POCO M7 5G First Sale: ನಿವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಸುಮಾರು ₹10,000 ರೂಗಳೊಳಗೆ ಹುಡುಕುತ್ತಿದ್ದರೆ ಫ್ಲಿಪ್‌ಕಾರ್ಟ್‌ನಿಂದ ಈ ಹೊಸ POCO M7 5G ಸ್ಮಾರ್ಟ್ಫೋನ್ ಮೊದಲ ಮಾರಾಟದಲ್ಲಿ ಖರೀದಿಸಲು ಪರಿಗಣಿಸಬಹುದು. ಯಾಕೆಂದರೆ ಈ ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುತ್ತದೆ. POCO M7 5G ಸ್ಮಾರ್ಟ್ಫೋನ್ ಆರಂಭಿಕ 6GB RAM ಜೊತೆಗೆ ಹೆಚ್ಚುವರಿಯ 6GB ವರ್ಚುಯಲ್ RAM ಬಳಸಬಹುದು.
POCO M7 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ 5160mAh ಬ್ಯಾಟರಿಯನ್ನು ಸ್ಮಾರ್ಟ್ಫೋನ್ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ POCO M7 5G ಸ್ಮಾರ್ಟ್ಫೋನ್ ಬೆಲೆ ₹9,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
Also Read: CMF by Nothing Phone 1 ಬೆಲೆ ಕಡಿತ! 6GB RAM ಮತ್ತು 50MP ಕ್ಯಾಮೆರಾದ ಸೂಪರ್ ಫೋನ್ ಹೊಸ ಬೆಲೆ ಎಷ್ಟು?
ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರದಲ್ಲಿ ಲಭ್ಯವಿದ್ದು ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಅನ್ನು ₹9,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಕ್ರಮವಾಗಿ ಇದರ 8GB RAM ಮತ್ತು 128GB ಸ್ಟೋರೇಜ್ ಅನ್ನು ₹10,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ವಿಶೇಷವಾಗಿ ಇದರಲ್ಲಿ ನೀವು ಹೆಚ್ಚುವರಿಯಾಗಿ RAM Turbo ಫೀಚರ್ ಬಳಸಿ 6GB ವರೆಗಿನ ವರ್ಚುವಲ್ RAM ಬಳಸಬಹುದು.
POCO M7 5G ಸ್ಮಾರ್ಟ್ಫೋನ್ 6.88 ಇಂಚಿನ HD+ IPS LCD ಪರದೆಯನ್ನು ಹೊಂದಿದ್ದು 600 ನಿಟ್ಸ್ ಅನ್ನು ಫೋನ್ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಫೋನ್‌ನಲ್ಲಿರುವ ಡಿಸ್ಪ್ಲೇ TUV ಲೋ ಬ್ಲೂ ಲೈಟ್ ಮತ್ತು ಫ್ಲಿಕರ್-ಫ್ರೀ ಪ್ರಮಾಣೀಕೃತವಾಗಿದೆ. ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಸೋನಿ IMX852 ಪ್ರೈಮರಿ ಸೆನ್ಸರ್ ಮತ್ತು ಅನಿರ್ದಿಷ್ಟ ಸೆಕೆಂಡರಿ ಸೆನ್ಸರ್ ಹೊಂದಿದೆ. ಇದರ ಮುಂಭಾಗದ ಕ್ಯಾಮೆರಾ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮೆಗಾಪಿಕ್ಸೆಲ್ ಸೆನ್ಸರ್ ಸಹ ಹೊಂದಿದೆ.
POCO M7 5G ಸ್ಮಾರ್ಟ್‌ಫೋನ್ 4nm ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್‌ನೊಂದಿಗೆ 8GB ವರೆಗಿನ RAM ಅನ್ನು ಹೊಂದಿದೆ. POCO M7 5G ಸ್ಮಾರ್ಟ್‌ಫೋನ್ 18W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,160 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಬಾಕ್ಸ್‌ನಲ್ಲಿ 33W ಅಡಾಪ್ಟರ್ ಅನ್ನು ಸೇರಿಸಲಾಗಿದೆ. POCO M7 2 ವರ್ಷಗಳ OS ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ನಿಯಮಿತ ಭದ್ರತಾ ಪ್ಯಾಚ್‌ಗಳನ್ನು ಪಡೆಯುವುದು ದೃಢಪಡಿಸಲಾಗಿದೆ.