ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ Poco C85x 5G ಮೊಬೈಲ್‌ ಬಿಡುಗಡೆ! ಬಿಗ್‌ ಬ್ಯಾಟರಿ ಸೌಲಭ್ಯ ಇದೆ

HIGHLIGHTS

ಪೊಕೊ C85x 5G ಮೊಬೈಲ್‌ ಮಾರ್ಚ್ 14 ರಿಂದ ಭಾರತದಲ್ಲಿ ಮಾರಾಟ ಪ್ರಾರಂಭಿಸಲಿದೆ

ಪೊಕೊ C85x 5G ಫೋನ್‌ 32MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ

ಪೊಕೊ C85x 5G ಬ್ಲ್ಯಾಕ್‌, ಗೋಲ್ಡ್‌ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯ

ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ Poco C85x 5G ಮೊಬೈಲ್‌ ಬಿಡುಗಡೆ! ಬಿಗ್‌ ಬ್ಯಾಟರಿ ಸೌಲಭ್ಯ ಇದೆ

ಪೊಕೊ ಕಂಪನಿಯ ಬಹುನಿರೀಕ್ಷಿತ Poco C85x 5G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 10 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಿದೆ. ಅಗ್ಗದ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಮೊಬೈಲ್‌ Unisoc T8300 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯವನ್ನು ಹೊಂದಿರುವ ಜೊತೆಗೆ ಈ ಮೊಬೈಲ್‌ 6,300mAh ಬ್ಯಾಕ್‌ಅಪ್‌ ಒದಗಿಸುವ ಬ್ಯಾಟರಿ ಸಪೋರ್ಟ್‌ ಪಡೆದಿದೆ. ಅಲ್ಲದೇ ಇದು 32MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಫೋನ್ ಬ್ಲ್ಯಾಕ್‌, ಗೋಲ್ಡ್‌ ಹಾಗೂ ಗ್ರೀನ್‌ ಕಲರ್‌ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಇನ್ನು ಪೊಕೊ C85x 5G ಮೊಬೈಲ್‌ ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Amazon EPL 2026 ಸೇಲ್‌: Motorola g57 power 5G ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ

Poco C85x 5G ಮೊಬೈಲ್‌ ಬೆಲೆ ಮತ್ತು ಲಭ್ಯತೆ

ಪೊಕೊ ಸಂಸ್ಥೆಯ ನೂತನ ಪೊಕೊ C85x 5G ಮೊಬೈಲ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ 4GB RAM + 64GB ಸ್ಟೋರೇಜ್ ಆವೃತ್ತಿಯ ಬೆಲೆ 10,999 ರೂಗಳು ಆಗಿದೆ. ಇದರ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 14,499 ರೂಗಳು ಆಗಿದೆ. ಇನ್ನು ಇದರ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 11,999 ರೂಗಳು ಆಗಿದೆ. ಈ ನೂತನ ಮೊಬೈಲ್‌ ಇದೇ ಮಾರ್ಚ್ 14 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ ವೆಬ್‌ಸೈಟ್‌ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನ್ ಬ್ಲ್ಯಾಕ್‌, ಗೋಲ್ಡ್‌ ಹಾಗೂ ಗ್ರೀನ್‌ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

Poco C85x 5G

ಪೊಕೊ C85x 5G ಫೀಚರ್ಸ್‌ ಹೀಗಿವೆ

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪೊಕೊ C85x 5G ಮೊಬೈಲ್ 6.9 ಇಂಚಿನ HD+ ಅಡಾಪ್ಟಿವ್‌ಸಿಂಕ್ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 720×1,600 ಪಿಕ್ಸಲ್‌ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದ್ದು 800 nits ಬ್ರೈಟ್ನೆಸ್‌ ಸೌಲಭ್ಯ ನೀಡಲಾಗಿದೆ. ಈ ಫೋನ್ Unisoc T8300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಜೊತೆಗೆ ಇದು ಆಂಡ್ರಾಯ್ಡ್ 16 ಜೊತೆಗೆ HyperOS 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್‌ ಬೆಂಬಲದ ಮೂಲಕ ಬಾಹ್ದಯ ಸ್ಟೋರೇಜ್‌ ಅನ್ನು 2TB ವರೆಗೆ ವಿಸ್ತರಿಸುವ ಅವಕಾಶ ಇದೆ.

ಪೊಕೊ C85x 5G ಮೊಬೈಲ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 32MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್‌ 6,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 15W ವೈರ್ಡ್ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಇದರೊಂದಿಗೆ 7.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲ ಸಹ ಹೊಂದಿದೆ. ಅಲ್ಲದೇ ಇದು 5G, 4G LTE, Wi-Fi 5, ಬ್ಲೂಟೂತ್ 5.4, GPS, 3.5mm ಆಡಿಯೊ ಜ್ಯಾಕ್ ಹಾಗೂ USB ಟೈಪ್-C ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo