POCO C85 5G officially launched
ಚೀನೀ ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕ ಸಂಸ್ಥೆಯಾಗಿರುವ ಪೊಕೋ (POCO) ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಹೊಸ ಮತ್ತು ಬಜೆಟ್ ಬೆಲೆಯ ಲೇಟೆಸ್ಟ್ POCO C85 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟಕ್ಕೆ ಲಭ್ಯವಾಗಲಿದೆ. ಇದರಲ್ಲಿ Dimensity 6300 ಪ್ರೊಸೆಸರ್ ಮತ್ತು 6000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದ್ದು ಈ ಸ್ಮಾರ್ಟ್ಫೋನ್ ಆರಂಭಿಕ ಬ್ಯಾಂಕ್ ಆಫರ್ ಜೊತೆ ₹10,999 ರೂಗಳಿಗೆ ಲಭ್ಯವಾಗಲಿದೆ.
POCO C85 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹11,999 ರೂಗಳಿಗೆ ಮತ್ತು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹12,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹14,499 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ POCO C85 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 10,999 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು. ಈ POCO C85 5G ಸ್ಮಾರ್ಟ್ಫೋನ್ 16ನೇ ಡಿಸೆಂಬರ್ 2025 ರಂದು ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್ಕಾರ್ಟ್ ಮತ್ತು ಪೊಕೊ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Also Read: Aadhaar Photocopy: ಇನ್ಮೇಲೆ ಆಧಾರ್ ಫೋಟೋಕಾಪಿ ನೀಡುವ ಅಗತ್ಯವಿಲ್ಲ! UIDAI ಈ ನಿಯಮ ತರಲು ಕಾರಣವೇನು?
POCO C85 5G ಸ್ಮಾರ್ಟ್ಫೋನ್ 6.9 ಇಂಚಿನ HD+ (1600× 720 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. POCO C85 5G ಫೋನ್ ಕಾಮೆರದಲ್ಲಿ 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ MediaTek Dimensity 6300 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 15.0.2 ಬರುತ್ತದೆ.
POCO C85 5G ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ POCO C85 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 2 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.