POCO X6 Neo 5G Price Cut in India
POCO X6 Neo 5G Price Cut in India: ಭಾರತದಲ್ಲಿ ನೀವೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಉತ್ತಮ ಸ್ಟೋರೇಜ್ ಮತ್ತು ಡಿಸೆಂಟ್ ಕ್ಯಾಮೆರಾದೊಂದಿಗೆ ಸುಮಾರು 12,000 ರೂಗಳೊಳಗೆ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ 8GB RAM ಮತ್ತು 108MP ಕ್ಯಾಮೆರಾವುಳ್ಳ ಹೊಸ POCO X6 Neo 5G ಸ್ಮಾರ್ಟ್ಫೋನ್ ಇಂದು ಅಮೆಜಾನ್ನಲ್ಲಿ ಪ್ರಸ್ತುತ ₹12,890 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಭರ್ಜರಿ ಆಫರ್ ನಿಮ್ಮ ಕೈಜಾರುವ ಮುಂಚೆ ಒಮ್ಮೆ ಪರಿಶೀಲಿಸಲೇಬೇಕು. ಇದರಲ್ಲಿ ಅಲ್ಲದೆ ಆಯ್ದ ಬ್ಯಾಂಕ್ ಕಾರ್ಡ್ ಮೇಲೆ ಉತ್ತಮ ಡಿಸ್ಕೌಂಟ್ ಸಹ ಪಡೆಯಬಹುದು. ಈ POCO X6 Neo 5G ಸ್ಮಾರ್ಟ್ಫೋನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೋಡೋಣ.
ಮೊದಲಿಗೆ ಈ POCO X6 Neo 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯೊಂದಿಗೆ ಅಮೆಜಾನ್ ನೀಡುತ್ತಿರುವ ಆಫರ್ಗಳ ಬಗ್ಗೆ ನೋಡುವುದಾದರೆ ನಿಮಗೆ ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ಇದನ್ನು ನೀವು ಕೇವಲ ₹12,890 ರೂಗಳಿಗೆ ಖರೀದಿಸಬಹುದು. ಇದರ ಕ್ರಮವಾಗಿ 12GB RAM ಮತ್ತು 256GB ಸ್ಟೋರೇಜ್ ಇದನ್ನು ನೀವು ಕೇವಲ ₹13,999 ರೂಗಳಿಗೆ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. POCO X6 Neo 5G ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 12,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
Also Read: Lava Blaze Duo 5G ಸ್ಮಾರ್ಟ್ಫೋನ್ ಡ್ಯುಯಲ್ ಡಿಸ್ಪ್ಲೇಯೊಂದಿಗೆ ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?
ಈ ಸ್ಮಾರ್ಟ್ಫೋನ್ 6.6 ಇಂಚಿನ ಪೂರ್ಣ HD+ 10bit OLED AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ 1,000 nits ಗರಿಷ್ಠ ಹೊಳಪು ಮತ್ತು 1920Hz PWM ಬ್ರೈಟ್‌ನೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. POCO X6 Neo 5G ಕ್ಯಾಮೆರಾ ವಿಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 108MP ಪ್ರೈಮರಿ ಸೆನ್ಸರ್ f/1.75 ಅಪರ್ಚರ್ ಜೊತೆಗೆ ಬಂದ್ರೆ ಮತ್ತೊಂದು 2MP ಡೆಪ್ತ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಮುಂಭಾಗದ ಶೂಟರ್ ಅನ್ನು ಹೊಂದಿರುತ್ತದೆ.
ಈ ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 6080 ಪ್ರೊಸೆಸರ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗುವ ಸಾಧ್ಯತೆಯಿದೆ. ಮಾಲಿ G57 GPU ನೊಂದಿಗೆ ಜೋಡಿಸಲಾಗಿದೆ. POCO X6 Neo 5G ಮುಂಬರುವ ಸ್ಮಾರ್ಟ್‌ಫೋನ್ LPDDR4x RAM ಮತ್ತು UFS 2.2 ಸ್ಟೋರೇಜ್ ವರೆಗೆ ವೈಶಿಷ್ಟ್ಯಗೊಳಿಸಬಹುದು. ಸ್ಮಾರ್ಟ್‌ಫೋನ್ 33W ವ್ಯಾಟ್‌ಗಳ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರಬಹುದು.