾಗಿದೆ.

ಇನ್ನು ಈ ಫೋನ್‌ ಹಿಂಭಾಗದಲ್ಲಿ 50MP ಸೋನಿ IMX882 ಮುಖ್ಯ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾವೈಡ್ ಕ್ಯಾಮೆರಾ ಪಡೆದಿರುವ ಸಾಧ್ಯತೆಯಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ನೀಡಬಹುದು ಎಂದು ವರದಿಗಳು ಸೂಚಿಸಿವೆ. ಅಲ್ಲದೇ 10,000mAh ಬ್ಯಾಟರಿ 100W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಸಾಧ್ಯತೆಯಿದೆ. ಹಾಗೆಯೇ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳು ಇರಬಹುದು ಎನ್ನಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile