POCO M6 Plus 5G with 108mp camera
ಚೀನಾದ ಸ್ಮಾರ್ಟ್‌ಫೋನ್ ಕಂಪನಿ ಪೊಕೊ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಬೆಲೆಗಳಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ. ನಿಮಗೊಂದು ಜಬರ್ದಸ್ತ್ ಫೀಚರ್ಗಳೊಂದಿಗೆ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಈ POCO M6 Plus 5G ಸ್ಮಾರ್ಟ್ಫೋನ್ ಅತ್ಯುತ್ತಮ ಆಯ್ಕೆಯಾಗಲಿದೆ. ಅಲ್ಲದೆ ನೀವು ಈ ಬ್ರಾಂಡ್‌ನ 5G ಸ್ಮಾರ್ಟ್ಫೋನ್ ರೂ. 10,000 ಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದು. ಈ POCO M6 Plus 5G ಸ್ಮಾರ್ಟ್ಫೋನ್ ಬರೋಬ್ಬರಿ 108MP ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. POCO M6 Plus 5G ಲಭ್ಯವಿರುವ ಡೀಲ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಪ್ಲಿಪ್‌ಕಾರ್ಟ್‌ನಲ್ಲಿ POCO M6 Plus 5G ಮೇಲೆ ವಿಶೇಷ ರಿಯಾಯಿತಿಯ ಪ್ರಯೋಜನವನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್ಫೋನ್ ಪ್ರೀಮಿಯಂ ಗ್ಲಾಸ್ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ಬಜೆಟ್ ವಿಭಾಗದಲ್ಲಿ ಅತ್ಯಂತ ಪವರ್ಫುಲ್ ಆಯ್ಕೆಗಳಲ್ಲಿ ಒಂದಾಗಿದೆ. 5G ಸಂಪರ್ಕದಿಂದಾಗಿ ಇದರಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಪ್ರವೇಶಿಸಬಹುದು. ಈ ಫೋನ್ ಅತ್ಯುತ್ತಮ 108MP ಸೆನ್ಸರ್ಗಳೊಂದಿಗೆ ಕ್ಯಾಮೆರಾ ಕಾರ್ಯಕ್ಷಮತೆಯಲ್ಲಿಯೂ ಪ್ರಭಾವ ಬೀರುತ್ತದೆ.
ಪೊಕೊ ಸಾಧನವನ್ನು ಪ್ಲಿಪ್‌ಕಾರ್ಟ್ ನಲ್ಲಿ ಆರಂಭಿಕ ಬೆಲೆ 10,080 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ ಈ ಸ್ಮಾರ್ಟ್ಫೋನ್ ಮೇಲೆ 5 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು ನಂತರ ಅದರ ಬೆಲೆ 10,000 ರೂ.ಗಿಂತ ಕಡಿಮೆ ಇರುತ್ತದೆ. ಹಳೆಯ ಫೋನ್‌ಗೆ ಬದಲಾಗಿ ಈ ಫೋನ್‌ನಲ್ಲಿ ಗರಿಷ್ಠ 8,100 ರೂ.ಗಳ ವಿನಿಮಯ ರಿಯಾಯಿತಿಯನ್ನು ಪಡೆಯಬಹುದು ಇದರ ಮೌಲ್ಯವು ಹಳೆಯ ಸ್ಮಾರ್ಟ್ಫೋನ್ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ. POCO M6 Plus 5G ಗ್ರಾಫೈಟ್ ಬ್ಲಾಕ್, ಐನ್ ಸಿಲ್ವರ್, ಮಿಸ್ಟ್ರಿ ಲ್ಯಾವೆಂಡರ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.
ಇದನ್ನೂ ಓದಿ: Airtel Perplexity Pro: ಏರ್ಟೆಲ್ ಗ್ರಾಹಕರಿಗೆ 1 ವರ್ಷಕ್ಕೆ ಉಚಿತ ಪರ್ಪ್ಲೆಕ್ಸಿಟಿ ಪ್ರೋ ಉಚಿತ! ಪಡೆಯೋದು ಹೇಗೆ?
POCO M6 Plus 5G ಒಂದು ಶಕ್ತಿಶಾಲಿ ಬಜೆಟ್ ಸ್ಮಾರ್ಟ್ ಫೋನ್ ಆಗಿದ್ದು ಇದು 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದನ್ನು 1TB ವರೆಗೆ ವಿಸ್ತರಿಸಬಹುದು. ಇದು 6.79 ಇಂಚಿನ ಪೂರ್ಣ HD+ ಡಿಸ್ಟ್ರೇಯನ್ನು ಹೊಂದಿದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದು ಹಿಂಭಾಗದಲ್ಲಿ 108MP ಮುಖ್ಯ ಮತ್ತು 2MP ಸೆಕೆಂಡರಿ ಸೆನ್ಸರ್‌ನೊಂದಿಗೆ ಪ್ರೈಮರಿ ಕ್ಯಾಮೆರಾವನ್ನು ಮತ್ತು 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. POCO M6 Plus 5G ಫೋನ್ 5030mAh ಬ್ಯಾಟರಿ ಮತ್ತು ಸ್ವಾಪ್‌ಡ್ರಾಗನ್ 4 Gen2 AE ಪ್ರೊಸೆಸರ್ ಅನ್ನು ಹೊಂದಿದೆ. ಇದು ಉತ್ತಮ ಕಾರ್ಯಕ್ರಮತೆ ಮತ್ತು ದೀರ್ಘ ಬ್ಯಾಕಪ್ ಅನ್ನು ಭರವಸೆ ನೀಡುತ್ತದೆ.