POCO F7 India Launch date confirm
POCO F7 Launch: ಭಾರತದಲ್ಲಿ ಪೊಕೊ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ ಪ್ರೀಮಿಯಂ ಮತ್ತು ಪವರ್ಫುಲ್ 5G ಸ್ಮಾರ್ಟ್ಫೋನ್ ಬಿಡುಗಡೆಯನ್ನು ಘೋಷಿಸಿದೆ. ಭಾರತದಲ್ಲಿ ಪೊಕೊ ಮುಂದಿನ ವಾರ POCO F7 5G ಸ್ಮಾರ್ಟ್ಫೋನ್ ಅನ್ನು 24ನೇ ಜೂನ್ 2025 ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಬಗ್ಗೆ ಈಗಾಗಲೇ ಕಂಪನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಸ್ಮಾರ್ಟ್ಫೋನ್ ಒಂದಿಷ್ಟು ಮಾಹಿತಿಯನ್ನು ಸಹ ಅಪ್ಡೇಟ್ ನೀಡಿದೆ. ಹಾಗಾದರೆ ಈವರಗೆ ನಮಗೆ POCO F7 5G ಸ್ಮಾರ್ಟ್ಫೋನ್ ಬಗ್ಗೆ ತಿಳಿದಿರುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಭಾರತದಲ್ಲಿ ಈ ಮುಂಬರಲಿರುವ POCO F7 5G ಸ್ಮಾರ್ಟ್ಫೋನ್ ಮುಂದಿನ ವಾರ ಅಂದ್ರೆ ಇದೆ 24ನೇ ಜೂನ್ 2025 ರಂದು ಭಾರತೀಯ ಸಮಯದಲ್ಲಿ ಸಂಜೆ 5:30 ಗಂಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ ಎನ್ನುವ ಪೋಸ್ಟ್ ಸಹ ಅಪ್ಡೇಟ್ ಮಾಡಿದೆ. ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟಕ್ಕೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಪೊಕೊ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಸ್ಮಾರ್ಟ್ಫೋನ್ ಒಂದಿಷ್ಟು ಮಾಹಿತಿಯನ್ನು ಸಹ ಅಪ್ಡೇಟ್ ನೀಡಿದೆ. ಇದರ ಲೈವ್ ಅನ್ನು ನೀವು ಪೊಕೊ ಯುಟ್ಯೂಬ್ ಮತ್ತು ಅಧಿಕೃತ ಚಾನಲ್ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಬಹುದು. ಪ್ರಸ್ತುತ ಈ POCO F7 5G ಸ್ಮಾರ್ಟ್ಫೋನ್ ಟ್ವಿಟ್ಟರ್‌ನಲ್ಲಿ #POCOF7 #SuperSpeedUnleashed #POCOF7Launch ಕೀವರ್ಡ್ ಮೂಲಕ ಟ್ರೆಂಡ್ ಆಗುತ್ತಿದೆ.
Also Read: BSNL 40 Days Plan: ಬಿಎಸ್ಎನ್ಎಲ್ ಬಿಟ್ರೆ ಬೇರೆಲ್ಲೂ ಸಿಗೋಲ್ಲ! ಕೇವಲ 198 ರೂಗಳಿಗೆ ಡೇಟಾವನ್ನು 40 ದಿನಗಳಿಗೆ ಲಭ್ಯ!
POCO F7 ಸ್ಮಾರ್ಟ್ ಫೋನ್ ಈ ಫೋನ್ 6.83 ಇಂಚಿನ 1.5K AMOLED ಡಿಸ್ಟ್ರೇಯನ್ನು 120Hz ರಿಫ್ರೆಶ್ ದರ ಮತ್ತು 3,200 nits ಗರಿಷ್ಠ ಬೈಟ್‌ನೆಸ್‌ನೊಂದಿಗೆ ಬರುವ ನಿರೀಕ್ಷೆಗಳಿವೆ. Snapdragon® 8s Elite ಚಿಪ್‌ಸೆಟ್‌ನಿಂದ LPDDR5X RAM ಮತ್ತು UFS 4.1 ಸ್ಟೋರೇಜ್‌ನೊಂದಿಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮಗೆ ಆಂಡ್ರಾಯ್ಡ್ 15 ಆಧಾರದ ಮೇರೆಗೆ ನಡೆಯುವುದನ್ನು ಸಹ ಕಂಪನಿ ಮಾಹಿತಿ ನೀಡಿದೆ.
POCO F7 ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಡುವುದಾದರೆ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಲಿದ್ದು ಮೊದಲಿಗೆ 50MP ಪ್ರೈಮರಿ ಕ್ಯಾಮೆರಾ Sony IMX882 ಸೆನ್ಸರ್ ಜೊತೆಗೆ ಬರುತ್ತದೆ. ಅಂದರೆ ಇದರ ಕ್ಯಾಮೆರಾ ಸಿಕ್ಕಾಪಟ್ಟೆ ಸೂಪರ್ ಆಗಲಿದೆ. ಮತ್ತೊಂದು 8MP ಅಲ್ಪಾವೈಡ್ ಲೆನ್ಸ್ ಅನ್ನು ಹೊಂದಿರುತ್ತದೆ. ಅಲ್ಲದೆ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 20MP ಸೆಲ್ಪಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. ಕೊನೆಯದಾಗಿ ಈ POCO F7 ಸ್ಮಾರ್ಟ್ ಫೋನ್ ಬೃಹತ್ 7550mAh ಬ್ಯಾಟರಿಯನ್ನು ಸುಮಾರು 90W ಹೈಪರ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದುವ ನಿರೀಕ್ಷೆ.